ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಸಂಗೊಳ್ಳಿ ಎಂದಾಕ್ಷಣ ರಾಯಣ್ಣನ ನೆನಪಾಗುತ್ತದೆ. ರಾಯಣ್ಣ ವೀರರಾಣಿ ಕಿತ್ತೂರು ಚನ್ನಮ್ಮನ ಬಲಗೈ ಬಂಟ. ರಾಯಣ್ಣನ ಊರು ಸಂಗೊಳ್ಳಿ. ಈ ಸಂಗೊಳ್ಳಿಯ ಗುರುಮಠ ಹಿರೇಮಠ. ಈ ಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿಯವರ ಪಟ್ಟಾಧಿಕಾರ ಮಹೋತ್ಸವ ಬುಧವಾರ ಜರುಗಿತು.
ಈ ಸಂದರ್ಭದಲ್ಲಿ ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಶ್ರೀಗಳನ್ನು ಗೌರವಿಸಿ ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಬೈಲಹೊಂಗಲದ ಡಾ. ಮಹಾಂತೇಶ ಶಾಸ್ತ್ರೀಯವರು ನೇತೃತ್ವ ವಹಿಸಿಕೊಂಡಿದ್ದರು. ಸೋಮೇಶ್ವರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ರಾಜು ಕುಡಸೋಮಣ್ಣವರ ಈ ಸಂದರ್ಭದಲ್ಲಿ ಆಗಮಿಸಿ ಶ್ರೀಗಳ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ಅವರು, ೧೨ ವರ್ಷದಲ್ಲಿ ಶ್ರೀಮಠದ ಅಭಿವೃದ್ಧಿ ಮಾಡಿದ್ದಾರೆ. ನಮಗೆ ಸಂತಸ ತಂದಿದೆ. ನಾವು ಅವರ ಪಟ್ಟಾಧಿಕಾರದ ಸಂದರ್ಭದಲ್ಲಿ ಭಾಗಿಯಾಗಿ ಕಾರ್ಯಕ್ರಮದ ಸಂತೋಷದ ಗಳಿಗೆ ನೋಡಿದ್ದೇವೆ. ಇಂದು ಶ್ರೀಗಳ ತ್ರಿಕಾಲ ಲಿಂಗ ಪೂಜೆ, ಆಚಾರವಂತರಾಗಿ ಅದ್ಬುತ ಕಾರ್ಯವನ್ನು ಮಾಡುತ್ತಿದ್ದಾರೆ ಎಂದರು.
ಸನ್ಮಾನ ಸ್ವೀಕರಿಸಿದ ಮಠಾಧ್ಯಕ್ಷರಾದ ಸಂಗೊಳ್ಳಿಯ ಶ್ರೀ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಶ್ರೀ ರಂಭಾಪುರಿ ಜಗದ್ಗುರು ಡಾ.ವೀರ ಸೋಮೇಶ್ವರ ಭಗವತ್ಪಾದರ ಕೃಪಾಶಿರ್ವಾದವೆ ಇಷ್ಟಕ್ಕೆಲ್ಲ ಕಾರಣ. ತಮ್ಮ ಪೀಠದಲ್ಲಿ ಇರಿಸಿಕೊಂಡು ಮಾರ್ಗದರ್ಶನ ಮಾಡಿ ಅಲ್ಲಿಯ ಗುರುಕುಲದ ಜವಾಬ್ದಾರಿ ನೀಡಿ ನಮಗೆ ಬೆಳೆಯಲು ಅನುಕೂಲ ಮಾಡಿಕೊಟ್ಟವರು ಶ್ರೀಮದ್ ಜಗದ್ಗುರು ರಂಭಾಪುರಿ ಸನ್ನಿಧಿಯವರು. ಜಗದ್ಗುರುಗಳ ಆಶೀರ್ವಾದ, ಭಕ್ತರ ಸಹಕಾರದಿಂದ ಮಠ ಬೆಳೆದಿದೆ. ಇನ್ನೂ ಬೆಳೆಯಲು ಭಕ್ತರ ಸಹಕಾರ ಅವಶ್ಯ ಎಂದರು.
ಇದೇ ಸಂದರ್ಭದಲ್ಲಿ ಹುಕ್ಕೇರಿ ಶ್ರೀಗಳ ಬಾಂಧವ್ಯದ ಬಗ್ಗೆ ಮೆಲಕು ಹಾಕಿದರು. ೧೨ ವರ್ಷ ಪೂರೈಸಿರುವ ಶ್ರೀಗಳು ಇನ್ನೂ ನೂರಾರು ಕಾಲ ಸಮಾಜದ ಕಾರ್ಯ ಮಾಡಲಿ ಎಂದು ಭಕ್ತರು ಸಂತೋಷದಿಂದ ಅಭಿಪ್ರಾಯ ಹಂಚಿಕೊಂಡರು.
ಸಂವಿಧಾನದಷ್ಟೇ ಬಸವಣ್ಣವರ ವಚನಗಳು ಹರಿತವಾಗಿವೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ