Latest

ಜಮೀರ್ ಅಹಮದ್ ಫುಟ್ಪಾತ್ ಗಿರಾಕಿ ಎಂದ ರೇಣುಕಾಚಾರ್ಯ

ಪ್ರಗತಿವಾಹಿನಿ ಸುದ್ದಿ, ಹಾಸನ: ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹಾಗೂ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ನಡುವಿನ ವಾಕ್ಸಮರ ಮುಂದುವರೆದಿದೆ.  ಜಮೀರ್ ಅಹಮದ್ ಖಾನ್ ಫುಟ್ಪಾತ್ ಗಿರಾಕಿ ಎಂದು ರೇಣುಕಾಚಾರ್ಯ ಗುಡುಗಿದ್ದಾರೆ.

ಹಾಸನದಲ್ಲಿ ಮಾತನಾಡಿರುವ ರೇಣುಕಾಚಾರ್ಯ, ಜಮೀರ್ ಅಹಮದ್ ಫುಟ್ಪಾತ್ ಗಿರಾಕಿ. ಬೀದಿಯಲ್ಲಿ ನಿಂತಿದ್ದ ಜಮೀರ್ ಅಹಮದ್ ಎಲ್ಲೆಲ್ಲೋ ಬಸ್ ಓಡಿಸಿಕೊಂಡಿದ್ದ. ಆತನನ್ನು ಶಾಸಕನನ್ನಾಗಿ ಮಾಡಿದ್ದು ದೇವೇಗೌಡರ ಕುಟುಂಬ. ಆದರೆ, ಅವರ ಬೆನ್ನಿಗೇ ಚೂರಿ ಹಾಕಿದ ಜಮೀರ್ ಅಹಮದ್ ಈಗ ನನ್ನ ಬಗ್ಗೆ ಮಾತನಾಡುತ್ತಿದ್ದಾನೆ ಎಂದು ಕಿಡಿಕಾರಿದ್ದಾರೆ.

ಇನ್ನು ಮಾಜಿ ಸಿಎಂ ಕುಮಾರಸ್ವಾಮಿಗೆ ಬೆದರಿಕೆ ಪತ್ರದ ಬಗ್ಗೆ ಪ್ರತಿಕ್ರಿಯಿಸಿದ ರೇಣುಕಾಚಾರ್ಯ, ಇದೆಲ್ಲ ಜನರ ವಿಶ್ವಾಸ ಗಿಟ್ಟಿಸುವ ಗಿಮಿಕ್.  ಅವರಿಗೆ ಯಾರಿಂದ ಬೆದರಿಕೆ ಇದೆ ಅಂತ ಗೊತ್ತಿಲ್ಲ. ಕುಮಾರಸ್ವಾಮಿ ಅನುಕಂಪದ ಮೂಲಕ ಜನರ ಹತ್ತಿರವಾಗಲು ಈ ರೀತಿ ಹೇಳಿಕೆಗಳನ್ನು ನೀಡಿದ್ದಾರೆ ಎಂದರು.

ಕುಮಾರಸ್ವಾಮಿ ಅವರಿಗೆ ಬೆದರಿಕೆ ಇದ್ದರೆ ದೂರು ಕೊಡಲಿ. ಯಾರಿಂದ ಬೆದರಿಕೆ ಪತ್ರ ಬಂದಿದೆ, ಯಾವಾಗ ಬೆದರಿಕೆ ಕರೆ ಬಂದಿದೆ ಅಂತ ಮಾಹಿತಿ ಕೊಡಲಿ. ಗೃಹ ಇಲಾಖೆ ಅಥವಾ ಮುಖ್ಯಮಂತ್ರಿಗಳಿಗೆ ದಾಖಲೆ ತಲುಪಿಸಲಿ ಎಂದು ಆಗ್ರಹಿಸಿದರು.

Home add -Advt

ಹೆಚ್ ವಿಶ್ವನಾಥ್ ಮುಖ್ಯಮಂತ್ರಿಗಳ ಮಾತು ಕೇಳಬೇಕಿತ್ತು. ವಿಶ್ವನಾಥ್ ಅವರಿಗೆ ಸ್ಪರ್ಧೆ ಮಾಡಬೇಡಿ ಅಂತ ಸಿಎಂ ಹೇಳಿದ್ದರು. ಈಗ ಸೋತಿದ್ದಾರೆ. ಆ ನೋವಿನಲ್ಲಿ ಮಾತನಾಡಿದ್ದಾರೆ. ನೋವು ಹೇಳಿಕೊಳ್ಳುವುದು ತಪ್ಪೇ ? ಅವರ ಮಾತಿಗೆ ಹೆಚ್ಚು ಒತ್ತು ಕೊಡುವ ಅಗತ್ಯವಿಲ್ಲ ಎಂದು ಹೇಳಿದರು.


Related Articles

Back to top button