Kannada NewsKarnataka News

ಸರ್ಕಾರದ ಸವಲತ್ತು, ಶಿಕ್ಷಕರ ಕರ್ತವ್ಯ

ಸರ್ಕಾರದ ಸವಲತ್ತು, ಶಿಕ್ಷಕರ ಕರ್ತವ್ಯ

ಶಾಲಾ ಶಿಕ್ಷಣ ಎಂಬುದು ಕವಿದ ಕತ್ತಲೆಯಲ್ಲಿದ್ದ ಅಜ್ಞಾನಿಯನ್ನು ಬೆಳಕಿನೆಡೆಗೆ ತಂದು ಅವನ ಭವಿಷ್ಯವನ್ನು ಉಜ್ವಲಗೊಳಿಸುವಂತದ್ಧಾಗಿದೆ ಅಂದರೆ ಉತ್ಪ್ರೇಕ್ಷೆ ಎಂದು ಅನಿಸಲಾರದು.

ಅನಾಗರಿಕನಿಗೆ ಅರಿವಿನ ಶಕ್ತಿಯನ್ನು ತುಂಬಿ ಅವನನ್ನು ಪ್ರಜ್ಞಾವಂತ ನಾಗರಿಕನನ್ನಾಗಿ, ಸುಶಿಕ್ಷಿತ ಮಾನವನನ್ನಾಗಿ ನಿರ್ಮಿಸಿ ಜಗತ್ತಿನ ತುಂಬಾ ಹಕ್ಕಿಯಂತೆ ಹಾರಾಡುತ್ತಾ ಸುಶಿಕ್ಷಿತ ಸಮಾಜದ ನಿರ್ಮಾಣದ ನಾಯಕನಾಗಿ ನಿರ್ಮಿಸುವುದು  ” ಶಿಕ್ಷಕ ನೀಡುವ ಶಿಕ್ಷಣ” ,  ಶಿಕ್ಷಕರು ಮಕ್ಕಳೊಂದಿಗೆ ವಿದ್ಯಾರ್ಥಿಯಾಗಿ ಅನುಭವಿಸಿ ಕರ್ತವ್ಯ ಪ್ರಜ್ಞೆಯಿಂದ ಮಕ್ಕಳಿಗೆ ಸರಿಯಾದ ಸಮಯದಲ್ಲಿ ಬೋಧನೆ ನೀಡಿ ಸುಪ್ತ ಮನಸ್ಸಿಗೆ ಮನ ಮುಟ್ಟುವಂತೆ ಮಾಡಿದರೆ ಮಾತ್ರ ಶಿಕ್ಷಕರ ಕರ್ತವ್ಯ ಸಾರ್ಥಕವಾಗುತ್ತದೆ. 6 ರಿಂದ 14 ವರ್ಷದ ಮಕ್ಕಳಿಗೆ ಸರ್ಕಾರದ ಯೋಜನೆಯಂತೆ  ಕಡ್ಡಾಯ ಶಿಕ್ಷಣ ನೀಡುವುದು ಶಿಕ್ಷಕರ ಜವಾಬ್ಧಾರಿ ಆಗಿದೆ. ಈ ಯೋಜನೆಯಲ್ಲಿ ಎಲ್ಲಾ ಮಕ್ಕಳು ಸ್ಪಷ್ಟ ಓದು, ಶುದ್ಧ ಬರಹ, ಸರಳ ಲೆಕ್ಕಗಳನ್ನು ಕಲಿಯಬೇಕು ಎನ್ನುವದು ಘನ ಸರ್ಕಾರದ ಹಾಗೂ ಸರ್ವ ಶಿಕ್ಷಣ ಅಭಿಯಾನದ ಸದಭಿಲಾಷೆಯಾಗಿದೆ.

ನಮ್ಮ  ಸರ್ಕಾರವು ಶಿಕ್ಷಣಕ್ಕೆ ಅತೀ ಹೆಚ್ಚಿನ ಒತ್ತು ನೀಡುತ್ತಾ ಸರ್ಕಾರದ ವಾರ್ಷಿಕ ಬಜೆಟ್ ನಲ್ಲಿ ಶಿಕ್ಷಣಕ್ಕಾಗಿ ಶಿಕ್ಷಣ ಇಲಾಖೆಗೆ ಶೇಕಡಾ 35 ಕ್ಕಿಂತ, ಹಚ್ಛಿನ ಬಜೆಟ್ ನ್ನು ನೀಡುತ್ತಿದೆ. ಬೇರೆ ಯಾವುದೇ ಇಲಾಖೆಗಿಂತಲೂ ಹೆಚ್ಚಿನ ಬಜೆಟ್ ನ್ನು ಶಿಕ್ಷಣ ಇಲಾಖೆಗೆ ನೀಡುತ್ತಿದೆ. ಅದಕ್ಕನುಗುಣವಾಗಿ  ಸರ್ಕಾರವು ಶಿಕ್ಷಣದ ಅಭಿವೃದ್ಡಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಮಧ್ಯoತರದಲ್ಲಿ ಶಾಲೆ ಬಿಡುವ ಮಕ್ಕಳನ್ನು ಶಾಲೆಗೆ ಪುನಃ ದಾಖಲಿಸುವ ಸದುದ್ದೇಶದಿಂದ ಜಾರಿಗೆ ತoದಿರುವ ಯೋಜನೆಗಳಲ್ಲಿ ಕೆಲ ಯೋಜನೆಗಳು ಇಲ್ಲಿವೆ.

ಮರಳಿ ಬಾ ಶಾಲೆಗೆ, ಕೂಲಿಯಿoದ ಶಾಲೆಗೆ, ಬಾ ಬಾಲೆ ಶಾಲೆಗೆ, ಚಿಣ್ಣರ ಅಂಗಳ, ಸಂಚಾರಿ ಶಾಲೆ, ಟೆಂಟ್ ಶಾಲೆ, ಹೀಗೇ ಹಲವಾರು ಯೋಜನೆಗಳು ಈ ಹಿಂದೆ ಇದ್ದವು.  ಪ್ರಚಲಿತವಾಗಿ ಜಾರಿ ಇರುವ ಯೋಜನೆಗಳೆಂದರೆ ದಾಖಲಾತಿ ಆಂದೋಲನ,  ವಸತಿಯುತ/ವಸತಿರಹಿತ ಋತುಮಾನ ಕೇಂದ್ರಗಳನ್ನು ತೆರೆದು ಶಿಕ್ಷಣವನ್ನು ನೀಡಲಾಗುತ್ತಿದೆ. ದಾಖಲಾತಿ ಆoದೋಲನ ಮೂಲಕ ಶಿಕ್ಷಕರು ಮನೆಮನೆಗೆ ತೆರಳಿ ಪಾಲಕರ ಮನವೊಲಿಸಿ ಶಾಲೆ ಬಿಟ್ಟ ಮಗುವನ್ನು ಮರಳಿ ಶಾಲೆಗೆ ದಾಖಲೆಪಡಿಸುವ ಕಾರ್ಯವನ್ನು ಕೈಗೊಳ್ಳುತ್ತಾರೆ. ವಲಸೆ ಹೋಗುವoತ ಪೋಷಕರೊಂದಿಗೆ ಮಕ್ಕಳು ಹೋಗುವುದನ್ನು ತಡೆಯುವ ಕುರಿತಾಗಿ ಋತುಮಾನ ಕೇಂದ್ರಗಳನ್ನು ತೆರೆದು ಶಿಕ್ಷಣವನ್ನು ನೀಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಶಾಲೆಯಲ್ಲಿಯೇ ವಸತಿ ವ್ಯವಸ್ಠೆಯನ್ನು ಕಲ್ಪಿಸಿ ಊಟ, ಉಪಹಾರ, ಬಟ್ಟೆ, ಪೆನ್ಸಿಲ್, ಪೆನ್ನು, ಪುಸ್ತಕ, ಇವುಗಳನ್ನೆಲ್ಲಾ ನೀಡಿ ಶಿಕ್ಷಣವನ್ನು ನೀಡಲಾಗುತ್ತಿದೆ. ಶಾಲೆಯ ಎಲ್ಲಾ ವಿದ್ಯಾರ್ಥಿಗಳ ಸರಳವಾದ ಕಲಿಕೆಗೆಂದು ರೇಡಿಯೋ ಮತ್ತು ಎಜ್ಯುಸಾಟ್ ಪಾಠಗಳನ್ನು ಹೊಸ ಪದ್ಧತಿಯ ಬೋಧನೆಗಳಲ್ಲಿ ಅಳವಡಿಸಿ ಸರಳವಾಗಿ ಕಲಿಸಲು ಶಿಕ್ಷಕರಿಗೆ ತರಬೇತಿಗಳನ್ನು ನೀಡಿ ಸಂಪನ್ಮೂಲ ವ್ಯಕ್ತಿ (  ಆರ್.ಪಿ)ಗಳನ್ನು ಹುಟ್ಟುಹಾಕುತ್ತಿದೆ. ಸರಳವಾಗಿ ಅರ್ಥಪೂರ್ಣವಾಗಿ ಶಿಕ್ಷಣ ಕಲಿತು ತಮ್ಮ ಕಲಿಕೆಯ ಅರಿವಿನ ಶಕ್ತಿಯನ್ನು ಅರಿಯಲು  “ಎಲೆ ಮರೆಯ ಕಾಯಿ” ಎನ್ನುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದಕ್ಕಾಗಿ, ಮೊಗ್ಗಾದ ಮಗು ಹೂ ಆಗಿ ಅರಳಿ ಪಸರಿಸಿ ವಿಶ್ವಮಟ್ಟದವರೆಗೂ ಭಾರತದ ಕೀರ್ತಿಯನ್ನು ಕೊಂಡೊಯ್ಯಲೆಂದು ಹಲವಾರು ಯೋಜನೆಗಳನ್ನು ರೂಪಿಸಿರುತ್ತದೆ. ಇನ್ ಸ್ಪಾಯರ್ ಅವಾರ್ಡ್, ಒಲoಪಿಯಾಡ್, ಪ್ರತಿಭಾ ಕಾರoಜಿ, ಈ ಎಲ್ಲಾ ರೀತಿಯ ಸ್ಫರ್ಧೆಗಳನ್ನು ಪ್ರತಿ ವರ್ಷವೂ ಆಯೋಜಿಸಿ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲಾಗುತ್ತದೆ, ಈ ಕಲಿಕೆಗಾಗಿ ಸರ್ಕಾರವು ಬಡ ವಿದ್ಯಾರ್ಥಿಗಳಿಗಾಗಿ ಹಾಗೂ ಹಿಂದುಳಿದ ವರ್ಗದ ಬಡ ಕುಟುಂಬದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗಾಗಿ ಸಮಾಜ ಕಲ್ಯಾಣ ಇಲಾಖೆಯಿಂದ ಉಚಿತ ವಸತಿ ನಿಲಯಗಳನ್ನು ಒದಗಿಸುವದರೊಂದಿಗೆ ಉಚಿತ ಪಠ್ಯ ಪುಸ್ತಕ, ಉಚಿತ ಸಮ ವಸ್ತ್ರ, ಉಚಿತ ಬ್ಯಾಗ್, ಮತ್ತು ನೋಟ್ ಪುಸ್ತಕ, ಉಚಿತ ಸೈಕಲ್ ವಿತರಣೆ, ಈ ರೀತಿಯ ಎಲ್ಲಾ ಸೌಲಭ್ಯಗಳನ್ನು ನೀಡುತ್ತಿದೆ.

ಅದಲ್ಲದೆ ಇದೇ ವರ್ಷದಿಂದ ಸರ್ಕಾರಿ ಆದೇಶಕ್ಕನುಸರಿಸಿ ಬೆಳಗಾವಿ ಜಿಲ್ಲೆಯಲ್ಲಿ ವಿನೂತನವಾಗಿ ಶೈಕ್ಷಣಿಕ ಸ್ಪoದನ, ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳಲಾಗಿದೆ. ಈ ಕಾರ್ಯಕ್ರಮದ ಮೂಲಕ ಏಳನೇ ತರಗತಿಯಿಂದಲೇ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವುದಾಗಿದೆ. ಇದೇ ಆಗಸ್ಟ್ ತಿಂಗಳಲ್ಲಿ ಸರ್ಕಾರಿ ಶಾಲೆಯಲ್ಲಿ ಏಳನೇ ತರಗತಿ ಓದುವ ವಿದ್ಯಾರ್ಥಿಗಳಿಗೆ ಆರನೇ ತರಗತಿ ವಿಷಯದ ಮೇಲೆ ಪರೀಕ್ಷೆ ನಡೆಸಿ ಮುಂದಿನ ತರಗತಿಯ ಫೌoಡೇಶನ್ ಚುರುಕುಗೊಳಿಸುವ ಕಾರ್ಯವನ್ನು ನಿರ್ವಹಿಸಲಾಗುತ್ತಿದೆ.

ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಕಲಿಕೆಯನ್ನು ಉತ್ತಮ ಪಡಿಸಲು ಸರ್ಕಾರವು 2001, 2002 ನೇ ಸಾಲಿನಿಂದ ಅಕ್ಷರ ದಾಸೋಹ ಕಾರ್ಯವನ್ನು ಜಾರಿಗೆ ತಂದು ಪ್ರತಿ ದಿನ ಮಕ್ಕಳಿಗೆ ವಿವಿಧ ಬಗೆಯ ಬಿಸಿ ಊಟವನ್ನು ಉಣ ಬಡಿಸಿ ದೇಶಕ್ಕೆ ಮಾದರಿಯಾಗಿದೆ. ಇಷ್ಟೇ ಅಲ್ಲದೇ 2013, 2014 ನೇ ಸಾಲಿನಿಂದ ಕ್ಷೀರ ಭಾಗ್ಯ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆ ಮೂಲಕ ಸರ್ಕಾರಿ ಶಾಲೆಗಳಲ್ಲಿ ಅಭ್ಯಾಸಿಸುತ್ತಿರುವಂತಹ ಪ್ರತಿ ಮಗುವಿಗೂ ಪ್ರತಿ ದಿವಸವೂ ಹಾಲನ್ನು ಶಾಲಾ ಪ್ರಾರಂಭಕ್ಕೆ   ಮುಂಚಿತವಾಗಿ ನೀಡಲಾಗುತ್ತದೆ.

ಅಪೌಷ್ಠಿಕತೆಯಿಂದ ಸಂಕಷ್ಟ ಎದುರಿಸುವ ಮಕ್ಕಳಿಗಾಗಿ ಕಬ್ಬಿಣಾಂಶವಿರುವ ಮಾತ್ರೆಗಳನ್ನು  ಎರಡು ದಿನಗಳಿಗೊಮ್ಮೆ ಶಾಲೆಯಲ್ಲಿಯೇ ನೀಡಲಾಗುತ್ತದೆ. ನಮ್ಮ  ಸರ್ಕಾರವು ಮಕ್ಕಳ ಕಲಿಕೆಯ ಅಭಿವೃದ್ಧಿಗಾಗಿ ಉತ್ತಮವಾದ ವಾತಾವರಣವನ್ನು ನೀಡಿರುವಾಗ ಉತ್ಸಾಹದ ಚಿಲುಮೆಯಾಗಿ ಕಲಿಕೆಯ ಸಾಧನೆಯನ್ನು ಸಾದಿಸಬೇಕಾದವರು “ಗುರು” ಎಂಬ ತ್ಯಾಗಮಯಿ ಶಿಕ್ಷಕರಲ್ಲವೇ?

ಗುರು ಭ್ರಹ್ಮ ಗುರು ವಿಷ್ಣು.

ಗುರುರ್ದೇವೋ ಮಹೇಶ್ವರ.

ಗುರು ಸಾಕ್ಷಾತ್ ಪರಬ್ರಹ್ಮ

ತಸ್ಮೈ ಶ್ರೀ ಗುರುವೇ ನಮಹ

ಎಂಬ ದಿವ್ಯ ಮoತ್ರಕ್ಕೆ ಪರಿಪೂರ್ಣ ಅರ್ಥವನ್ನು ಪಡೆಯಲು ಕಗ್ಗಲ್ಲಿನಂತಿದ್ದ ಮಗುವನ್ನು ಶಿಕ್ಷಣದ ಅರಿವೆoಬ ಕೊಡಲಿಯ ಏಟನ್ನು ಕೊಡುವುದರ ಮುಖಾoತರ ಸುಂದರ ಶಿಲ್ಪಿಯನ್ನಾಗಿ ನಿರ್ಮಿಸಿ ದೇಶಕ್ಕೆ ಕೊಡುಗೆಯಾಗಿ ನೀಡಿದಲ್ಲಿ ಶಿಕ್ಷಕರ ಕರ್ತವ್ಯಕ್ಕೆ ಸಾರ್ಥಕತೆ ಬರುತ್ತದೆ. ವರ್ತಮಾನದ ಶಿಕ್ಷಕನಿಂದ ಭವಿಷತ್ತಿನ ಮಕ್ಕಳ ನಿರ್ಮಾಣವೂ ಆದoತಾಗುತದಲ್ಲವೇ?

ಸಮುದಾಯದ ಯಾವುದೇ ಮೂಲೆಯಲ್ಲಿರುವ ಯಾವುದೇ ಮಗುವಿನ ದಾಖಲಾತಿ ಬಿಟ್ಟು ಹೋಗದೇ ಕಡ್ಧಾಯವಾಗಿ ಶಿಕ್ಷಣದ ಹಕ್ಕಿನ ಮೇರೆಗೆ ಶಾಲೆಗೆ ದಾಖಲಾತಿ ಆಗಲೇಬೇಕು. ದಾಖಲಾದ ಮಗುವು ಶಿಕ್ಷಣದಿoದ ವಂಚಿತವಾಗದೆ, ಕಲಿಕೆಯ ಕನಿಷ್ಟ ಮಟ್ಟವನ್ನು ಮುಟ್ಟಲೇ ಬೇಕು. ಈ ಕಾರ್ಯಕ್ಕೆ ಕೆಳ ಹಂತದಿoದ ಮೇಲಿನ ಹಂತದ ಎಲ್ಲಾ ಅಧಿಕಾರಿಗಳು, ಸಮುದಾಯಗಳು, ಕೈ ಜೋಡಿಸಲಿ ಎಂಬುದು ಶಿಕ್ಷಣ ಇಲಾಖೆಯ ಆಶಯ.

ಶಿಕ್ಷಣದ ಇನ್ನೊಂದು ವ್ಯಾಪಕ ಅರ್ಥವೆಂದರೆ ಒಬ್ಬ ವ್ಯಕ್ತಿಗೆ ನೀಡಿದ ಶಿಕ್ಷಣ ಅವನೊಬ್ಬನಿಗೆ ಮಾತ್ರ ಸೀಮಿತ. ಆದರೆ “ಒಬ್ಬ ಹೆಣ್ಣು ಮಗಳಿಗೆ ನೀಡಿದ ಶಿಕ್ಷಣ ಇಡೀ ಕುಟುಂಬಕ್ಕೆ ನೀಡಿದ ಶಿಕ್ಷಣವಾಗುತ್ತದೆ”. ಈ ಹಿನ್ನೆಲೆಯಲ್ಲಿ ಯಾವ ಹೆಣ್ಣು ಮಗುವು ಶಾಲಾ ಶಿಕ್ಷಣದಿಂದ ವಂಚಿತರಾಗದೇ, ಶಾಲೆಯಲ್ಲಿ ಉಳಿದು, ಶಾಲೆಯಲ್ಲಿ ನಲಿದು, ಕಲಿಕೆಯನ್ನು ಆರಂಭಿಸಿ “ಮರಳಿ ಆಕೆಯು ಸಮುದಾಯಕ್ಕೆ ಶಿಕ್ಷಣವನ್ನು ನೀಡಿದಾಗ ಮಹಿಳೆಯ ಮತ್ತು ಸಮುದಾಯದ ಬದುಕು ಸಮೃದ್ದವಾಗುತ್ತದೆ”. ಇದರಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣದ ಗುರಿ ಸದುದ್ದೇಶಗಳು ಸಾರ್ಥಕವಾಗುತ್ತವೆ.

ಸಾರ್ವಜನಿಕ ಶಿಕ್ಷಣ ಇಲಾಖೆಯು ಹುಟ್ಟುಹಾಕಿದ “ಅ” ದಿಂದ “ಜ್ಞ” ದವರೆಗಿನ ಅಕ್ಷರದ ಜ್ಞಾನ ಪ್ರಪಂಚದ ಎಲ್ಲಾ ಮಾನವ ಜನಾಂಗಕ್ಕೆ ಹಿಡಿದ ರನ್ನಗನ್ನಡಿಯಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯು ಬೆಳಗಿಸುವ ಈ ಜ್ಞಾನ ದೀಪವು ಆಯಾ ವ್ಯಕ್ತಿಯ ವ್ಯಕ್ತಿತ್ವದ ಪ್ರತಿಬಿಂಬವನ್ನು ಕಾಣುವಂತಾಗಬೇಕೆಂಬುದು ಮನುಕುಲದ ಆಶಯವಾಗಿದೆ. ಈ ಎಲ್ಲ ಆಶೋತ್ತರಗಳನ್ನು ಈಡೇರಿಸುವದು  ಸರ್ಕಾರ ನೇಮಿಸಿದ ಸರ್ಕಾರದ ಸಂಬಳ ಪಡೆಯುವ ಎಲ್ಲಾ ಶಿಕ್ಷಕರ ಹಾಗೂ ಅಧಿಕಾರಿಗಳ ಹಾಗೂ ಸಮುದಾಯದ ಜವಾಬ್ದರಿಯಲ್ಲವೇ?

 

ರಾಜೇಶ್ವರಿ ಎಸ್ ಹೆಗಡೆ .

ವಿಶ್ರಾoತ ಅಧೀಕ್ಷಕರು ಶಿಕ್ಷಣ ಇಲಾಖೆ, ಬೆಳಗಾವಿ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button