Kannada NewsKarnataka News

*ಮತ್ತೊಂದು ಸಿಡಿ ಸ್ಫೋಟ?* *ಬಿಜೆಪಿ ನಾಯಕ, ಮಾಜಿ ಸಿಎಂ ಸಿಡಿ ಶೀಘ್ರವೇ ರಿಲೀಸ್* *ರಾಜ್ಯ ರಾಜಕಾರಣ ಬೆಚ್ಚಿ ಬೀಳುವ ಸುದ್ದಿ*

ಪ್ರಗತಿವಾಹಿನಿ ಸುದ್ದಿ: ರಾಜ್ಯದ ಮಾಜಿ ಸಿಎಂ ಓರ್ವರಿಗೆ ಸಂಬಂಧಿಸಿ ಅಶ್ಲೀಲ ಸಿಡಿ ಶೀಘ್ರವೇ ರಿಲೀಸ್ ಆಗಲಿದೆ ಎಂದು ಕಾಂಗ್ರೆಸ್‌ನ ಮಾಜಿ ಶಾಸಕ ಆನಂದ ನ್ಯಾಮಗೌಡ ಅವರು ಹೇಳಿಕೆ ನೀಡಿದ್ದು, ಭಾರಿ ಚರ್ಚೆಗೆ ಕಾರಣವಾಗಿದೆ.‌

ಬಾಗಲಕೋಟೆಯ ಜಮಖಂಡಿಯಲ್ಲಿ ಮಾತನಾಡಿರುವ ಅವರು, ಹೀಗೊಂದು ಸುದ್ದಿ ಇವತ್ತೇ ಬಂದಿದೆ. ರಾಜ್ಯದ ಅದರಲ್ಲೂ ಬಿಜೆಪಿಯ ಮಾಜಿ ಸಿಎಂ ಓರ್ವರ ಅಶ್ಲೀಲ ಸಿಡಿ ಬಿಡುಗಡೆಯಾಗಲಿದೆ. ಅಲ್ಲದೇ ಆ ಸಿಡಿಯು ಬಿಜೆಪಿ ನಾಯಕನದ್ದೇ ಎಂದು ಅವರು ಹೇಳಿದ್ದಾರೆ. 

ಅದು ಯಾರಿಗೆ ಸಂಬಂಧಿಸಿದ ಸಿಡಿ ಎಂಬುವುದು ನ್ಯಾಮಗೌಡ ಅವರು ಸದ್ಯಕ್ಕೆ ಬಹಿರಂಗಪಡಿಸಿಲ್ಲ. ಆದರೆ ಅವರ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಇದೀಗ ಭಾರೀ ಕುತೂಹಲಕ್ಕೆ ಕಾರಣವಾಗಿದೆ. 

ಮಾಜಿ ಸಿಎಂ ಒಬ್ಬರ ಸಿಡಿ ಇದೆ, ನಾನೂ ಆ ಸಿಡಿಯ ತುಣುಕನ್ನು ನೋಡಿದ್ದೇನೆ ಎಂದು ನ್ಯಾಯವಾದಿಯೊಬ್ಬರು ಈಚೆಗೆ ಟ್ವಿಟರ್ ನಲ್ಲಿ ಹೆಸರು ಹಾಕಿಯೇ ಬರೆದಿದ್ದು ಇಲ್ಲಿ ಉಲ್ಲೇಖನೀಯ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button