Belagavi NewsBelgaum NewsKannada NewsKarnataka NewsPolitics

*ಮುಂದಿನ ನಾಯಕತ್ವದ ಬಗ್ಗೆ ಪಕ್ಷ ಹಾಗೂ ಪಕ್ಷದ ಶಾಸಕರು ನಿರ್ಧಾರ ಮಾಡಬೇಕು: ಸತೀಶ್ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮುಂದಿನ ನಾಯಕತ್ವದ ಬಗ್ಗೆ ಪಕ್ಷ ಹಾಗೂ ಪಕ್ಷದ ಶಾಸಕರು ನಿರ್ಧಾರ ಮಾಡಬೇಕು ಎಂದು ಸಿದ್ದರಾಮಯ್ಯ ಬಳಿಕ ಅವರ ಜವಾದ್ಬಾರಿ ಸತೀಶ್ ಜಾರಕಿಹೊಳಿ‌ ವಹಿಸಿಕೊಳ್ಳಬೇಕು ಎಂಬ ಡಾ. ಯತೀಂದ್ರ ಹೇಳಿಕೆ ವಿಚಾರವಾಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.

ಬೆಳಗಾವಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಯತೀಂದ್ರ ವೈಯಕ್ತಿಕ ಅಭಿಪ್ರಾಯ ತಿಳಿಸಿದ್ದಾರೆ ಈ ಬಗ್ಗೆ ಪಕ್ಷ ನಿರ್ಧಾರ ಮಾಡಬೇಕು. ಅಂತಿಮವಾಗಿ ಯಾರು ನಾಯಕ ಅಂತಾ ಪಕ್ಷ ಹಾಗೂ ಶಾಸಕರು ನಿರ್ಧಾರ ಮಾಡಬೇಕು. ಸಿದ್ದರಾಮಯ್ಯನವರ ನಂತರ ಪಕ್ಷ ನಡೆಸುವ ವಿಚಾರವನ್ನು ಕಾದು ನೋಡೋಣ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.

ಎಲ್ಲರನ್ನೂ ಜೊತೆಗೆ ಒಯ್ಯುವ ಪ್ರಯತ್ನ ಮಾಡುತ್ತಿದ್ದೇವೆ, ಅಂತಿಮವಾಗಿ ಪಕ್ಷ ಇದೆ. ಅಹಿಂದ ನಾಯಕತ್ವ ಇದ್ದೇ ಇದೆ. ಅದು ಇಲ್ಲದೆ ಸಂಘಟನೆ ಮಾಡಲು ಆಗಲ್ಲ. ಮುಖ್ಯಮಂತ್ರಿ ಹುದ್ದೆಗೆ ನಾನು 2028ರ ಕ್ಲೈಮ್ ಮಾಡ್ತಿನಿ ಅಂತಾ ಹೇಳಿದ್ದೇನೆ. 2028ರಲ್ಲಿ ಸಿಎಂ ಸ್ಥಾನದ ಕ್ಲೈಮ್ ಮಾಡುತ್ತೇನೆ ಅಂತಾ ಹೇಳಿದ್ದೇವೆ, ಪಕ್ಷ ತೀರ್ಮಾನ ಮಾಡಬೇಕು. 

ಯತೀಂದ್ರ ಹೇಳಿರುವುದು ವೈಯಕ್ತಿಕ ಹೇಳಿಕೆ. ಎಲ್ಲವನ್ನೂ ಕಾಕತಿಯಲ್ಲಿ ನಿಂತು ನಿರ್ಧಾರ ಮಾಡಲು ಆಗಲ್ಲ. ಡಿಸೆಂಬರ್ ನಲ್ಲಿ ಕ್ರಾಂತಿ ನಮಗೆ ಗೊತ್ತೇ ಇಲ್ಲ ಎಂದರು. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button