Kannada NewsKarnataka NewsLatest
ತಹಸಿಲ್ದಾರ ಸಂಗಮೇಶ ಬಾಡಗಿ ಹಠಾತ್ ನಿಧನ; ಮೂಲತಃ ಅಥಣಿ ತಾಲೂಕಿನವರು, ಸಧ್ಯ ಮುಧೋಳದಲ್ಲಿ ಕೆಲಸ
ಪ್ರಗತಿವಾಹಿನಿ ಸುದ್ದಿ, ಮುಧೋಳ – ಮುಧೋಳ ತಹಸಿಲ್ದಾರರಾಗಿದ್ದ ಸಂಗಮೇಶ ಬಾಡಗಿ ಹಠಾತ್ ನಿಧನರಾಗಿದ್ದಾರೆ. ಅವರಿಗೆ 38 ವರ್ಷ ವಯಸ್ಸಾಗಿತ್ತು.
ಶುಕ್ರವಾರ ಬೆಳಗಿನಜಾವ ಮುಧೋಳದ ತಮ್ಮ ಮನೆಯಲ್ಲೇ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ.
2 ವರ್ಷದಿಂದ ಮುಧೋಳದಲ್ಲಿ ತಹಸಿಲ್ದಾರರಾಗಿದ್ದ ಅವರು ಮೂಲತಃ ಅಥಣಿ ತಾಲೂಕಿನ ಜನವಾಡದವರು. ನಿನ್ನೆ ಹೆಂಡತಿ ಮತ್ತು ಮಗಳನ್ನು ಜನವಾಡದಲ್ಲಿ ಬಿಟ್ಟು ವಾಪಸ್ ಮುಧೋಳಕ್ಕೆ ಬಂದು ರಾತ್ರಿ 2 ಗಂಟೆಗ ತಮ್ಮ ಮನೆಯಲ್ಲಿ ಮಲಗಿದ್ದರು. ಆದರೆ ರಾತ್ರಿಯೇ ಅವರಿಗೆ ಹೃದಯಾಘಾತವಾಗಿದೆ.
ಅವರ ಮಿತ್ರರೊಬ್ಬರು ಸಹ ಮನೆಯಲ್ಲಿದ್ದರು.
ಮುಖ್ಯಮಂತ್ರಿಗಳ ಎದುರೇ ಆತ್ಮಹತ್ಯೆಗೆ ಯತ್ನಿಸಿದ ವೃದ್ಧ
ಬಿಜೆಪಿ ಕಾರ್ಯಕಾರಿಣಿ ಸಭೆ ದಿಢೀರ್ ಮುಂದೂಡಿಕೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ