Kannada NewsKarnataka NewsPolitics

*ಗರ್ಭಿಣಿ ಮಗಳ ಹತ್ಯೆ ಮಾಡಿದ ಆರೋಪಿಗಳಿಗೆ ಸೂಕ್ತ ಶಿಕ್ಷೆಯಾಗಲಿದೆ: ಸಂತೋಷ್‌ ಲಾಡ್‌* 

ಪ್ರಗತಿವಾಹಿನಿ ಸುದ್ದಿ: ಹುಬ್ಬಳ್ಳಿ ತಾಲೂಕಿನ ಇನಾಮ್ ವೀರಾಪೂರ ಗ್ರಾಮದಲ್ಲಿ ತಂದೆಯೇ ತನ್ನ ವಿವಾಹಿತ ಗರ್ಭಿಣಿ ಮಗಳನ್ನು ಅಮಾನುಷವಾಗಿ ಹತ್ಯೆಗೈದಿರುವುದನ್ನು ಖಂಡಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಎಸ್‌ ಲಾಡ್‌ ಅವರು, ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಲಿದೆ ಎಂದು ಹೇಳಿದ್ದಾರೆ. 

ಪ್ರಕರಣದ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿರುವ ಸಚಿವರು, ಈ ಘಟನೆ ಕೇಳಿ ದಿಗ್ಭ್ರಮೆಯುಂಟಾಗಿದೆ.  ಕೃತ್ಯ ಎಸಗಿದವರಿಗೆ ನಮ್ಮ ಕಾನೂನು ವ್ಯವಸ್ಥೆ ಸೂಕ್ತ ಶಿಕ್ಷೆ ಕೊಡಲಿದೆ. ಮಾನವೀಯತೆಯೇ ಎಲ್ಲಕ್ಕಿಂತ ದೊಡ್ಡದು ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ. 

ʼಜಾತಿ ಸುಡೋ ಮಂತ್ರಕಿಡಿ ಪ್ರೀತಿʼ ಎಂದು ರಾಷ್ಟ್ರಕವಿ ಕುವೆಂಪು ಹೇಳಿದ್ದರು. ಆದರೆ ಆ ಜಾತಿ ಎಂಬ ವಿಷಬೀಜವೇ ಇವತ್ತು ಒಂದು ಅಮಾಯಕ ಗರ್ಭಿಣಿಯ ಜೀವವನ್ನು ಬಲಿ ತೆಗೆದುಕೊಂಡಿದೆ. ಇಂತಹ ಘಟನೆ ಮತ್ತೆಂದೂ ಘಟಿಸದಿರಲಿ ಎಂದು ಎಂದಿದ್ದಾರೆ.

Home add -Advt

Related Articles

Back to top button