Belagavi NewsBelgaum NewsKannada NewsKarnataka News

ಭಾರತೀಯ ಸೈನ್ಯದ ಶೌರ್ಯ ಅಪ್ರತಿಮ : ಕರ್ನಲ್ ಶ್ಯಾಮ್ ವಿಜಯಸಿಂಹ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಭಾರತೀಯ ಸೈನ್ಯದ ವೀರಗಾಥೆಯ ಚರ್ಚೆಗಳು ದೇಶದ ಶತ್ರು ಪಾಳಯದಲ್ಲೂ ಕೂಡಾ ಚರ್ಚೆಯಾಗುತ್ತವೆ. ಭಾರತೀಯ ಸೈನ್ಯದ ಶೌರ್ಯ ಅಪ್ರತಿಮವಾಗಿದೆ ಎಂದು ಸೇನಾ ಮೆಡಲ್ ಪುರಸ್ಕೃತ ಕರ್ನಲ್ ಶ್ಯಾಮ್ ವಿಜಯಸಿಂಹ ಹೇಳಿದರು.
ಪ್ರಬುದ್ಧ ಭಾರತ ಮತ್ತು ಫಿನ್ಸ್ (ಫೋರಮ್ ಫಾರ್ ಇಂಟಿಗ್ರೇಟೆಡ್ ನ್ಯಾಷನಲ್ ಸೆಕ್ಯೂರಿಟಿ) ಸಹಯೋಗದಲ್ಲಿ ನಗರದ ಐಎಂಇಆರ್ ಕಾಲೇಜಿನಲ್ಲಿ ಜರುಗಿದ ಕಾರ್ಗಿಲ್ ವಿಜಯೋತ್ಸವದ 25ನೇ ವಾರ್ಷಿಕೋತ್ಸವದ ನಿಮಿತ್ತ ಆಯೋಜಿಸಿದ ಕಾರ್ಗಿಲ್ ಸ್ಮರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತೀಯ ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆ ಈ ಮೂರು ದಳಗಳ ಸೈನಿಕರು ವಿಶ್ವದ ಎಲ್ಲ ರಾಷ್ಟçಗಳ ಸೈನ್ಯಕ್ಕೆ ನಡುಕು ಹುಟ್ಟಿಸುವ ಸಾಮರ್ಥ ಹೊಂದಿದ್ದಾರೆ. ಮೊದಲ ಮತ್ತು ಎರಡನೆ ವಿಶ್ವಯುದ್ಧದಲ್ಲಿ ಕೂಡಾ ಮಿತ್ರರಾಷ್ಟçಗಳ ಗೆಲುವಿನಲ್ಲಿ ಭಾರತೀಯ ಸೈನಿಕರ ಪಾತ್ರ ಅನನ್ಯವಾಗಿದೆ. ಭಾರತೀಯರ ಸೈನ್ಯದ ಶೌರ್ಯವು ಶತ್ರು ಪಾಳಯದಲ್ಲಿ ನಡುಕು ಉಂಟು ಮಾಡುವುದು ಎಂದರು.
ಆನಂತರದಲ್ಲಿ ಪವರಪಾಯಿಂಟ್ ಪ್ರೆಸೆಂಟೇಷನ್ ಬಳಸಿಕೊಂಡು ಮಾತನಾಡಿದ ಕರ್ನಲ್ ವಿಜಯಸಿಂಹ – ಹತ್ತು ಹಲವು ಚಿತ್ರಗಳನ್ನೊಳಗೊಂಡ ವ್ಯಾಖ್ಯಾನವು ಕಾರ್ಗಿಲ್ ಯುದ್ಧ ಪ್ರದೇಶದ ವಸ್ತುಸ್ಥಿತಿ ಹಾಗೂ ಯುದ್ಧದ ಕ್ಲಿಷ್ಟತೆಯನ್ನು ಸಭಿಕರಿಗೆ ಕಣ್ಣಿಗೆ ಕಟ್ಟುವಂತೆ ಅನಾವರಣಗೊಳಿಸಿತು. ಇಂತಹ ಒಂದು ವಿಶೇಷ ಸೇನಾ ಆಪರೇಶನ್ ಸಮಯದಲ್ಲಿ ತನ್ನ ಕಣ್ಣಮುಂದೆಯೇ ಅಸಂಖ್ಯ ಸೈನಿಕರನ್ನು ಹಾಗೂ ಜೊತೆಗಾರರ ವೀರಗತಿಯನ್ನು ಕಂಡ ಕ್ಷಣಗಳನ್ನು ನೆನಪಿಸಿಕೊಂಡ ವಕ್ತಾರರೂ ಸಹ ಎರಡು ಗುಂಡು ತಾಗಿ ಗಂಭೀರವಾಗಿ ಗಾಯಗೊಂಡಿದ್ದ ದಿನಗಳನ್ನು ನೆನಪಿಸಿಕೊಂಡರು. ಕೊನೆಯದಾಗಿ – “ಸೈನಿಕನ ಚಿತ್ತ ಯಾವತ್ತೂ ತನ್ನ ಮಿಶನ್ ಕಡೆ ಇರುತ್ತದೆ, ಸೈನಿಕ ಜೀವಕ್ಕೆ ಹೆದರದೆ ತನ್ನ ಮಿಶನ್ ಹೇಗೆ ಯಶಸ್ವಿಗೊಳಿಸಬೇಕು ಅನ್ನುವ ಮಾನಸಿಕತೆಯೊಂದಿಗೆ ಮುನ್ನಡೆಯುತ್ತಾನೆ” ಅಂದರು.
ಎಂಎಲ್‌ಐಆರ್‌ಸಿಯ ಬ್ರಿಗೇಡಿಯರ್ ಜಯದೀಪ ಮುಖರ್ಜಿ ಮಾತನಾಡಿ, ಕೂಡ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದು ಅಂದಿನ ಸ್ಥಿತಿಗತಿಗಳನ್ನು, ಎದುರಾದ ಸವಾಲುಗಳನ್ನು ಮೆಲಕು ಹಾಕಿದರು. 1999ರಲ್ಲಿ ಕಾರ್ಗಿಲನಲ್ಲಿ ಭಾರತೀಯ ಸೇನೆಯ ಪರಾಕ್ರಮ, ಅಪ್ರತಿಮ ಶೌರ್ಯ ಹಾಗೂ ಬಲಿದಾನದ ಫಲಶೃತಿ ಇವತ್ತಿನ ಈ ವಿಜಯೋತ್ಸವ. ನಾಗರಿಕರಲ್ಲಿ ಸೇನಾ ಇತಿಹಾಸ ಹಾಗೂ ಸೇನಾ ವಿಜಯಗಳ ಆಚರಣೆ ಅತ್ಯವಶ್ಯಕ, ಇಂತಹ ಕಾರ್ಯಕ್ರಮಗಳು ನಡೆಯಬೇಕು ಅನ್ನುತ ಪ್ರಬುದ್ಧ ಭಾರತ ಹಾಗೂ ಫೀನ್ಸ್ ಸಂಸ್ಥೆಗಳನ್ನು ಈ ದೃಷ್ಟಿಯಲ್ಲಿ ಯೋಚನೆ ಮಾಡಿರುವುದಕ್ಕೆ ಪ್ರಶಂಸಿದರು.
ಫೀನ್ಸ್ ಸದಸ್ಯ ಕರ್ನಲ್ ಮಧುಕರ ಕದಮ್ ಮಾತನಾಡಿ, ಯುದ್ಧ ಸನ್ನಿವೇಶ, ಕಾರ್ಗಿಲ್ ಭೂಗೋಳ ಹಾಗೂ ಸೇನೆಯ ಮುಂದಿದ್ದ ಸವಾಲುಗಳನ್ನು ಸಂಕ್ಷಿಪ್ತವಾಗಿ ವಿವರಿಸಿದರು.
ಎಂಎಲ್‌ಆರ್‌ಐಸಿಯ ಸೈನ್ಯದ ಅಧಿಕಾರಿಗಳು ಹಾಜರಿದ್ದರು. ಡಾ. ವೈಭವ ಬಾಡಗಿ ನಿರೂಪಿಸಿದರು. ಶ್ರೇಯಾ ಅವರು ವಂದೇಮಾತರಂ ಗೀತೆ ಪ್ರಸ್ತುತ ಪಡಿಸಿದರು. ಆನಂದ ಭುಕ್ಕೆಬಾಗ ವಂದಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button