ಪ್ರಗತಿವಾಹಿನಿ ಸುದ್ದಿ, ಅಮ್ರೋಹಾ: ಮರೆಗುಳಿತನ ಎಂಬುದು ಅವಾಂತರದ ಮೂಲ. ಅದರಲ್ಲೂ ವೈದ್ಯರೊಬ್ಬರ ಮರೆಗುಳಿತನ ಅನಾಹುತಕ್ಕೂ ಮೂಲವಾದೀತು.
ಅದಕ್ಕೆ ಉದಾಹರಣೆ ಎಂಬಂತೆ ಘಟನೆ ಉತ್ತರ ಪ್ರದೇಶದ ಅಮ್ರೋಹಾದ ಬನ್ಸ್ ಖೇರಿ ಗ್ರಾಮದ ಮಹಿಳೆಯೊಬ್ಬರು ಅನುಭವಿಸಿದ ಯಾತನೆಯೇ ಸಾಕ್ಷಿ.
ಆಪರೇಶನ್ ನಡೆಸಿದ ವೈದ್ಯರೊಬ್ಬರು ಆಕೆಯ ಹೊಟ್ಟೆಯೊಳಗೆ ಟವೆಲ್ ಮರೆತು ಬಿಟ್ಟ ಘಟನೆಯೊಂದು ನಡೆದಿದ್ದು ಈ ಬಗ್ಗೆ ಮುಖ್ಯ ವೈದ್ಯಕೀಯ ಅಧಿಕಾರಿ (ಸಿಎಂಒ) ರಾಜೀವ್ ಸಿಂಘಾಲ್ ಸಮಗ್ರ ತನಿಖೆಗೆ ಆದೇಶಿಸಿದ್ದಾರೆ.
ನಜ್ರಾನಾ ಎಂಬ ಮಹಿಳೆ ಹೊಟ್ಟೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ ತಮ್ಮ ಟವೆಲ್ ಮರೆತು ಮಹಿಳೆ ಹೊಟ್ಟೆಯೊಳಗೆ ಬಿಟ್ಟು ಹೊಲಿಗೆ ಹಾಕಿದ್ದರು!
ಶಸ್ತ್ರಕ್ರಿಯೆ ನಂತರ ಮಹಿಳೆ ಹೊಟ್ಟೆ ನೋವು ದುಪ್ಪಟ್ಟಾಗಿ ಈ ಬಗ್ಗೆ ದೂರು ನೀಡಿದ ನಂತರ, ವೈದ್ಯರು ಅವರನ್ನು ಇನ್ನೂ ಐದು ದಿನಗಳವರೆಗೆ ಆಸ್ಪತ್ರೆಯಲ್ಲೇ ಅಡ್ಮಿಟ್ ಮಾಡಿದರು. ಈ ಬಗ್ಗೆ ಮಹಿಳೆಯ ಕುಟುಂಬದವರು ವಿಚಾರಿಸಿದಾಗ ಹೊರಗಿನ ಚಳಿಯಿಂದ ಅವರಿಗೆ ಹೊಟ್ಟೆ ನೋವು ಬರುತ್ತಿದೆ ಎಂದು ಆಸ್ಪತ್ರೆಯವರು ಹೇಳಿದರು.
ಮನೆಗೆ ಬಂದರೂ ಆರೋಗ್ಯ ಸುಧಾರಿಸದೇ ಇದ್ದಾಗ ನಜ್ರಾನಾ ಅವರ ಪತಿ ಅವರನ್ನು ಅಮ್ರೋಹದ ಮತ್ತೊಂದು ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆಗೆ ಒಳಪಡಿಸಿದಾಗ ವೈದ್ಯರ ಟವೆಲ್ ಗೋಚರವಾಯಿತು. ಅದನ್ನು ಹೊರತೆಗೆಯಲೆಂದೇ ಮತ್ತೊಂದು ಶಸ್ತ್ರಕ್ರಿಯೆ ಕೂಡ ನಡೆಸಬೇಕಾಯಿತು.
*ಬೆಳಗಾವಿಯಲ್ಲಿ ಖತರ್ನಾಕ್ ಬೈಕ್ ಕಳ್ಳರ ಬಂಧನ*
https://pragati.taskdun.com/bike-thieves-arrested-in-belagavi/
SSLC, PUC ಪಾಸಾದವರಿಗೂ ಸರಕಾರಿ ಉದ್ಯೋಗಾವಕಾಶ
https://pragati.taskdun.com/govt-job-opportunity-for-sslc-puc-passed/
ಜೂನಿಯರ್ ಟೆಲಿಕಾಂ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
https://pragati.taskdun.com/applications-called-for-junior-telecom-officer-posts/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ