
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಿಲ್ಲಾ ಪೊಲೀಸ್ ಅಧೀಕ್ಷಕ ಸಂಜೀವ ಪಾಟೀಲ ಅವರು ಜ.26ರಂದು ಮಧ್ಯಾಹ್ನ 12ರಿಂದ 2ರವರೆಗೆ ಸಾರ್ವಜನಿಕರ ಕುಂದುಕೊರತೆ ಆಲಿಸಲು ಫೋನ್ ಇನ್ ಕಾರ್ಯಕ್ರಮ ಆಯೋಜಿಸಿದ್ದಾರೆ.
ಒಂದೇ ಫೋನ್ ಕರೆಯಲ್ಲಿ ಪರಿಹಾರ ಸೂಚಿಸುವ ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಬೆಳಗಾವಿ ಎಸ್ಪಿಯವರಿಗೆ ಫೋನ್ ಕರೆ ಮಾಡಿ ತಮ್ಮ ದೂರು, ಅನಿಸಿಕೆ ಹಾಗೂ ಸಲಹೆ ಸೂಚನೆಗಳನ್ನು ಹಂಚಿಕೊಳ್ಳಬಹುದು.
*ನಿಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಯವರು ನಿಮ್ಮ ದೂರಿಗೆ ಸರಿಯಾಗಿ ಸ್ಪಂದಿಸದಿದ್ದರೆ ಗಮನ ಸೆಳೆಯಬಹುದು.
*ಯಾವುದೇ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಬಹುದು.- ಮಾಹಿತಿ ನೀಡಿದವರ ಹೆಸರು ಮತ್ತು ಮೊಬೈಲ್ ಸಂಖ್ಯೆ ಗೌಪ್ಯವಾಗಿಡಲಾಗುವುದು.
*ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರಿಕರು ಸಹ ತಮ್ಮ ಅನಿಸಿಕೆ ಹಂಚಿಕೊಳ್ಳಬಹುದು.
ಕರೆ ಮಾಡಬೇಕಾದ ಸಂಖ್ಯೆ: 0831- 2405226
ಕರೆ ಮಾಡಬೇಕಾದ ಸಮಯ: ಮಧ್ಯಾಹ್ನ 12ರಿಂದ 2 ಗಂಟೆವರೆಗೆ.
ಗ್ಯಾಸ್ ಸಿಲಿಂಡರ್ ಸ್ಫೋಟ: ಆಶಾ ಕಾರ್ಯಕರ್ತೆಗೆ ಹಣಕಾಸಿನ ನೆರವು ನೀಡಿದ ಡಾ. ಸೋನಾಲಿ ಸರ್ನೋಬತ್
https://pragati.taskdun.com/gas-cylinder-explosion-financial-assistance-to-asha-worker-by-dr-sonali-sarnobat/
ಮಂದಿರ ಉದ್ಘಾಟನೆ ಸಮಾರಂಭದಲ್ಲಿ ಎಂಎಲ್ ಸಿ ಚನ್ನರಾಜ ಹಟ್ಟಿಹೊಳಿ ಭಾಗಿ
https://pragati.taskdun.com/mlc-channaraja-hattiholi-participated-in-the-opening-ceremony-of-the-temple/
ಕುಡಿದ ಮತ್ತಿನಲ್ಲಿ ಸೋದರನಿಗೇ ಚೂರಿ ಇರಿದು ಕೊಲೆ
https://pragati.taskdun.com/drunk-brother-stabbed-to-death/