Ten children died in a fire that broke out at Sick Newborn Care Unit (SNCU) of Bhandara District General Hospital at 2 am today. Seven children were rescued from the unit: Pramod Khandate, Civil Surgeon, Bhandara, Maharashtra pic.twitter.com/bTokrNQ28t
— ANI (@ANI) January 9, 2021
ಪ್ರಗತಿವಾಹಿನಿ ಸುದ್ದಿ, ಮಂಬೈ – ಮಹಾರಾಷ್ಟ್ರದಲ್ಲಿ ಇಂದು ಮುಂಜಾನೆ ಸಂಭವಿಸಿದ ಅಗ್ನಿ ಅವಘಡದಲ್ಲಿ 10 ಶಿಶುಗಳು ಸಜೀವವಾಗಿ ದಹನವಾಗಿವೆ.
1 ದಿನದ ಶಿಶುವಿನಿಂದ ಮೊದಲ್ಗೊಂಡು 3 ತಿಂಗಳ ಶಿಶುವಿನವರೆಗೆ ಒಟ್ಟೂ 17 ಶಿಶುಗಳಿರುವ ಬಂಡಾರಾ ಜಿಲ್ಲೆಯ ಸಾರ್ವಜನಿಕ ಆಸ್ಪತ್ರೆಯ ನವಜಾತ ಶಿಶು ಆರೈಕೆ ಕೇಂದ್ರದಲ್ಲಿ ಬೆಂಕಿ ಅವಘಡ ಸಂಭವಿಸಿದೆ. 7 ಶಿಶುಗಳನ್ನು ರಕ್ಷಿಸಲಾಗಿದ್ದು 10 ಶಿಶುಗಳು ಸುಟ್ಟು ಕರಕಲಾಗಿವೆ.
ಈ ಕುರಿತು ಆಸ್ಪತ್ರೆಯ ಸರ್ಜನ್ ಪ್ರಮೋದ್ ಖಂಡೇಟ್ ಎಎನ್ಐಗೆ ಮಾಹಿತಿ ನೀಡಿದ್ದಾರೆ. ಈ ದುರಂತದ ಕುರಿತು ಪೊಲೀಸರು ತನಿಖೆ ಖೈಗೊಂಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ