Latest

ಅಪ್ರಾಪ್ತರ ಜೊತೆ ಅಪ್ರಾಪ್ತೆಯರು ಪರಾರಿ; ಪತ್ತೆಯಾಗಿದ್ದೆಲ್ಲಿ ಗೊತ್ತೆ?

ಪ್ರಗತಿವಾಹಿನಿ ಸುದ್ದಿ; ತುಮಕೂರು: ಶವಸಂಸ್ಕಾರಕ್ಕೆಂದು ಬಂದ ಇಬ್ಬರು ಅಪ್ರಾಪ್ತ ಬಾಲಕಿಯರು ಅಪ್ರಾಪ್ತ ಬಾಲಕರ ಜತೆ ಪರಾರಿಯಾಗಿರುವ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ದೊಡ್ಡಸಾಗ್ಗೆರೆಯಲ್ಲಿ ಬೆಳಕಿಗೆ ಬಂದಿದೆ.

ಸಂಬಂಧಿಕರ ಮನೆಗೆ ಶವಸಂಸ್ಕಾರಕ್ಕೆಂದು ಪೋಷಕರ ಜೊತೆ ಬಂದಿದ್ದ 16 ರ್ಷದ ಬಾಲಕಿ ಹಾಗೂ 14 ವರ್ಷದ ಬಾಲಕಿಯರು ಶಿವಗಂಗೆಯ ಸುಧಾಕರ್ ಹಾಗೂ ಬೆಂಗಳೂರು ದಾಬಸ್ ಪೇಟೆಯ ಸೋಂಪುರದ ಅಪ್ರಾಪ್ತ ಬಾಲಕನ ಜೊತೆ ಪರಾರಿಯಾಗಿದ್ದಾರೆ. ಈ ಕುರಿತು ಪೋಷಕರು ಕೋಳಾಲ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಿಸಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪಿಎಸ್ ಐ ಮಹಾಲಕ್ಷ್ಮಿ ನೇತೃತ್ವದಲ್ಲಿ ಹುಡುಕಾಟ ನಡೆಸಿದ್ದು, ಚಿಕ್ಕಮಗಳೂರಿನ ಬೇಲೂರು ಸಮೀಪದ ಕಾಫಿ ಎಸ್ಟೇಟ್ ನಲ್ಲಿ ನಾಲ್ವರನ್ನೂ ವಶಕ್ಕೆ ಪಡೆದಿದ್ದಾರೆ. ಪೋಷಕರನ್ನು ಯಾಮಾರಿಸಿ ನಾಲ್ವರು ಪರಾರಿಯಾಗಿದ್ದರು ಎಂದು ತಿಳಿದುಬಂದಿದೆ.

ಬಾಲಿವುಡ್ ಬೆಡಗಿ ನೋರಾ ಫತೇಹಿಗೆ ಕೊರೊನಾ ಸೋಂಕು

Home add -Advt

Related Articles

Back to top button