ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ – 21 ನೇ ಶತಮಾನದಲ್ಲಿ ಶಿಕ್ಷಣಕ್ಕೆ ಅತ್ಯಂತ ಮಹತ್ವವಿದ್ದು,ಎಲ್ಲರೂ ಶಿಕ್ಷಣಕ್ಕೆ ಆದ್ಯತೆ ನಿಡಬೇಕು. ಪಾಲಕರು ತಮ್ಮ ಮಕ್ಕಳಿಗೆ ಆಸ್ತಿ ಮಾಡುವಕ್ಕಿಂತ ತಮ್ಮ ಮಕ್ಕಳನ್ನೆ ಆಸ್ತಿಯನ್ನಾಗಿ ಮಾಡಿ ಎಂದು ಬಸವಜ್ಯೋತಿ ಯುಥ್ ಫೌಂಡೇಶನ್ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ ಹೇಳಿದರು.
ಶುಕ್ರವಾರ ಸಮೀಪದ ಅಮಲಝರಿ ಗ್ರಾಮದಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಇವರ ವಿಶೇಷ ಪ್ರಯತ್ನದಿಂದ, ಲೊಕೋಪಯೋಗಿ ಇಲಾಖೆಯ ಅನುದಾನಡಿ 2 ಪ್ರಾಥಮಿಕ ಶಾಲಾ ಕೊಠಡಿ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮದ ಕನ್ನಡ ಹಿರಿಯ ಪ್ರಾಥಮಿಕ ಶಾಲಾ ಕೊಣೆ ನಿರ್ಮಾಣಕ್ಕೆ 22 ಲಕ್ಷ ರೂ.ಅನುದಾನ ಮಂಜೂರಾಗಿದ್ದು, ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಸಚಿವೆ ಶಶಿಕಲಾ ಜೊಲ್ಲೆ ಈ ಭಾಗದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದಾರೆ. ಕಳೆದ ಅನೇಕ ವರ್ಷಗಳಿಂದ ಗ್ರಾಮಕ್ಕೆ ಶಾಲಾ ಕೋಣೆ ನಿರ್ಮಾಣಕ್ಕೆ ಬೇಡಿಕೆ ಇತ್ತು. ಇದಕ್ಕೆ ಸ್ಪಂಧಿಸಿ ಸಚಿವೆ ಜೊಲ್ಲೆ ಇವರು ಅನುದಾನ ಮಂಜೂರು ಮಾಡಿರುವುದಾಗಿ ಹೇಳಿದರು.
ಜಿ.ಪಂ. ಸದಸ್ಯ ಸಿದ್ಧು ನರಾಟೆ, ಗ್ರಾ.ಪಂ. ಅಧ್ಯಕ್ಷೆ ಕಲ್ಪನಾ ತಳಸಕರ, ಚಿಕ್ಕೋಡಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಜಯವಂತ ಭಾಟಲೆ, ಶಹರ ಅಧ್ಯಕ್ಷ ಪ್ರಣವ ಮಾನವಿ, ಗ್ರಾ.ಪಂ.ಸದಸ್ಯೆ ಸುವರ್ಣಾ ಕುಂಭಾರ, ಸಿದ್ರಾಂ ಪೂಜಾರಿ, ಮೋಹನಶಿತೋಳೆ, ಸಿಂಗಪ್ಪ ಕಟ್ಟಿಕರ, ಮಾರುತಿ ಗಾವಡೆ, ಸತ್ಯಾಪ್ಪಾ ಗಾವಡೆ, ಲೋಕೋಪಯೊಗಿ ಇಲಾಖೆ ಸಹಾಯಕ ಅಭಿಯಂತ ಬಿ.ಬಿ.ಬೇಡಕಿಹಾಳೆ, ರಿತೇಶ ಪಾಟೀಲ, ಚಂದ್ರಕಾಂತ ಖೋತ, ವಸಂತ ರೇಪೆ ಹಾಜರಿದ್ದರು.
ರಾಜು ಭದರಗಡೆ ನಿರೂಪಿಸಿದರು. ಎ.ಎ.ಗದ್ದಾಳೆ ಸ್ವಾಗತಿಸಿದರು. ಮಾರುತಿ ತಳಸಕರ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ