ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಸಂತ್ರಸ್ತರಿಗೆ ತಾತ್ಕಾಲಿಕ ಚೆಕ್ ವಿತರಣೆ ಆರಂಭ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ-
ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹ ಬಂದು ಸುಮಾರು 10 ದಿನ ಕಳೆದಿದೆ. ಸಂತ್ರಸ್ತರಿಗೆ ಪರಿಹಾರ ಕೇಂದ್ರಗಳಲ್ಲಿ ತಾತ್ಕಾಲಿಕ ವಾಸ್ತವ್ಯ ವ್ಯವಸ್ಥೆ ಮಾಡಲಾಗಿದೆ. ಈಗ ಪ್ರವಾಹ ಇಳಿದರೂ ಸಂತ್ರಸ್ತರು ತಕ್ಷಣ ಮನೆಗಳಿಗೆ ತೆರಳುವ ಸ್ಥಿತಿಯಲ್ಲಿಲ್ಲ. ಮನೆಗೆ ಹೋದರೂ ಬಟ್ಟೆ, ಪಾತ್ರೆ ಮೊದಲಾದ ತುರ್ತು ಅವಶ್ಯಕ ವಸ್ತುಗಳಿಲ್ಲ. ಅವೆಲ್ಲ ನೀರಿನಲ್ಲಿ ಕೊಚ್ಚಿಹೋಗಿವೆ.
ಈ ಹಿನ್ನೆಲೆಯಲ್ಲಿ ಸರಕಾರ ಸಂತ್ರಸ್ತರಿಗೆ ತುರ್ತು ಅವಶ್ಯಕತೆಗಳಿಗಾಗಿ ತಾತ್ಕಾಲಿಕ ಪರಿಹಾರ ವಿತರಣೆಗೆ ಆದೇಶ ಹೊರಡಿಸಿದೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಸಂತ್ರಸ್ತರಿಗೆ ತಾತ್ಕಾಲಿಕ ಪರಿಹಾರ ವಿತರಣೆ ಆರಂಭಿಸಲಾಗಿದೆ. ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಸೂಚನೆಯ ಮೇರೆಗೆ ಅಧಿಕಾರಿಗಳು ಚೆಕ್ ಸಿದ್ಧಪಡಿಸಿದ್ದು, ಸಂತ್ರಸ್ತರಿಗೆ ಅವುಗಳನ್ನು ಹಸ್ತಾಂತರಿಸಲಾಗುತ್ತಿದೆ.
ಗುರುವಾರ ಹಿರೇ ಬಾಗೇವಾಡಿ ಗ್ರಾಮದಲ್ಲಿ ಪ್ರವಾಹ ಪೀಡಿತ ನಿರಾಶ್ರಿತರಿಗೆ ಪರಿಹಾರದ ಚೆಕ್ ಗಳನ್ನು ಹಸ್ತಾಂತರಿಸಲಾಯಿತು. ಸುಮಾರು 26 ಸಂತ್ರಸ್ತರಿಗೆ ಮೊದಲ ಹಂತದಲ್ಲಿ ಚೆಕ್ ನೀಡಲವಾಯಿತು. ಕಾಂಗ್ರೆಸ್ ಮುಖಂಡ ಚನ್ನರಾಜ ಹಟ್ಟಿಹೊಳಿ ಉಪಸ್ಥಿತಿಯಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಚೆಕ್ ವಿತರಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ತಾಲೂಕ ಪಂಚಾಯತ್ ಸದಸ್ಯರಾದ ಗೌರವ್ವ ಪಾಟೀಲ, ಗ್ರಾಮ ಸೇವಕ ನಿಂಗಪ್ಪ ರೊಟ್ಟಿ, ದರ್ಗಾ ಅಜ್ಜನವರಾದ ಅಶ್ರಫ್ ಪೀರ್ ಖಾದ್ರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾದ ಸಿ ಸಿ ಪಾಟೀಲ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಮಹಾಂತೇಶ ಮತ್ತಿಕೊಪ್ಪ, ಸುರೇಶ ಇಟಗಿ, ಉಳವಪ್ಪ ರೊಟ್ಟಿ, ಫಕೀರಗೌಡ ಪಾಟೀಲ, ಪ್ರಕಾಶ ಜಪ್ತಿ, ಪ್ರಶಾಂತ ದೇಸಾಯಿ, ಅನಿಲ ಪಾಟೀಲ, ಅಡಿವೇಶ ಇಟಗಿ, ಶ್ರೀಕಾಂತ, ಮಧು ಬರಮಣ್ಣವರ, ಹಳೆಮನಿ, ರುದ್ರಗೌಡ ಪಾಟೀಲ, ಮಹಾಂತೇಶ ಹಂಚಿನಮನಿ ಮುಂತಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ