Kannada NewsKarnataka News

ಸಮಾಜದಲ್ಲಿ ಸುಖ, ಶಾಂತಿ, ನೆಮ್ಮದಿ ಕಾಣಲು ಜೈನ ಧರ್ಮದ ಸಂದೇಶ ಅಗತ್ಯ – ಲಕ್ಷ್ಮೀ ಹೆಬ್ಬಾಳಕರ್

​ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ಪ್ರಸ್ತುತ ಸಂದರ್ಭದಲ್ಲಿ​ ಜೈನ ಧರ್ಮದ ಸಂದೇಶಗಳನ್ನು ಹೆಚ್ಚು ಹೆಚ್ಚು ಪ್ರಚಾರಗೊಳಿಸಬೇಕಾದ ಅಗತ್ಯವಿದೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.

ಮುತ್ನಾಳ ಗ್ರಾಮದಲ್ಲಿ​ ಶುಕ್ರವಾರ​ ನಡೆದ ಭಗವಾನ ಶ್ರೀ 1008 ಆದಿನಾಥ ತೀರ್ಥಂಕರ ಜಿನಬಿಂಬ ಪಂಚಕಲ್ಯಾಣ ಮ​ಹಾ ​​ಮಹೋತ್ಸವ ಹಾಗೂ ಭಗವಾನ ಶ್ರೀ ಬಾಹುಬಲಿ ಭವ್ಯ ಪ್ರತಿಮೆಯ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಭಾಗಿಯಾ​ಗಿ ಅವರು ಮಾತನಾಡುತ್ತಿದ್ದರು. ಇಂದು ಸಮಾಜದಲ್ಲಿ ನಾವು ಬಯಸುವುದು ಶಾಂತಿಯನ್ನು. ತನ್ಮೂಲಕ ಎಲ್ಲರೂ ನೆಮ್ಮದಿಯಿಂದ ಬಾಳುವಂತಾಗಬೇಕು. ಜೈನ ಧರ್ಮದ ಸಂದೇಶದಲ್ಲಿ ಶಾಂತಿ, ಅಂಹಿಂಸೆಗೆ ಮೊದಲ ಆದ್ಯತೆ ನೀಡಲಾಗಿದೆ. ಎಲ್ಲರೂ ಅದನ್ನು ಅಳವಡಿಸಿಕೊಂಡಾಗ ಸುಖ, ಶಾಂತಿ, ನೆಮ್ಮದಿ ಕಾಣಲು ಸಾಧ್ಯವಿದೆ ಎಂದು ಅವರು ಹೇಳಿದರು.​

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಭಟ್ಟಾರಕ ಭಟ್ಟಾಚಾರ್ಯ ಸ್ವಸ್ತಿ ಶ್ರೀ ಭಟ್ಟಾಕಲಂಕ ಸ್ವಾಮೀಜಿ ಸೋಂ​ದಾ​​ಮಠ, ಪರಮಪೂಜ್ಯ ಭಟ್ಟಾರಕ ಪಟ್ಟಾಚಾರ್ಯ ಸ್ವಸ್ತಿ ಶ್ರೀ ಅಭಿನವ ಲಕ್ಷ್ಮೀಸೇನ ಮಹಾಸ್ವಾಮೀಜಿ, ಕೊಲ್ಹಾಪುರ, ಷ ಭ್ರ ಶ್ರೀ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳು ಕೇದಾರ ಶಾಖಾಪೀಠ ಮುತ್ನಾಳ ಇವರು ವಹಿಸಿದ್ದರು.

ಈ ಸಮಯದಲ್ಲಿ ಗ್ರಾಮದ ಹಿರಿಯರು, ರುದ್ರಗೌಡ ಪಾಟೀಲ, ಪಾರಿಶ್ ಪಾರಿಶ್ವಾಡ್, ಅಡಿವೆಪ್ಪಗೌಡ ಪಾಟೀಲ ಹಾಗೂ ಜೈನ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button