Kannada NewsKarnataka NewsNational

*ಐಎಎಸ್ ಅಧಿಕಾರಿಗಳ ವರ್ಗಾವಣೆ ಮೂಲಕ ಮೇಜ‌ರ್ ಸರ್ಜರಿ ಮಾಡಿದ ಸರ್ಕಾರ*

ಪ್ರಗತಿವಾಹಿನಿ ಸುದ್ದಿ: ರಾಜ್ಯ ಸರ್ಕಾರ ಸುಗಮವಾದ ಆಡಳಿತ ನಡೆಸಲು ಮೇಜ‌ರ್ ಸರ್ಜರಿ ಮಾಡಿದೆ. ಹಿರಿಯ ಹಾಗೂ ಕಿರಿಯ ಐಎಎಸ್ ಅಧಿಕಾರಿಗಳನನ್ನು ವರ್ಗಾವಣೆ ಮಾಡಲಾಗಿದೆ.

ವರ್ಗಾವಣೆಗೊಂಡ ಅಧಿಕಾರಿಗಳ ವಿವರ

ಪೊಮ್ಮಲ ಸುನಿಲ್ ಕುಮಾರ್, ಐಎಎಸ್, ಬೆಂಗಳೂರಿನ ಕಂದಾಯ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದ ಇವರು ಈಗ ಬೆಂಗಳೂರು ಉತ್ತರ ನಗರ ನಿಗಮದ ಆಯುಕ್ತರಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಲಿದ್ದಾರೆ.

ರಮೇಶ್ ಕೆ.ಎನ್. ಐಎಎಸ್, ಬಿ.ಬಿ.ಎಂ.ಪಿಯ ವಲಯ ಆಯುಕ್ತರಾಗಿದ್ದ ಇವರನ್ನು ಬೆಂಗಳೂರು ದಕ್ಷಿಣ ನಗರ ನಿಗಮದ ಆಯುಕ್ತರನ್ನಾಗಿ ನೇಮಿಸಲಾಗಿದೆ.

Home add -Advt

ರಮೇಶ್ ಡಿ.ಎಸ್. ಐಎಎಸ್, ರಾಷ್ಟ್ರೀಯ ತೋಟಗಾರಿಕಾ ಮಿಷನ್‌ನ ನಿರ್ದೇಶಕರಾಗಿದ್ದ ಇವರನ್ನು ಬೆಂಗಳೂರು ಪೂರ್ವ ನಗರ ನಿಗಮದ ಆಯುಕ್ತರನ್ನಾಗಿ ನೇಮಿಸಲಾಗಿದೆ. ನಗರದ ಪೂರ್ವ ಭಾಗದ ವೇಗವಾಗಿ ಬೆಳೆಯುತ್ತಿರುವ ಪ್ರದೇಶಗಳ ಅಭಿವೃದ್ಧಿಯ ಜವಾಬ್ದಾರಿ ಇವರಿಗೆ ಸಿಕ್ಕಿದೆ.

ರಾಜೇಂದ್ರ ಚೋಳನ್ ಪಿ. ಐಎಎಸ್, ಉಪಮುಖ್ಯಮಂತ್ರಿಗಳ ಕಾರ್ಯದರ್ಶಿಯ ಹುದ್ದೆಯಿಂದ ಬದಲಾವಣೆಗೊಂಡು, ಇವರು ಈಗ ಬೆಂಗಳೂರು ಸೆಂಟ್ರಲ್ ಸಿಟಿ ಕಾರ್ಪೊರೇಷನ್ (ಕೇಂದ್ರ ನಗರ ನಿಗಮ) ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಆಯುಕ್ತರಾಗಿ ಕಾರ್ಯನಿರ್ವಹಿಸಲಿದ್ದಾರೆ. 

ಲೋಖಂಡೇ ಸ್ನೇಹಲ್ ಸುಧಾಕ‌ರ್ (ಐಎಎಸ್, 2017), ದಿಗ್ವಿಜಯ್ ಬೋಡ್ಕ (ಐಎಎಸ್, 2018), ಮತ್ತು ರಾಹುಲ್ ಶರಣಪ್ಪ ಸಂಕನೂರ್ (ಐಎಎಸ್, 2019) ಅವರ ವರ್ಗಾವಣೆ ಆಗಿದೆ.‌

ನಗರ ನಿಗಮಗಳ ಕಾರ್ಯನಿರ್ವಹಣೆಯನ್ನು ಬಲಪಡಿಸುವ ದೃಷ್ಟಿಯಿಂದ, ಹಲವಾರು ಐಎಎಸ್‌ ಅಧಿಕಾರಿಗಳನ್ನು ವಿವಿಧ ನಿಗಮಗಳ ಹೆಚ್ಚುವರಿ ಆಯುಕ್ತರಾಗಿ (ಅಭಿವೃದ್ಧಿ) ನೇಮಿಸಲಾಗಿದೆ. 

Related Articles

Back to top button