Kannada NewsKarnataka NewsNationalPolitics

*ವಯನಾಡ್ ದುರಂತ ಸ್ಥಳದಲ್ಲಿ ಬೆಳಗಾಗುವುದರೊಳಗೆ ಸೇತುವೆ ನಿರ್ಮಿಸಿದ ಭಾರತೀಯ ಸೇನೆ*

ಪ್ರಗತಿವಾಹಿನಿ ಸುದ್ದಿ: ಕೇರಳದ ವಯನಾಡಿನಲ್ಲಿ ಸಂಭವಿಸಿದ ಗುಡ್ಡ ಕುಸಿತ ದುರಂತದಲ್ಲಿ ಸ್ಥಳದಲ್ಲು ಭಾರತೀಯ ಸೇನೆ ಸೇರಿದಂತೆ ಇತರ ರಕ್ಷಣಾ ತಂಡಗಳು ಕಾರ್ಯಾಚರಣೆಯಲ್ಲಿ ಕೈಜೋಡಿಸಿವೆ. ಇದೀಗ ಕೆಲವು ಸಂಪರ್ಕ ಕಡಿತಗೊಂಡ ಪ್ರದೇಶಗಳಿಗೆ ಭಾರತೀಯ ಸೇನೆ ರಾತ್ರಿ ಬೆಳಗಾಗುವುದರೊಳಗೆ ಸೇತುವೆ ನಿರ್ಮಿಸಿದೆ.

ವಯನಾಡಿನಲ್ಲಿ ಭಾರತೀಯ ಸೇನೆಯ ಎಲ್ಲಾ ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ವಹಿಸಿರುವ ಮೇಜರ್ ಜನರಲ್ ವಿಟಿ ಮ್ಯಾಥ್ಯ ಅವರು ಇಂದು ಬೆಳಗ್ಗೆ ಕೇರಳದ ಸಿಎಂ ಪಿಣರಾಯಿ ವಿಜಯನ್ ಅವರನ್ನು ಭೇಟಿಯಾಗಿ ರಕ್ಷಣಾ ಕಾರ್ಯಾಚರಣೆಗಳ ಬಗ್ಗೆ ಮಾಹಿತಿ ನೀಡಿದರು. ಕಡಿಮೆ ಸಮಯದಲ್ಲಿ ಸೇತುವೆ ನಿರ್ಮಾಣ ಸೇರಿದಂತೆ ಸೇನೆಯ ಪ್ರಯತ್ನಗಳನ್ನು ಸಿಎಂ ಹಾಗೂ ಸಚಿವ ಸಂಪುಟ ಶ್ಲಾಘಿಸಿದೆ.

ರಾತ್ರಿಯಿಡೀ ಚೂರಲ್‌ಮಲಾ- ಮುಂಡೇಕ್ಕಾಯಿ ನಡುವೆ ಫುಟ್ ಬ್ರಿಡ್ಜ್, ಬೈಲಿ ಬ್ರಿಡ್ಜ್ ಪ್ಯಾನೆಲ್‌ಗಳನ್ನು ಬಳಸುವ ಸುಧಾರಿತ ತಾತ್ಕಾಲಿಕ ಸೇತುವೆ ನಿರ್ಮಿಸಿ ರಕ್ಷಣಾ ತಂಡಗಳು ಸಂಪರ್ಕ ಕಾರ್ಯ ಹಾಗೂ ಶೋಧ ಕಾರ್ಯ ಕೈಗೊಳ್ಳಲು ರಕ್ಷಣಾ ತಂಡಗಳು ಅನುಕೂಲ ಮಾಡಿಕೊಟ್ಟಿವೆ. ಸೇತುವೆ ನಿರ್ಮಾಣದಿಂದಾಗಿ ನದಿಯ ಇನ್ನೊಂದು ಬದಿಯಲ್ಲಿ ಸಿಲುಕಿರುವ ಜನರನ್ನು ತ್ವರಿತವಾಗಿ ಸ್ಥಳಾಂತರಿಸಲಾಗುತ್ತಿದೆ.

ಭಾರತೀಯ ಸೇನೆಯ ಬ್ರಿಡ್ಜ್ ಸಲಕರಣೆಗಳನ್ನು ವಯನಾಡಿಗೆ ತಲುಪಿಸಲು ಜುಲೈ 30 ರಂದೇ ಬೆಂಗಳೂರು ಪೊಲೀಸರ ವಿನಿಯೋಗದಿಂದ ಬಾರತೀಯ ಸೇನೆಯ ಎಂಇಜಿ ಮತ್ತು ಸೆಂಟರ್‌ನ ಪಡೆಗಳು ರಸ್ತೆಯಲ್ಲಿನ ದಟ್ಟಣೆಯನ್ನು ಕಡಿಮೆ ಮಾಡಿವೆ. ವೇಗವಾಗಿ ಚಲಿಸುವ ಲೇನ್‌ಗಳನ್ನು ಒದಗಿಸುವ ಮೂಲಕ ತ್ವರಿತವಾಗಿ ಬೆಂಗಳೂರಿನಿಂದ ತಾತ್ಕಾಲಿಕ ಸೇತುವೆ ಪರಿಕರಗಳನ್ನು ಸ್ಥಳಾಂತರಿಸಲಾಗಿದೆ.

ಮೀಪಾಡಿ- ಚೂರ್ಮಲಾ ಸಂಪರ್ಕಿಸುವ ಬೈಲಿ ಸೇತುವೆಯ ನಿರ್ಮಾಣವನ್ನು ಮದ್ರಾಸ್ ಎಂಜಿನಿಯರ್ಸ್ ಟಾಸ್ಕ್ ಫೋರ್ಸ್ ಕಳೆದ ರಾತ್ರಿಯಿಡೀ ಮಾಡಿದೆ. ಸೇತುವೆ ಪೂರ್ಣವಾದ ಬಳಿಕ ಸಂಪರ್ಕ ಕಡಿತಗೊಂಡ ಪ್ರದೇಶಗಳಿಗೆ ಹೆಚ್ಚಿನ ಎಂಜಿನಿಯರ್ ಉಪಕರಣಗಳನ್ನು ರಕ್ಷಣಾ ಕಾರ್ಯ ಕೈಗೊಳ್ಳುವ ಸಲುವಾಗಿ ಕೊಂಡೊಯ್ಯಲಾಗುತ್ತಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

------WebKitFormBoundary4lwhIWpArXpQhLS����

Related Articles

Back to top button