ಮುಗಳಖೋಡ: ಶ್ರೀ ಶಿರಡಿ ಸಾಯಿಬಾಬಾರ ಮೂರ್ತಿ ಪ್ರತಿಷ್ಠಾಪನಾ ದಶಮಾನೋತ್ಸವದ
ಅಂಗವಾಗಿ ನೂತನ ಸಾಯಿಬಾಬಾ ಮಂದಿರ ಉದ್ಘಾಟನೆ ಹಾಗೂ ಕಳಸಾರೋಹಣ ನಿಮಿತ್ತ ಪಟ್ಟಣದ ಶ್ರೀ ಚನ್ನಬಸವೇಶ್ವರ ವಿದ್ಯಾವರ್ಧಕ ಸಂಘದ ಮಹಾವಿದ್ಯಾಲಯದ ಆವರಣದಲ್ಲಿ ಪಟ್ಟಣದಲ್ಲಿ ವನಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಬೆಳಗಿನ ಜಾವ 7 ಘಂಟೆಗೆ ಹೋಮ, ಹವನ ಕಾರ್ಯಕ್ರಮಗಳು ಜರುಗಿದವು. ಆಜಾದಿ ಕಾ ಅಮೃತ್ ಮಹೋತ್ಸವ ದಿನ, ಪದವಿಪೂರ್ವ ಶಿಕ್ಷಣ ಇಲಾಖೆ ಬೆಂಗಳೂರು, ಶ್ರೀ ಚನ್ನಬಸವೇಶ್ವರ ವಿದ್ಯಾವರ್ಧಕ ಸಂಘ, ರಾಯಬಾಗ ಅರಣ್ಯ ಇಲಾಖೆ ಹಾಗೂ ಸ್ಥಳೀಯ ಪುರಸಭೆಯ, ಸಂಯುಕ್ತ ಆಶ್ರಯದಲ್ಲಿ ‘ಹಸಿರೇ ಉಸಿರು’ ಎಂಬ ಶೀರ್ಷಿಕೆ ಅಡಿಯಲ್ಲಿ ವನ ಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.
ಪಟ್ಟಣದ ಪುರಸಭೆ ಆವರಣ, ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ, ಗರಡಿ ಮನೆ, ಶ್ರೀ ಕರಿಸಿದ್ದೇಶ್ವರ ದೇವಸ್ಥಾನ, ಶ್ರೀ ಮಲ್ಲಿಕಾರ್ಜುನ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಸೇರಿದಂತೆ ಪಟ್ಟಣದ ವಿವಿಧ ಕಡೆಗಳಲ್ಲಿ ಸಸಿಗಳನ್ನು ನೀಡಲಾಯಿತು. ಶ್ರೀ ಚನ್ನಬಸವೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗೂ ಪುರಸಭೆ ಸದಸ್ಯ ಸಂಜಯ ಕುಲಿಗೋಡ ಸಸಿಗೆ ನೀರಿರುವ ಮೂಲಕ ಮನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಾ. ಸಿ.ಬಿ. ಕುಲಿಗೋಡ, ಚನ್ನಬಸವೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗೂ ಪುರಸಭೆ ಸದಸ್ಯ ಸಂಜಯ ಕುಲಿಗೋಡ, ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ ತಿಮ್ಮಾನಿ, ಪ್ರಾಚಾರ್ಯ ಎಂ.ಕೆ. ಬಿಳಗಿ, ಪ್ರಕಾಶ ಕಂಬಾರ, ಮುಖ್ಯೋಪಾಧ್ಯಾಯ ಎಸ್ ಎಸ್ ಮಧಾಳೆ, ಪುರಸಭೆ ಸದಸ್ಯ ಮಹಾವೀರ ಕುರಾಡೆ, ಶಿಕ್ಷಕರಾದ ಚಂದು ಲಮಾಣಿ, ಎನ್. ಆರ್. ಕೊಣ್ಣೂರ, ಆರ್. ಎಂ. ಹಳ್ಳೂರ, ಬಿ.ಎ. ಕೊಪ್ಪದ, ಯು. ಆರ್. ಇದರಗುಚ್ಚಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ನನ್ನ ಉತ್ಸವ ಮಾಡೋದು ಬೇಡ, ಕಾಂಗ್ರೆಸ್, ದೇಶದ ಉತ್ಸವ ಮಾಡಬೇಕು: ಡಿ.ಕೆ. ಶಿವಕುಮಾರ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ