ಜೆಸಿಬಿಯಲ್ಲಿ ಬಂದ ಮದುಮಗನ ದಿಬ್ಬಣ ! ಕಾರಣ ಗೊತ್ತೆ?

ಶಿಮ್ಲಾ – ಮದುಮಗನನ್ನು ಅಲಂಕೃತ ಐಷಾರಾಮಿ ಕಾರ್‌ನಲ್ಲಿ ಮದುವೆಗೆ ಕರೆತರುವ ದೃಷ್ಯ ಸಾಮಾನ್ಯ. ಗ್ರಾಮೀಣ ಭಾಗದ ಕೆಲವೆಡೆ ಚಕ್ಕಡಿ ಗಾಡಿ ಬಳಸುವುದೂ ಇದೆ. ಆದರೆ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಮದುಮಗನೊಬ್ಬ ಜೆಸಿಬಿಯಲ್ಲಿ ಬಂದಿದ್ದಾನೆ !

ಹೌದು, ಶಿಮ್ಲಾದಲ್ಲಿ ತೀವ್ರವಾಗಿ ಹಿಮಪಾತವಾಗುತ್ತಿದೆ. ಬೇರಾವುದೇ ವಾಹನಗಳು ಸಂಚರಿಸಲು ಸಾಧ್ಯವಿಲ್ಲದಂತಾಗಿದೆ. ಆದರೆ ಮದುವೆಯ ಮುಹೂರ್ತವನ್ನು ತಪ್ಪಿಸುವಂತಿಲ್ಲ. ಹಾಗಾಗಿ ಹಿಮವನ್ನು ಸರಿಸುತ್ತ ಮುನ್ನಡೆಯಲು ಜೆಸಿಬಿಯೇ ಸೂಕ್ತ ಎಂದು ತೀರ್ಮಾನಿಸಿ ಜೆಸಿಬಿಯಲ್ಲೇ ಮದುವೆಗೆ ತೆರಳಲಾಗಿದೆ.

Home add -Advt

ಮದುಮಗ ಜೆಸಿಬಿಯಲ್ಲಿ ತೆರಳಿದ ವಿಡಿಯೋ ಟ್ವಿಟರ್‌ನಲ್ಲಿ ವೈರಲ್ ಆಗುತ್ತಿದೆ.

Related Articles

Back to top button