Latest

ತರಕಾರಿಗಳನ್ನು ಒದ್ದು ಅಮಾನವೀಯತೆ ತೋರಿದ್ದ ಪಿಎಸ್ಐ ಅಮಾನತು

ಪ್ರಗತಿವಾಹಿನಿ ಸುದ್ದಿ, ರಾಯಚೂರು:  ರಸ್ತೆ ಬದಿ ಮಾರಾಟ ಮಾಡುತ್ತಿದ್ದ  ಬಡ ಮಹಿಳೆಯರು ಸೇರಿದಂತೆ ಹತ್ತಾರು ವ್ಯಾಪಾರಸ್ಥರ ತರಕಾರಿಗಳನ್ನು ಕಾಲಿನಿಂದ ಒದ್ದು ಚೆಲ್ಲಾಪಿಲ್ಲಿ ಮಾಡಿದ್ದ ಪಿಎಸ್ಐಯನ್ನು ಅಮಾನತುಗೊಳಿಸಲಾಗಿದೆ.

ಭಾನುವಾರ ತರಕಾರಿ ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ಬಂದ ಸದರ್ ಬಜಾರ್ ಠಾಣೆಯ ಪಿಎಸ್‌ ಐ ಆಜಮ್ ಕಾಲಿನಿಂದ ಒದೆಯುತ್ತ ತರಕಾರಿಗಳನ್ನು ಚೆಲ್ಲಾಪಿಲ್ಲಿಗೊಳಿಸಿ ಅಮಾನವೀಯವಾಗಿ ವರ್ತಿಸಿದ್ದ. ವಿಡೀಯೋ ವೈರಲ್ ಆಗಿ ಸಾರ್ವಜನಿಕರಿಂದ ಪೊಲೀಸರ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

ಈ ಬಗ್ಗೆ ತಕ್ಷಣ ಕ್ರಮ ತೆಗೆದುಕೊಂಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ನಿಕ್ಕಂ ‌ಅವರು ಪಿಎಸ್ಐಯನ್ನು ಸೇವೆಯಿಂದ ಅಮಾನತು ಮಾಡಿದ್ದಾರೆ.

ಲಾಕ್ ಡೌನ್ ಜಾರಿ ಇದ್ದ ಸಂದರ್ಭದಲ್ಲಿ ನಗರದ ಚಂದ್ರಮೌಳೇಶ್ವರ ವೃತ್ತದಲ್ಲಿ ಕೆಲವು ಗ್ರಾಮೀಣ ಭಾಗದ ತರಕಾರಿ ವ್ಯಾಪಾರಿಗಳು ವ್ಯಾಪಾರ ಮಾಡುತ್ತಿದ್ದರು.  ಸ್ಥಳಕ್ಕೆ ಆಗಮಿಸಿದ ಪಿಎಸ್‌ ಐ ಆಜಮ್ ಅವರು ಕೊತ್ತಂಬರಿ ಸೊಪ್ಪು, ನಿಂಬೆಹಣ್ಣು ಹಾಗೂ ಟೊಮೆಟೊ ಹಾಗೂ ಇತರೆ ಸೊಪ್ಪಿನ ತರಕಾರಿಗಳನ್ನು ಕಾಲಿನಿಂದ ಒದೆಯುತ್ತಿರುವ ವಿಡಿಯೋ  ವೈರಲ್ ಆಗಿತ್ತು.

ಅಶ್ಲೀಲ ಆಡಿಯೋಗೆ ಪ್ರಚೋದನೆ; ಯೂಟ್ಯೂಬ್ ಚಾನಲ್ ನೆಡೆಸುತ್ತಿದ್ದ ದಂಪತಿ ಅರೆಸ್ಟ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button