Kannada NewsKarnataka News

ಮೊದಲ‌ ಹೆಂಡತಿಯ ಕೊಲೆ ಮಾಡಿದ ಗಂಡ ಹಾಗೂ ಎರಡನೇ ಹೆಂಡತಿಯ ಮಗ 

ಪ್ರಗತಿವಾಹಿನಿ ಸುದ್ದಿ: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಮೊದಲನೇ ಹೆಂಡತಿಯನ್ನು  ಗಂಡ ಹಾಗೂ ಎರಡನೇ ಹೆಂಡತಿಯ ಮಗ ಸೇರಿ ಮಚ್ಚಿನಿಂದ ಕೊಚ್ಚಿ ಕೊಲೆ ಗೈದಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಸೊನ್ನೇನಹಳ್ಳಿಯಲ್ಲಿ ನಡೆದಿದೆ.

ಗ್ರಾಮದ ಐವತ್ತು ವರ್ಷದ ಪದ್ಮಮ್ಮ ಕೊಲೆಯಾದ ಮಹಿಳೆ. 60 ವರ್ಷದ ಮುನಿರೆಡ್ಡಿ ಹಾಗೂ ಈತನ ಎರಡನೇ ಪತ್ನಿಯ ಮಗ ಗಿರೀಶ್ ಕೊಲೆ ಮಾಡಿದ ಆರೋಪಿಗಳು. ಈ ಘಟನೆಗೆ ಸಂಬಂಧಿಸಿ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮೃತ ದೇಹವನ್ನು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ.

Home add -Advt

ಕೊಲೆ ಮಾಡಿದ ಗಂಡ ಮುನಿರೆಡ್ಡಿ ಹಾಗೂ ಆತನ ಎರಡನೇ ಹೆಂಡತಿಯ ಮಗನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ

Related Articles

Back to top button