ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಉತ್ತರ ಭಾರತದ ರಾಜ್ಯಗಳಲ್ಲಿ ವ್ಯಾಪಕ ಮಳೆಗೆ ಹಲವು ಪ್ರಮುಖ ನದಿಗಳು ಮಟ್ಟ ಮೀರಿ ಹರಿದು ಅವಾಂತರಕ್ಕೆ ಕಾರಣವಾಗಿವೆ.
ಏತನ್ಮಧ್ಯೆ ಯಮುನಾ ನದಿ ಕೂಡ ಹಿಂದೆಂದೂ ಕಾಣದಂಥ ಪ್ರವಾಹ ಸೃಷ್ಟಿಸಿದ್ದು ಪ್ರವಾಹದ ನೀರು ಗುರುವಾರ ರಾತ್ರಿ ಸುಪ್ರೀಂ ಕೋರ್ಟ್ ಆವರಣದವರೆಗೂ ಬಂದು ತಲುಪಿದೆ.
ಈ ದೃಶ್ಯಗಳು ಜಾಲತಾಣಗಳಲ್ಲಿ ಕಾಣಿಸಿಕೊಂಡಿದ್ದು ಇದು ಬಹುಶಃ ಚರಂಡಿಗಳಿಂದ ನೀರು ಹಿಮ್ಮುಖ ಹರಿವಿನಿಂದ ಸಂಭವಿಸಿದೆ ಎನ್ನಲಾಗಿದೆ. ಪ್ರತ್ಯೇಕವಾಗಿ,
ಶುಕ್ರವಾರ ಬೆಳಗ್ಗೆ ರಾಜ್‌ಘಾಟ್ ನೀರಿನಲ್ಲಿ ಮುಳುಗಿರುವ ಚಿತ್ರಗಳು ಸಹ ಜಾಲತಾಣಗಳಲ್ಲಿ ವೈರಲ್ ಆಗಿವೆ. ದಿಲ್ಲಿ, ಐಎಸ್‌ಬಿಟಿ ಮತ್ತು ಕಾಶ್ಮೀರ್ ಗೇಟ್ ಬಳಿಯ ಪ್ರಮುಖ ಮಾರ್ಗವಾಗಿರುವ ಐಟಿಒನಲ್ಲೂ ತೀವ್ರ ಪ್ರಮಾಣದ ನೀರು ಹರಿದು ಜನಜೀವನ ಅಸ್ತವ್ಯಸ್ತಗೊಳಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ