Latest

ಜನಸಾಮಾನ್ಯರ ಮೇಲಿನ ಆರ್ಥಿಕ ಹೊರೆ ತಗ್ಗಿಸುವುದು ಗ್ಯಾರಂಟಿಯ ಯೋಜನೆಗಳ ಉದ್ದೇಶ: ಡಿಸಿಎಂ ಡಿ.ಕೆ. ಶಿವಕುಮಾರ್

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ವಿರೋಧ ಪಕ್ಷದವರು ಇರುವುದೇ ಟೀಕೆ ಮಾಡಲು, ಅವರು ಟೀಕೆ ಮಾಡಲಿ.ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ಆಗುತ್ತಿರುವ ಆರ್ಥಿಕ ಹೊರೆ ತಗ್ಗಿಸಲು ಕಾಂಗ್ರೆಸ್ ಸರಕಾರ ಗ್ಯಾರಂಟಿ ಯೋಜನೆಗಳನ್ನು ನೀಡಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಅವರು ಇಂದು ಸುದ್ದಿಮಾಧ್ಯಮದವರೊಂದಿಗೆ ಮಾತನಾಡಿ, “ಪ್ರತಿಪಕ್ಷದವರು ಟೀಕೆ ಮಾಡುವ ಮೊದಲು ಪ್ರಧಾನಮಂತ್ರಿಗಳು ಈ ಹಿಂದೆ ಹೇಳಿದಂತೆ ವಿದೇಶದಿಂದ ಕಪ್ಪು ಹಣ ತರಲಿ, ಎಲ್ಲರ ಖಾತೆಗೆ 15 ಲಕ್ಷ ಹಾಕಲಿ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡಲಿ. ರೈತರ ಆದಾಯ ಡಬಲ್ ಮಾಡಲಿ.ಸದ್ಯದಲ್ಲೇ ಕೇಂದ್ರ ಸರ್ಕಾರಕ್ಕೆ ಪರೀಕ್ಷೆ ಎದುರಾಗುತ್ತಿದ್ದು, ಅದರಲ್ಲಿ ಅವರು ಪಾಸ್ ಆಗಲು ಕೊಟ್ಟಿರುವ ಮಾತನ್ನು ಉಳಿಸಿಕೊಳ್ಳಲಿ” ಎಂದು ಸವಾಲೆಸೆದರು.

ಬಾಡಿಗೆ ಮನೆಯಲ್ಲಿರುವವರಿಗೆ ಗೃಹಜ್ಯೋತಿ ಯೋಜನೆ ಫಲಾನುಭವದ ಬಗ್ಗೆ ಕೇಳಿದ ಪ್ರಶ್ನೆಗೆ, “ಬಾಡಿಗೆ ಮನೆಯಲ್ಲಿರುವವರು ಬಡವರಲ್ಲವೇ. ಅವರಿಗೂ ಈ ಯೋಜನೆಯ ಫಲ ಸಿಗಬೇಕು. ಜನರು ಬಾಡಿಗೆ ಮನೆಯಲ್ಲಾದರೂ ಇರಲಿ ಸ್ವಂತ ಮನೆಯಲ್ಲಿ ಈ ಯೋಜನೆಯ ಫಲ ಅವರಿಗೆ ಸಿಗಲಿದೆ. ನಮ್ಮ ಮಾತು 200 ಯೂನಿಟ್ ವರೆಗೂ ಉಚಿತ ಎಂದು ಹೇಳಿದ್ದೆವು. ಅದರಂತೆ ನೀಡಿದ್ದೇವೆ. ಇಷ್ಟು ದಿನಗಳ ಕಾಲ ನೂರು ಯೂನಿಟ್ ಬಳಸುತ್ತಿದ್ದವರು ಏಕಾಏಕಿ 200 ಯುನಿಟ್ ಬಳಸಿದರೆ ಅದಕ್ಕೆ ಅವಕಾಶವಿಲ್ಲ” ಎಂದು ತಿಳಿದರು.

ಯೋಜನೆಯ ಫಲ ತ್ಯಜಿಸಲು ಅವಕಾಶ ಕಲ್ಪಿಸುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,  “ಖಂಡಿತವಾಗಿಯೂ ಇದಕ್ಕೆ ಅವಕಾಶ ಕಲ್ಪಿಸುತ್ತೇವೆ. ಒಂದು ವೇಳೆ ಯಾರಿಗಾದರೂ ಈ ಯೋಜನೆ ಫಲ ಬೇಡವಾದರೆ ಅದನ್ನು ಅವರು ತ್ಯಜಿಸಿ ವಿದ್ಯುತ್ ಬಿಲ್ ಕಟ್ಟಬಹುದು. ಅನೇಕ ಅಧಿಕಾರಿಗಳು, ಮಾಧ್ಯಮ ಮುಖ್ಯಸ್ಥರು, ಸರಕಾರಿ ನೌಕರರು ಈ ಗೃಹಜೋತಿ ಯೋಜನೆಯ ಫಲ ಬೇಡ ಎಂದು ಪತ್ರ ಬರೆದರೆ, ಮತ್ತೆ ಕೆಲವರು ಖುದ್ದಾಗಿ ಹೇಳಿದ್ದಾರೆ. ಯಾರಿಗೆಲ್ಲ ಈ ಯೋಜನೆಯ ಲಾಭ ಬೇಡವೋ ಅವರಿಗೆ ಇದನ್ನು ತ್ಯಜಿಸಲು ಅವಕಾಶ ನೀಡಲಾಗುವುದು. ಅದಕ್ಕಾಗಿ ಈ ಯೋಜನೆಗಳ ಫಲ ಪಡೆಯಲು ಅರ್ಜಿಯನ್ನು ಕರೆಯಲಾಗಿದೆ. ಕೇಂದ್ರ ಸರಕಾರ ಅಡುಗೆ ಅನಿಲ ಸಬ್ಸಿಡಿ ತ್ಯಜಿಸಲು ಕರೆ ಕೊಟ್ಟಾಗ ಅನೇಕರು ಅದಕ್ಕೆ ಸ್ಪಂದಿಸಿ ಸಬ್ಸಿಡಿಯನ್ನು ಕೈಬಿಟ್ಟಿದ್ದರು. ಅದೇ ರೀತಿ ಇಲ್ಲಿಯೂ ಯೋಜನೆ ಲಾಭ ತ್ಯಜಿಸಬಹುದು” ಎಂದು ತಿಳಿಸಿದರು.

ಕಾಂಗ್ರೆಸ್ ನವರು ಹಣೆಗೆ ತುಪ್ಪ ಸವರುತ್ತಿದ್ದಾರೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಅವರ ಟೀಕೆ ಕುರಿತು ಉತ್ತರಿಸಿದ ಡಿ.ಕೆ. ಶಿವಕುಮಾರ್, “ಕುಮಾರಣ್ಣ ದೊಡ್ಡವರು ಅವರಿಗೆ ಬಹಳ ಅನುಭವವಿದೆ ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ನಾನು ನನ್ನ ಕರ್ತವ್ಯ ಮಾಡುತ್ತೇನೆ ಅವರು ಅವರ ಕೆಲಸ ಮಾಡಲಿ” ಎಂದು ತಿಳಿಸಿದರು.

https://pragati.taskdun.com/odisha-train-accident-minister-santosh-lad-assignment-for-the-protection-of-kannadigas/

https://pragati.taskdun.com/a-mother-who-killed-her-son-and-ate-meat/

https://pragati.taskdun.com/a-man-who-strangled-his-wife-and-surrendered-to-the-police-station/

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button