Kannada NewsKarnataka News

ಕತ್ತಿ ಕುಟುಂಬಕ್ಕೆ ಸಾಂತ್ವನ ಹೇಳಲು ತೆರಳುತಿದ್ದವರ ಕಾರು ಅಪಫಾತ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇತ್ತಿಚಿಗೆ ಮೃತರಾದ ಸಚಿವ ಉಮೇಶ ಕತ್ತಿ ಅವರ ಕುಟುಂಬಕ್ಕೆ ಸಾಂತ್ವನ ತಿಳಿಸಲು ಹೊರಟಿದ್ದ ಉಪ್ಪಾರ ಸಮಾಜದ  ಮುಖಂಡ ಕಲ್ಲಪ್ಪ ಚೌಕಶಿ, ಗೋಕಾಕ ತಾಲೂಕು ಪಂಚಾಯತಿ ಮಾಜಿ ಸದಸ್ಯರಿಬ್ಬರಾದ ನಿಂಗಪ್ಪ ಮಾಳ್ಯಾಗೋಳ, ಸುನಿಲ ಜಮಖಂಡಿ ತೆರಳುತ್ತಿದ್ದ  ಕಾರಿಗೆ ಬಾಗೇವಾಡಿ ಸಮಿಪದ ಕೊರವಂಜಿ ನಗರದ ಬಳಿ ಮತ್ತೊಂದು ಕಾರು ಡಿಕ್ಕಿಯಾಗಿದೆ.
ಪಕ್ಕದಲ್ಲಿಯೆ ನಿರಾವರಿ ಇಲಾಖೆಯ 30 ಅಡಿ ಆಳದ ಕಾಲುವೆಯಿದ್ದು ಸ್ವಲ್ಪದರಲ್ಲಿ ಭಾರಿ ಅನಾಹುತ ತಪ್ಪಿದೆ. ಗಾಯಾಳುಗಳನ್ನು ಸಮಿಪದ ಘಟಪ್ರಭಾ ಕೆಎಚ್ಐ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಿಳಿ ಬಣ್ಣದ ಮಹಿಂದ್ರಾ ಸ್ಕಾರ್ಪಿಯೊ  ಚಾಲಕ ಡಿಕ್ಕಿ ಹೊಡೆಸಿ ವಾಹನ ಸಹಿತ ಪರಾರಿಯಾಗಿದ್ದಾನೆ. ಅಪಘಾತ ಸಂದರ್ಭದಲ್ಲಿ ಸ್ಥಳದಲ್ಲಿ ದೊರೆತ ನಂಬರ್ ಪ್ಲೇಟ್ ನಿಂದ ವಾಹನದ ಸಂಖ್ಯೆ ಪತ್ತೆಯಾಗಿದ್ದು ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಹುಕ್ಕೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

https://pragati.taskdun.com/latest/man-collapse-sugar-factory-athani-dsp-shripadjalde-cpr-recover/

https://pragati.taskdun.com/latest/balachandra-jarakiholiumesh-kattideathcondolancebellada-bagewadi/

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button