Belagavi NewsBelgaum NewsKannada NewsKarnataka NewsNational

*ಬೆಳಗಾವಿ ಪ್ರವಾಹದ ನಾಲೆಯಲ್ಲಿ ತೇಲಿ ಬಂದ ಶವ: ಕೈ ಮೇಲಿನ ಟ್ಯಾಟೋದಲ್ಲಿ ಹೆಸರು* 

------WebKitFormBoundarylJyLS����

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿಪರೀತ ಮಳೆಯ ಕಾರಣ ಉಂಟಾದ ಪ್ರವಾಹಕ್ಕೆ ಕಿಲ್ಲಾ ಕೆರೆಯ ನಾಲೆಯಲ್ಲಿ ಅಪರಿಚಿತ ಶವ ತೇಲಿ ಬಂದಿರುವ ಘಟನೆ ನಡೆದಿದ್ದು, ಶವ ನೋಡಿದ ಸ್ಥಳೀಯರು ಒಂದು ಕ್ಷಣ ಭಯಭೀತರಾಗಿದ್ದಾರೆ.‌

ಬೆಳಗಾವಿಯ ಉಜ್ವಲ ನಗರದಲ್ಲಿ ಹರಿಯುತ್ತಿರುವ ಕಿಲ್ಲಾ ಕೆರೆಯ ನಾಲೆಯಲ್ಲಿ ಅಪರಿಚಿತ ಶವ ತೇಲಿ ಬಂದಿದೆ. ನಾಲೆಯಲ್ಲಿ ಜೋತು ಬಿದ್ದಿರುವ ಮರದ ಟೊಂಗೆಯಲ್ಲಿ ಈ ಶವ ಸಿಲುಕಿದ್ದರಿಂದ ಇಂದು ಮಧ್ಯಾಹ್ನ ಕಾಣಿಸಿದೆ.

ಮಾಹಿತಿ ಸಿಕ್ಕ ಕೂಡಲೆ ಬೆಳಗಾವಿ ಮಾಳಮಾರುತಿ ಪೋಲೀಸ್‌ ಠಾಣೆಯ ಪೊಲೀಸರು ದೌಡಾಯಿಸಿದ್ದು, ಅಪರಿಚಿತ ಶವವನ್ನು ಹೊರತೆಗೆದು ಶವದ ಗುರತು ಪತ್ತೆಗೆ ತನಿಖೆ ಆರಂಭಿಸಿದ್ದಾರೆ.

ಸುಮಾರು 33 ರಿಂದ 35 ವರ್ಷ ವಯಸ್ಸಿನ ಹಳದಿ ಶರ್ಟ್ ಮತ್ತು ಜೀನ್ಸ್ ಪ್ಯಾಂಟ್ ಧರಿಸಿದ್ದು ಕೈ ಮೇಲೆ ಲಕ್ಷ್ಮಣ ಎಚ್ ಎಂದು ಬರೆದ ಟ್ಯಾಟೊ ಇದೆ. ಮೃತ ವ್ಯಕ್ತಿಯು ಧರಿಸಿದ ಹಳದಿ ಶರ್ಟ್ ನೇಲೆ ವೀರಭದ್ರ ನಗರದ ಟೇಲ‌ರ್ ಬ್ಯಾಚ್ ಇದೆ. 

Home add -Advt

Related Articles

Back to top button