Latest

1200ಕ್ಕೂ ಹೆಚ್ಚು ಜನರ ಬಲಿ ಪಡೆದಿದ್ದ ಸಾವಿನ ಹೆದ್ದಾರಿಗೆ ಕೊನೆಗೂ ಟೆಂಡರ್

ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ:    1200ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದ್ದ ರಾಷ್ಟ್ರೀಯ ಹೆದ್ದಾರಿ 4 ರ ಹುಬ್ಬಳ್ಳಿ-ಧಾರವಾಡ ಮಧ್ಯದ ಸಾವಿನ ಹೆದ್ದಾರಿಗೆ ಕೊನೆಗೂ ಕೇಂದ್ರ ಸರ್ಕಾರ ಟೆಂಡರ್ ಕರೆದಿದೆ.
ಈ ರಸ್ತೆ ಮೇಲ್ದರ್ಜೆಗೇರಿಸುವಂತೆ ಸಾಕಷ್ಟು ಪ್ರತಿಭಟನೆಗಳು ಕೂಡ ನಡೆದಿದ್ದವು.
ಇಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಟೆಂಡರ್ ಕರೆದಿರುವ ವಿಷಯವನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ‌ ನೀಡಿದ್ದಾರೆ. ಷಟ್ಪಥ ಎಕ್ಸ್‌ಪ್ರೆಸ್‌ ಹೈವೆ ಜೊತೆಗೆ ನಾಲ್ಕುಪಥ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಟೆಂಡರ್‌ ಕರೆಯಲಾಗಿದೆ.
ಒಟ್ಟು1,200 ಕೋಟಿ ವೆಚ್ಚದಲ್ಲಿ ರಸ್ತೆ‌ ನಿರ್ಮಾಣ ಮಾಡಲು ಒಪ್ಪಿಗೆ ನೀಡಲಾಗಿದೆ.‌ ಹುಬ್ಬಳ್ಳಿ- ಧಾರವಾಡ ಬಳಿ ಪುಣೆ-ಬೆಂಗಳೂರು ಸಂರ್ಪಕ ಕಲ್ಪಿಸುತ್ತಿದ್ದ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಅವಳಿ ನಗರದ ಮಧ್ಯೆ ಕೇವಲ ದ್ವಿಪಥವಿತ್ತು. ಸಧ್ಯ 31 km ಷಟ್ಪಥ ಮಾಡಲು ನಿರ್ಧಾರ ಮಾಡಲಾಗಿದೆ.
2021ರ ಜನೆವರಿ 15ರಂದು ನಡದಿದ್ದ ಅಪಘಾತದ ದೃಶ್ಯ

ಇತ್ತೀಚಿಗೆ ಕಿರಿದಾದ ರಸ್ತೆಯಿಂದ ಭೀಕರ ಆ್ಯಕ್ಸಿಡೆಂಟ್ ಗಳಿಗೆ ಕುಖ್ಯಾತಿ ಪಡೆದಿತ್ತು. ಕಳೆದ ವರ್ಷ ಜನವರಿಯಲ್ಲಿ ದಾವಣಗೇರಿ ಮೂಲದ 11 ಜನ ವೈಧ್ಯ ಕುಟುಂಬವನ್ನು ಬಲಿ ಪಡೆದಿತ್ತು. ಆ ದುರಂತಕ್ಕೆ ಪ್ರಧಾನಿಯೂ ಕಂಬನಿ ಮಿಡಿದಿದ್ದರು. ಹೀಗಾಗಿ ಇದು ಸಾವಿನ ಹೆದ್ದಾರಿ ಅಂತಲೇ ಕುಖ್ಯಾತಿ ಪಡೆದಿತ್ತು. ಸಾಕಷ್ಟು ಪ್ರತಿಭಟನೆಗಳು ಕೂಡ ನಡೆದಿದ್ದವು.

ಈಗ ಇದಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೆಂಡರ್ ಕರೆಯುವ ಮೂಲಕ 2 ವರ್ಷದ ಒಳಗೆ ಕಾಮಗಾರಿ ‌ಮುಗಿಸುವಂತೆ ಗಡುವು ನೀಡಿದ್ದು, ಈ ಭಾಗದ ಜನರು ಈಗ ನಿರಾಳಾಗುವಂತೆ ಮಾಡಿದೆ.‌

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button