ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿಯ ಮಾಣಿಕಬಾಗ ದಿಗಂಬರ ಜೈನ ಬೋರ್ಡಿಂಗ್ ನಲ್ಲಿ ಜೈನ ಮುನಿಗಳಾದ ಆಚಾರ್ಯ ಶ್ರೀ ವರ್ಧಮಾನ ಶ್ರೀಗಳ ಚಾರ್ತುಮಾಸ್ಯ ನಡೆಯುತ್ತಿದ್ದು ಈ ಚಾರ್ತುಮಾಸ್ಯ ಸಂದರ್ಭದಲ್ಲಿ ಓರ್ವ ಜೈನ ಮುನಿ ಮತ್ತು ಓರ್ವ ಆರ್ಯಿಕಾ ಮಾತಾಜಿಗಳು ಸಲ್ಲೇಖನ ವೃತ ತೆಗೆದುಕೊಳ್ಳುವ ಮೂಲಕ ಸಮಾಧಿ ಮರಣ ಹೊಂದಿದರು.
ಸೋಮವಾರ ದಿನಾಂಕ ೨೦ ರಂದು ಮಧ್ಯಾಹ್ನ ೩-೩೦ ಗಂಟೆಗೆ ಮುನಿಶ್ರೀ ದೇವಕಾಂತ ಸಾಗರಜೀ ಮುನಿಗಳು ಯಮಸಲ್ಲೇಖನ ವೃತ ಧಾರಣೆ ಮಾಡುವ ಮೂಲಕ ಅವರು ಸಮಾಧಿ ಮರಣ ಹೊಂದಿದರು. ಕಳೆದ ೧೩ ದಿನಗಳಿಂದ ಅವರು ಸಲ್ಲೇಖನ ವೃತ ಧಾರಣೆ ಮಾಡಿದ್ದರು.
ಅದರಂತೆ ಸೋಮವಾರ ಬೆಳಿಗ್ಗೆ ೧೦ -೫೦ ಗಂಟೆಗೆ ಆರ್ಯಿಕಾ ಶ್ರೇಯಮತಿ ಮಾತಾಜಿ ಅವರು ಸಮಾಧಿ ಮರಣ ಹೊಂದಿದರು. ಈ ರೀತಿ ಒಂದೇ ದಿನ ಇಬ್ಬರು ತ್ಯಾಗಿಗಳು ಸಮಾಧಿ ಮರಣ ಹೊಂದಿರುವುದು ಬೆಳಗಾವಿ ಜಿಲ್ಲೆಯಲ್ಲಿ ಪ್ರಥಮವಾಗಿದೆ. ಅಂತಿಮ ಸಂಸ್ಕಾರದಲ್ಲಿ ಜೈನ ಸಮುದಾಯ ಶ್ರಾವಕರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ