ಧ್ವಜ ಹಿಡಿದು ಮೇಲೇಳಲು ಸತ್ತು ಹೋಗುತ್ತಿದ್ದ ಎಂಇಎಸ್ ಯತ್ನ; ನಾಳೆ ಬೃಹತ್ ಪ್ರತಿಭಟನೆಗೆ ಸಿದ್ಧತೆ

ಪಾಲಿಕೆ ಚುನಾವಣೆ ಮೇಲೆ ಕಣ್ಣು
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಮುಳುಗುವವನಿಗೆ ಹುಲ್ಲುಕಡ್ಡಿ ಆಸರೆ ಎನ್ನುವಂತೆ, ಇನ್ನೇನು ಸತ್ತೇ ಹೋಯಿತು ಎನ್ನುವ ಸ್ಥಿತಿಯಲ್ಲಿದ್ದ ಮಹಾರಾಷ್ಟ್ರ ಏಕಾಕರಣ ಸಮಿತಿಗೆ ಈಗ ಧ್ವಜ ವಿವಾದ ಸಿಕ್ಕಿದೆ.

ಬೆಳಗಾವಿ ಮಹಾನಗರ ಪಾಲಿಕೆ ಎದುರು ಹಾಕಲಾಗಿರುವ ಕನ್ನಡ ಧ್ವಜವನ್ನು ತೆಗೆದು ಹಾಕಬೇಕೆನ್ನುವ ಬೇಡಿಕೆ ಮುಂದಿಟ್ಟು ಗುರುವಾರ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಂಇಎಸ್ ಎಚ್ಚರಿಕೆ ನೀಡಿದೆ. ಜೊತೆಗೆ ಹಳ್ಳಿ ಹಳ್ಳಿಯಿಂದ ಬೆಳಗಾವಿಗೆ ಬರುವಂತೆ ಮರಾಠಿ ಭಾಷಿಕರಿಗೆ ಪ್ರಚೋದನೆ ನೀಡುತ್ತಿದೆ.
ಬೆಳಗಾವಿ ಮಹಾನಗರ ಪಾಲಿಕೆ ಎದುರು ಈಚೆಗೆ ಕನ್ನಡ ಹೋರಾಟಗಾರರು ಕನ್ನಡ ಧ್ವಜವನ್ನು ಹಾಕಿದ್ದಾರೆ. ಅದನ್ನು ತೆಗೆದುಹಾಕುವಂತೆ ಎಂಇಎಸ್ ಜಿಲ್ಲಾಡಳಿತಕ್ಕೆ ಒತ್ತಾಯಿಸುತ್ತ ಬಂದಿದೆ. ಜ.20ರ ಗಡುವನ್ನೂ ನೀಡಿತ್ತು.
ಕನ್ನಡ ನೆಲದಲ್ಲಿನ ಕನ್ನಡ ಧ್ವಜ ತೆಗೆಯುವಂತೆ ಹೇಳಲು ಎಂಇಎಸ್ ಗೆ ಏನಿದೆ ಅಧಿಕಾರ? ಸಂಪೂರ್ಣ ನೆಲಕಚ್ಚಿ ಹೋಗಿದ್ದ ಸಂಘಟನೆಗೆ ಈಗ ಹುಲ್ಲಿನ ಆಸರೆ ಸಿಕ್ಕಿದಂತಾಗಿದೆ. ಇದನ್ನೇ ಬಳಸಿಕೊಂಡು ಜೀವ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ.
ಪಾಲಿಕೆ ಚುನಾವಣೆ ಮೇಲೆ ಕಣ್ಣು
ಸಧ್ಯದಲ್ಲೇ ಬರಲಿರುವ ಮಹಾನಗರ ಪಾಲಿಕೆ ಚುನಾವಣೆ ಮೇಲೆ ಮಹಾರಾಷ್ಟ್ರ ಏಕೀಕರಣ ಸಮಿತಿ ಕಣ್ಣು ನೆಟ್ಟಿದೆ. ಪಾಲಿಕೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆದ್ದು ಪಾಲಿಕೆ ಅಧಿಕಾರ ಹಿಡಿಯಬೇಕೆನ್ನುವ ಉದ್ದೇಶದಿಂದ ಅನಗತ್ಯವಾಗಿ ಧ್ವಜ ವಿವಾದವನ್ನು ಎಬ್ಬಿಸುತ್ತಿದೆ.
ಕೂಡಲೆ ಜಿಲ್ಲಾಡಳಿತ ಮತ್ತು ಸರಕಾರ ಎಂಇಎಸ್ ನಾಯಕರನ್ನು ಬಗ್ಗುಬಡಿಯಬೇಕಿದೆ. ಅಗತ್ಯ ಕ್ರಮಗಳನ್ನು ತೆಗೆದುಕೊಂಡು ಬೆಳಗಾವಿ ನೆಲದಲ್ಲಿ ಶಾಂತಿ ಕದಡಲು ಅವಕಾಶ ನೀಡಬಾರದು.
ಈಚೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೀಡಿದ ಉದ್ಧಟತನದ ಹೇಳಿಕೆಯೂ ಎಂಇಎಸ್ ಗೆ ಪ್ರಚೋದನೆ ನೀಡಿದಂತಾಗಿದೆ.
ಬೆಳಗಾವಿ ಪಾಲಿಕೆ ಮೇಲೆ ಕನ್ನಡ ಧ್ವಜ
ಮಹಾ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಆಕ್ರೋಶ
ಮಹಾರಾಷ್ಟ್ರಕ್ಕೆ ಶಾಕ್ ನೀಡಿದ ಬೊಮ್ಮಾಯಿ
ಉದ್ಧವ್ ಠಾಕ್ರೆ ಉದ್ಧಟತನಕ್ಕೆ ಖಡಕ್ ಉತ್ತರ ಕೊಟ್ಟ ಸಿಎಂ ಬಿ.ಎಸ್.ಯಡಿಯೂರಪ್ಪ
ಮರಾಠ ಪ್ರಾಧಿಕಾರ ರಚನೆ ತೀರ್ಮಾನವೇ ಉದ್ಧವ್ ಠಾಕ್ರೆ ಹೇಳಿಕೆಗೆ ಪ್ರೇರಣೆ: ಡಿ.ಕೆ. ಶಿವಕುಮಾರ್ ಆರೋಪ
ಅಂದು ಎಂಇಎಸ್ ಗೆ ಸರಿಯಾದ ಪೆಟ್ಟು ಕೊಟ್ಟಿದ್ದರೆ ಇಂದು ಉದ್ಧವ್ ಠಾಕ್ರೆ ಈ ಮಾತು ಹೇಳುತ್ತಿರಲಿಲ್ಲ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ