ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಎಂತಹ ಎಡವಟ್ಟು ಸಂಭವಿಸಿದೆ ನೋಡಿ. ರಾಜ್ಯಪಾಲರನ್ನೇ ಬಿಟ್ಟು ವಿಮಾನ ಹಾರಿದ ಘಟನೆ ನಡೆದಿದೆ.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೈದರಾಬಾದ್ ಗೆ ತೆರಳಬೇಕಿತ್ತು. ವಿಮಾನಕ್ಕಾಗಿ ಕಾಯುತ್ತಿದ್ದ ರಾಜ್ಯಪಾಲರನ್ನು ಬಿಟ್ಟು ವಿಮಾನ ಹಾರಿದೆ. ನಿನ್ನೆ ಮಧ್ಯಾಹ್ನ ರಾಜ್ಯಪಾಲರು ಹೈದರಾಬಾದ್ ಗೆ ತೆರಳಲು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಆದರೆ ರಾಜ್ಯಪಾಲರು ಹೊರಡಬೇಕಿದ್ದ ಏರ್ ಏಷ್ಯಾ ವಿಮಾನಕ್ಕೆ ಇನ್ನೂ ಸಮಯವಿದೆ ಎಂದು ಸಿಬ್ಬಂದಿಗಳು ರಾಜ್ಯಪಾಲರನ್ನು ಕರೆದುಕೊಂಡು ಹೋಗಿ ವಿಐಪಿ ಲಾಂಜ್ ನಲ್ಲಿ ಕೂರಿಸಿದ್ದಾರೆ. ಸಮಯ ಆಗಿರುವುದನ್ನು ಗಮನಿಸಿಲ್ಲ.
ಇದರಿಂದ ವಿಮಾನ ರಾಜ್ಯಪಾಲರನ್ನು ನಿಲ್ದಾಣದಲ್ಲೇ ಬಿಟ್ಟು ಸಮಯಕ್ಕೆ ಸರಿಯಾಗಿ ಟೇಕ್ ಆಫ್ ಆಗಿದೆ. ಟೈಮ್ ಆಗಿರುವುದನ್ನು ಗಮನಿಸಿದ ರಾಜ್ಯಪಾಲರು ವಿಮಾನದತ್ತ ತೆರಳಿದ್ದಾರೆ. ಆದರೆ ಅಷ್ಟರಲ್ಲಿ ವಿಮಾನ ಹಾರಾಟ ನಡೆಸಿದೆ. ಪ್ರೋಟೋಕಾಲ್ ಅಧಿಕಾರಿಗಳ ನಿರ್ಲಕ್ಷದಿಂದ ಒಂದು ನಿಮಿಷದಲ್ಲಿ ರಾಜ್ಯಪಾಲರಿಗೆ ಫ್ಲೈಟ್ ಮಿಸ್ ಆಗಿದೆ.
ಬಳಿಕ ಅಧಿಕಾರಿಗಳು ಮತ್ತೊಂದು ವಿಮಾನದ ಮೂಲಕ ರಾಜ್ಯಪಾಲರನ್ನು ಹೈದರಾಬಾದ್ ಗೆ ಕಳುಹಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ