ದೇಶದ ಮಹನೀಯರ ಸ್ಮರಣೆಯೇ ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮದ ಉದ್ದೇಶ :ಶಾಸಕಿ ಶಶಿಕಲಾ ಜೊಲ್ಲೆ


ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ :ಸ್ವಾತಂತ್ರ್ಯಕ್ಕಾಗಿ ಪ್ರಾಣ ಕಳೆದುಕೊಂಡ ಮಹನೀಯರ ಸ್ಮರಣೆಯೇ ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮದ ಉದ್ದೇಶ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.
ಚಿಕ್ಕೋಡಿ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನನ್ನ ಮಣ್ಣು ನನ್ನ ದೇಶ ಅಭಿಯಾನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿ
ನಮ್ಮ ದೇಶದ ಮೇಲೆ ಸಾಕಷ್ಟು ಆಕ್ರಮಣಗಳಾದವು.ಆದರೂ ಕೂಡಾ ನಮ್ಮ ದೇಶದ ಸಂಸ್ಕೃತಿ,ಪರಂಪರೆ ಬದಲಾಗಿಲ್ಲ..ದೇಶದ ಮಣ್ಣಿಗಾಗಿ ಸಾಕಷ್ಟು ಜನ ಮಹಿನೀಯರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.ಈ ಹಿನ್ನಲೆಯಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ಕಳೆದುಕೊಂಡುವರಿಗೆ ಸ್ಮರಣೆಗಾಗಿ ಈ ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮದ ಉದ್ದೇಶವಾಗಿದೆ..ಮಣ್ಣು ಶೇಖರಿಸಿ ದೇಶದ ವೀರ ಯೋಧರ ಅಮೃತ ವಾಟಿಕಾ ವನದಲ್ಲಿ ಅದನ್ನು ಸೇರಿಸುವ ಸಂಕಲ್ಪದ ಪುಣ್ಯ ದಿನವಿದು ಎಂದರು.
ಬೈಟ್: ಶಶಿಕಲಾ ಜೊಲ್ಲೆ,ಮಾಜಿ ಸಚಿವೆ,ಶಾಸಕಿ
ಬಳಿಕ ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ ದೇಶದ ಬಗ್ಗೆ ಅಭಿಮಾನವನ್ನು ಹೆಚ್ಚಿಸುವ ಈ ಕಾರ್ಯಕ್ರಮದ ಧೈಯವಾಗಿದೆ ಎಂದರು.
ಈ ಸಂಧರ್ಭದಲ್ಲಿ ಚಿಕ್ಕೋಡಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ! ರಾಜೇಶ ನೇರ್ಲಿ,ಚಿಕ್ಕೋಡಿ ಮಂಡಲದ ಅಧ್ಯಕ್ಷ ಸಂಜಯ ಪಾಟೀಲ, ಚಿಕ್ಕೋಡಿ ಪುರಸಭೆ ಹಿರಿಯ ಸದಸ್ಯ ಜಗದೀಶ ಪ್ರಭಾರಿ ಪ್ರಕಾಶ ಅಕ್ಕಲಕೋಟ,ಶಿವಾನಂದ ನವನಾಳೆ,ಸತೀಶ ಅಪ್ಪಾಜಿಗೋಳ, ಚಂದ್ರಶೇಖರ ಕವಟಗಿ,ರಮೇಶ ಕಾಳನ್ನವರ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ