ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ವಿಧಾನ ಮಂಡಳದ ಅಧಿವೇಶನ ನಡೆದಾಗಲೆಲ್ಲ ಬಂದೋಬಸ್ತಿಗೆಂದು ರಾಜ್ಯದ ಬೇರೆ ಬೇೆರೆ ಕಡೆಯಿಂದ ಆಗಮಿಸುವ ಪೊಲೀಸರ ಪಾಡು ಯಾರಿಗೂ ಬೇಡವಾಗಿತ್ತು.
ಊಟ, ತಿಂಡಿ, ಸ್ನಾನ, ಶೌಚ, ಶಯನ ಸೇರಿದಂತೆ ಯಾವುದೂ ಸರಿಯಾಗಿರುತ್ತಿರಲಿಲ್ಲ. ಆರಂಭಿಕ ವರ್ಷಗಳಲ್ಲಂತೂ ಅವರದ್ದು ನಾಯಿಪಾಡು ಎನ್ನುವ ರೀತಿಯಲ್ಲೇ ಇತ್ತು.
ಆದರೆ ಈ ಬಾರಿ ಚಿತ್ರಣವೇ ಬದಲಾಗಿದೆ.
Thanks to Belagavi Police commissioner Tyagarajan, DCP Vikram Amate and Team.
13-12-2021 ರಿಂದ 24-12-2021 ರವರೆಗೆ ಬೆಳಗಾವಿ ನಗರದಲ್ಲಿ ಚಳಗಾಲದ ವಿಧಾನ ಮಂಡಲ ಅಧಿವೇಶನ ಜರುಗಲಿದ್ದು, ಈ ಹಿನ್ನೆಲೆಯಲ್ಲಿ ಬೆಳಗಾವಿ ನಗರ ಪೊಲೀಸ್ ಘಟಕದ ವತಿಯಿಂದ ಪೂರ್ವ ಸಿದ್ಧತೆ ನಡೆಸಲಾಗುತ್ತಿದೆ.
ಅಧಿವೇಶನದ ಕುರಿತು ಬೆಳಗಾವಿ ನಗರ ಪೊಲೀಸ್ ಹೊರತುಪಡಿಸಿ ಹೊರ ಜಿಲ್ಲೆಗಳಿಂದ ಸುಮಾರು 4000 ಜನ ಪೊಲೀಸ್ ಸಿಬ್ಬಂದಿ, 300 ಪೊಲೀಸ್ ಅಧಿಕಾರಿಗಳು ಹಾಗೂ 50 ಪೊಲೀಸ್ ಹಿರಿಯ ಅಧಿಕಾರಿಗಳನ್ನು ಒಳಗೊಂಡಂತೆ ಬಂದೋಬಸ್ತ್ ಕುರಿತು ನಿಯೋಜನೆ ಮಾಡಲಾಗುತ್ತಿದೆ.
ಸುವರ್ಣ ವಿಧಾನ ಸೌಧದ ಹತ್ತಿರ ನಿಲಜಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಸಿಂಧೂಳ್ಳಿಯಲ್ಲಿ ತಾತ್ಕಾಲಕವಾಗಿ ಪೊಲೀಸ್ ಟೌನಶಿಪ್ ನಿರ್ಮಾಣ ಮಾಡಲಾಗುತ್ತಿದ್ದು, ಅಲ್ಲಿ 1500 ಸಿಬ್ಬಂದಿಗೆ, 300 ಅಧಿಕಾರಿಗಳಿಗೆ ವಾಸ್ತವ್ಯಕ್ಕೆ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗುತ್ತಿದೆ.
ಟೌನಶಿಪ್‌ನಲ್ಲಿ ವಿದ್ಯುತ್ ವ್ಯವಸ್ಥೆ, ಆಸ್ಪತ್ರೆ, ಆಫೀಸ್, ಕಂಟ್ರೋಲ್ ರೂಮ್, ಡೈನಿಂಗ್ ಹಾಲ್, ಶೌಚಾಲಯ, ಸ್ನಾನಗೃಹ ಮತ್ತು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇತ್ಯಾದಿ ಮಾಡಲಾಗುತ್ತಿದೆ. ಇದನ್ನು ಹೊರತುಪಡಿಸಿ ಟ್ರೇನಿಂಗ್ ಸ್ಕೂಲ್ ಸಾಂಬ್ರಾದಲ್ಲಿ 500 ಅಧಿಕಾರಿ/ಸಿಬ್ಬಂದಿಗೆ ವಾಸ್ತವ್ಯ, ಎಂಎಲ್‌ಐಆರ್ ಕ್ಯಾಂಪ್‌ನಲ್ಲಿ 400 ಜನಕ್ಕೆ ವಾಸ್ತವ್ಯ ಮತ್ತು ಮಹಿಳಾ ಅಧಿಕಾರಿ/ಸಿಬ್ಬಂದಿಗೆ ಕೆಎಸ್‌ಆರ್‌ಪಿ ಮಚ್ಚೆಯಲ್ಲಿ ಸುಮಾರು 250 ಜನರಿಗೆ, ಪಿಟಿಎಸ್ ಕಂಗ್ರಾಳಿಯಲ್ಲಿ ಸುಮಾರು 350 ಜನರಿಗೆ ವಾಸ್ತವ್ಯ ಹಾಗೂ ಇನ್ನಿತರ ಸ್ಥಳಗಳಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ. ಊಟ ಮತ್ತು ಬಿಸಿನೀರಿನ ವ್ಯವಸ್ಥೆ ಸಹ ಮಾಡಲಾಗುತ್ತಿದೆ.
ಈ ವ್ಯವಸ್ಥೆಯಿಂದಾಗಿ ಪೊಲೀಸರು ನೆಮ್ಮದಿಯಿಂದ ಕರ್ತವ್ಯ ನಿರ್ವಹಿಸಲು ಸಾಧ್ಯವಾಗಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ