ಮಹಾರಾಷ್ಟ್ರ ಆಖಾಡದಲ್ಲಿ ಟೀಮ್ ಕರ್ನಾಟಕ

ಪ್ರಗತಿವಾಹಿನಿ ಸುದ್ದಿ, ಸೊಲ್ಲಾಪುರ – ಮಹಾರಾಷ್ಟ್ರ ಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಕರ್ನಾಟಕದಿಂದ ಸ್ಟಾರ್ ಪ್ರಚಾರಕರು ಲಗ್ಗೆ ಇಟ್ಟಿದ್ದಾರೆ.

ಬೆಳಗಾವಿ ಬಿಜೆಪಿ ನಾಯಕ ಕಿರಣ ಜಾಧವ ನೇತೃತ್ವದ ತಂಡ ಅಲ್ಲಿ ಗ್ರೌಂಡ್ ವರ್ಕ್ ನಲ್ಲಿ ನಿರತವಾಗಿದೆ. ಸೋಮವಾರ ಮಹಾರಾಷ್ಟ್ರದ ಸಹಕಾರ, ಪ್ರವಾಹ ಪರಿಹಾರ ಸಚಿವ ಸುಭಾಷ್ ದೇಶಮುಖ ಮತ್ತು  ಮಹಾರಾಷ್ಟ್ರ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ಅವಿನಾಶ ಮಹಾಗಾಂವ್ಕರ್ ಜೊತೆ ಚರ್ಚಿಸಿದ ಕಿರಣ ಜಾಧವ, ಕರ್ನಾಟಕದಿಂದ ಕರೆಸಬೇಕಾದ ನಾಯಕರ ಪಟ್ಟಿಯನ್ನು ಅಂತಿಮಗೊಳಿಸಿದರು. ಕರ್ನಾಟಕದ ವಿಧಾನಪರಿಷತ್ ಸದಸ್ಯ ನಾರಾಯಣಸಾ ಬಾಂಡಗೆ ಸಹ ಇದ್ದರು.

Home add -Advt

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಮಾಜಿ ಮುಖ್ಯಮಂತ್ರಿ, ಹಾಲಿ ಸಚಿವ ಜಗದೀಶ ಶೆಟ್ಟರ್, ಸಚಿವರಾದ ಕೆ.ಎಸ್.ಈಶ್ವರಪ್ಪ, ಶಶಿಕಲಾ ಜೊಲ್ಲೆ, ಕೇಂದ್ರ ಸಚಿವ ಸುರೇಶ ಅಂಗಡಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಮೊದಲಾದವರು ಮಹಾರಾಷ್ಟರ ಅಖಾಡದಲ್ಲಿದ್ದಾರೆ.

ಸೊಲ್ಲಾಪುರ, ದಕ್ಷಿಣ, ಸೊಲ್ಲಾಪುರ ಉತ್ತರ, ಅಕ್ಕಲಕೋಟ, ಫಂಡರಾಪುರ-ಮಂಗಲವೇಡ, ತುಳಜಾಪುರ, ಉಸ್ಮಾನಾಬಾದ್, ಜತ್, ಮೀರಜ್ ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚಾಗಿ ಕರ್ನಾಟಕದ ನಾಯಕರು ಪ್ರಚಾರ ಮಾಡಲಿದ್ದಾರೆ.

ಯಡಿಯೂರಪ್ಪ ಮಂಗಳವಾರ ಬೆಳಗಾವಿಗೆ – ಮಹಾರಾಷ್ಟ್ರ ಪ್ರಚಾರದಲ್ಲಿ ಲಕ್ಷ್ಮಣ ಸವದಿ

Related Articles

Back to top button