Kannada NewsKarnataka NewsNational

*ಪಾಲು ಕೇಳಿದಕ್ಕೆ ಅಕ್ಕನ ಕಾಲು ಕಡಿಯಲು ಮುಂದಾದ ಸಹೋದರ*

ಪ್ರಗತಿವಾಹಿನಿ ಸುದ್ದಿ: ಜಮೀನಿನಲ್ಲಿ ಪಾಲು ಕೇಳ್ತೀಯಾ ಎಂದು ಪಾಪಿ ಸಹೋದರ ಸ್ವಂತ ಅಕ್ಕನ ಮೇಲೆ  ಕೊಡಲಿಯಿಂದ ಭೀಕರವಾಗಿ ಹಲ್ಲೆ ಮಾಡಿದ ಘಟನೆ ಆಂದ್ರಪ್ರದೇಶದ ಅನಂತಪುರ ಜಿಲ್ಲೆಯ ಗರ್ಲದಿನ್ನೆ ಮಂಡಲದ ಪೆನಕಚಾರ್ಲ ಗ್ರಾಮದಲ್ಲಿ ನಡೆದಿದೆ.

ಜಮೀನಿನಲ್ಲಿ ಪಾಲು ಕೇಳ್ತೀಯಾ ಎಂದು ಪಾಪಿ ಸಹೋದರ ಜಿಲಾನಿ ಎಂಬುವವನು ತನ್ನ ಅಕ್ಕ ಮೆಹಬೂಬಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಪಾಲು ಯಾಕೆ ಕೊಡಬೇಕು? ನಿನ್ನ ಕಾಲು ಕಡಿಯುವೆ ಎಂದು ರಾಕ್ಷಸನಂತೆ ವರ್ತಿಸಿ ಕೊಡಲಿಯಿಂದ ಭೀಕರವಾಗಿ ಅಕ್ಕನ ಕಾಲುಗಳಿಗೆ ಕೊಡಲಿ ಏಟು ಕೊಟ್ಟಿದ್ದಾನೆ.

ಅಕ್ಕ ಎಷ್ಟೇ ಅಂಗಲಾಚಿದರು ರಾಕ್ಷಸ ತಮ್ಮ ಕನಿಕರವಿಲ್ಲದೇ ಹಲ್ಲೆ ಮಾಡಿದ್ದಾನೆ. ದಾಳಿಯಲ್ಲಿ ಮೆಹಬೂಬಿ ಗಂಭೀರವಾಗಿ ಗಾಯಗೊಂಡಿದ್ದು, ಆರೋಪಿ ಜಿಲಾನಿಯನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯ ವಿಡಿಯೋ ಸ್ಥಳೀಯರ ಮೊಬೈಲ್​​​ನಲ್ಲಿ ಸೆರೆಯಾಗಿದ್ದು, ಎಲ್ಲೆಡೆ ವೈರಲ್ ಆಗುತ್ತಿದೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button