Belagavi NewsBelgaum NewsKannada NewsKarnataka News

ಅಪರಿಚಿತ ವ್ಯಕ್ತಿ ಶವ ಪತ್ತೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಉಗಾರಖುರ್ದದ ರೈಲು ನಿಲ್ದಾಣ ಹತ್ತಿರ ಹರಿಪ್ರಿಯಾ ಎಕ್ಸ್‌ಪ್ರೆಸ್ ರೈಲಿನಿಂದ ಬಿದ್ದು ಗಾಯಗೊಂಡಿ ಕಾರಣ ಕಾಗವಾಡ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದ್ದು, ಚಿಕಿತ್ಸೆ ಫಲಿಸದೇ ವ್ಯಕ್ತಿ ಸಾವನ್ನಪ್ಪಿರುತ್ತಾನೆ.


ಚಹರೆ: ಮೃತನ ಅಂದಾಜು ವಯಸ್ಸು ೪೦-೪೫,. ಎತ್ತರ ೫.೭ ಇರುತ್ತದೆ. ಸಾದ ಗಪ್ಪು ಮೈ ಬಣ್ಣ, ಉದ್ದ ಮುಖ, ಎದೆಯ ಮೇಲೆ ಏ ಹಾಗೂ ಹನುಮಂತ ದೇವರ ಹಚ್ಚೆ, ಬಲಗೈ ಮೇಲೆ ತಾಯಿ ದೇವರು ಮತ್ತು ನಾಗದೇವತೆ ಹಚ್ಚೆ, ಬಲಗೈ ಮೇಲೆ KMSPC ಹಚ್ಚೆ, ಎಡಗೈ ಮೇಲೆ ನವಿಲಿನ ಹಚ್ಚೆ ಇರುತ್ತದೆ. ಕೆಂಪು ಬಣ್ಣದ ಚಕ್ಸ್ ಪುಲ್ ಶರ್ಟ್, ಚಾಕಲೇಟ್ ಬಣ್ಣದ ಚಕ್ಸ್ ಪುಲ್ ಪ್ಯಾಂಟ್ ಧರಿಸಿರುತ್ತಾನೆ.
ಮೃತನ ವಾರಸುದಾರರ ಬಗ್ಗೆ ತಿಳಿದು ಬಂದಲ್ಲಿ ನಗರದ ರೈಲ್ವೆ ಪೊಲೀಸ್ ಠಾಣೆ ದೂರವಾಣಿ ೦೮೩೧-೨೪೦೫೨೭೩ ಪಿಎಸ್‌ಐ ೯೪೮೦೮೦೨೨೧೨೭ ಅಥವಾ ರೈಲ್ವೆ ಪೊಲೀಸ್ ನಿಯಂತ್ರಣ ಕೊಠಡಿ ೦೮೦-೨೨೮೭೧೨೯೧ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಬೆಳಗಾವಿ ರೈಲ್ವೆ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Home add -Advt

Related Articles

Back to top button