
ಪ್ರಗತಿವಾಹಿನಿ ಸುದ್ದಿ ಹೈದರಾಬಾದ್: ತೆಲುಗಿನ ಖ್ಯಾತ ಚಿತ್ರ ಸಾಹಿತಿ ಸಿರಿವೆನ್ನೆಲ ಸೀತಾರಾಮಶಾಸ್ತ್ರಿ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಅವರಿಗೆ 66 ವರ್ಷ ವಯಸ್ಸಾಗಿತ್ತು.
ಕ್ಯಾನ್ಸರ್ ನಿಂದ ಬಳಲುತ್ತಿದ್ದ ಸೀತಾರಾಮಶಾಸ್ತ್ರಿ ಎರಡು ದಿನಗಳ ಹಿಂದೆ ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಾಸ್ತ್ರಿ ಇಂದು ಸಂಜೆ ಕೊನೆಯುಸಿರೆಳೆದಿದ್ದಾರೆ.
165ಕ್ಕೂ ಹೆಚ್ಚು ಸಿನಿಮಾಗಳಿಗೆ ಹಾಡು ಬರೆದಿದ್ದ ಸಿರಿವೆನ್ನಲ 3000ಕ್ಕೂ ಹೆಚ್ಚು ಗೀತ ರಚನೆ ಮಾಡಿದ್ದರು. 11 ನಂದಿ ಅವಾರ್ಡ್, 4 ಫಿಲ್ಮ್ ಫೇರ್ ಅವಾರ್ಡ್ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಹಿರಿಯ ಸಾಹಿತಿಯ ಅಗಲಿಕೆಗೆ ಇಡೀ ತೆಲುಗು ಚಿತ್ರರಂಗ ಕಂಬನಿ ಮಿಡಿದಿದೆ.
ಬೆಳಗಾವಿ ದಂತ ವೈದ್ಯಕೀಯ ಕಾಲೇಜಿಗೂ ಕಾಲಿಟ್ಟ ಕೊರೊನಾ ಸೋಂಕು