Belagavi NewsBelgaum NewsKannada NewsKarnataka NewsNational

*ಆ.18 ರಂದು ಬೆಳಗಾವಿ ರನ್ 2024 ಮ್ಯಾರಥಾನ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸ್ವಾತಂತ್ರೋತ್ಸವದ ನಿಮಿತ್ಯ ಆ.18 ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಿಗ್ಗೆ 6 ಗಂಟೆಯಿಂದ ಬೆಳಗಾವಿ ರನ್ 2024 ಮ್ಯಾರಥಾನ್ ನಡೆಯಲಿದೆ ಎಂದು ವಿಜಯಾ ಆಸ್ಪತ್ರೆಯ ವೈದ್ಯ ಡಾ. ರವಿ ಪಾಟೀಲ ಅವರು ತಿಳಿಸಿದ್ದಾರೆ.

ನಗರದ ವಿಜಯಾ ಆಸ್ಪತ್ರೆಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಳಗಾವಿಯ ಅಪ್ಟೇಕರ್ ಸ್ಪೋರ್ಟ್ಸ್ ಫೌಂಡೇಶನ್ ವತಿಯಿಂದ ನಡೆಯುತ್ತಿರುವ ಈ ಬೆಳಗಾವಿ ರನ್ 2024 ರ ಮ್ಯಾರಥಾನ್ ಗೆ ಬೆಳಗಾವಿಯ ಎಲ್ಲಾ ವಿಧ್ಯಾರ್ಥಿಗಳು ಹಾಗೂ ಸಾರ್ವಜನಿಕರು ಈ ಭಾಗಿಯಾಗಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. 

ಈ ಮ್ಯಾರಾಥಾನಗರ 3, 5, ಹಾಗೂ 10 ಕಿಮೀ ಗಳ ಇರಲಿದೆ.‌ ಆಸ್ಪತ್ರೆಗಳಲ್ಲಿ ಒಂದು ಹೃದಯ ತಪಾಸಣೆ ಮಾಡ್ಕೊಳ್ಳಲು ಎರಡರಿಂದ ಸಾವಿರಾರು ರೂಪಾಯಿ ಖರ್ಚು ಮಾಡುವ ಬದಲು ಇಂತಹ ಕಾಲಮಾನದಲ್ಲಿ ನಾವು ಆರೋಗ್ಯವಾಗಿ, ಸದೃಢವಾಗಿ ಇರಬೇಕೆಂದರೆ ಇಂತಹ ಕಾರ್ಯಕ್ರಮದಲ್ಲಿ ನಾವು ಭಾಗಿಯಾಗವುದು ತುಂಬಾ ಅವಶ್ಯ, ಒಂದಿಷ್ಟು ವಯೋಮಾನದವರು ಒಂದಿಷ್ಟು ಕಿಮೀ ಓಡಿದರೆ ಅಥವಾ ನಡೆದರೆ ಅಂತವರು ಯಾವುದೇ ವೈದ್ಯರ ಬಳಿ ಹೋಗುವ ಅವಶ್ಯಕತೆಯೇ ಬರುವದಿಲ್ಲ ಎಂದರು..

ಬಳಿಕ ಮಾತಾನಡಿದ ಅಪ್ಟೆಕರ ಸ್ಪೋರ್ಟ್ಸ್ ಮುಖ್ಯಸ್ಥರಾದ ಸುನೀಲ ಅಪ್ಟೇಕರ ಅವರು, ಇದೊಂದು ರಾಷ್ಟ್ರೀಯ ಮಟ್ಟದ ಮ್ಯಾರಥಾನ್ ಸ್ಪರ್ದೆ ರೀತಿ ನಡೆಯುತ್ತಿದ್ದು, ಬೇರೆಬೇರೆ ರಾಜ್ಯದ ಸ್ಪರ್ಧಿಗಳು ಭಾಗಿಯಾಗುವರು, 30 ವಯಸ್ಸಿನವರಿಗೆ, 31 ರಿಂದ 45 ವಯಸ್ಸಿನ, ಹಾಗೂ 45 ನಂತರ ವಯೋಮಾನದ ಸ್ಪರ್ಧೆ ಎಂದು ಮೂರು ವಿಭಾಗ ಮಾಡಲಾಗಿದೆ. ಭಾಗಿಯಾಗುವ ಎಲ್ಲರಿಗೂ ಉತ್ತಮ ಗುಣಮಟ್ಟದ ಟಿ ಶರ್ಟ್, ಉಪಹಾರ, ಗ್ಲೂಕೋಸ್, ವೈದ್ಯಕೀಯ ಸೇವೆ, ಎಲ್ಲವೂ ಇದ್ದಿದ್ದು, ರನ್ ಪೂರ್ಣಗೊಳಿಸುವ ಪ್ರತಿಯೊಬ್ಬರನ್ನೂ ಚಾಂಪಿಯನ್ ಅಂತಾ ಘೋಷಣೆ ಮಾಡಿ, ಉತ್ತಮವಾದ ಮೆಡಲಗಳನ್ನು ನೀಡಲಾಗುವದು ಎಂದು ತಿಳಿಸಿದರು.‌

ಇನ್ನು 15 ದಿನಗಳ ವರೆಗೆ ನೋಂದಣಿ ಮಾಡಿಕೊಳ್ಳುವ ಸಮಯವಿದ್ದು, ಸಾರ್ವಜನಿಕರು ನೋಂದಣಿಯನ್ನು www.runindia.in ಈ ವೆಬ್ಸೈಟ್ ಅಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button