ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಎರಡು ತಿಂಗಳು ಗಂಡು ಮಗುವಿಗೆ ಪಿಡ್ಸ್ ಬಂದಿರುವ ಕಾರಣಕ್ಕೆ ತನ್ನ ಹೆತ್ತ ಮಗುವನ್ನೆ ಕೆರೆಗೆ ಎಸೆದು ರಾಕ್ಷಸಿ ತಾಯಿ ಕೊಲ್ಲಲ್ಲು ಮುಂದಾಗಿರುವ ಘಟನೆ ಬೆಳಗಾವಿಯ ಕಣಬರಗಿ ಕೆರೆಯಲ್ಲಿ ನಡೆದಿದೆ.
ಶಾಂತಾ (35) ಎಂಬ ಹೆತ್ತ ತಾಯಿ ಮಗು ಕೆರೆಗೆ ಎಸೆದ ತಕ್ಷಣವೆ ಎಚ್ಚೆತ್ತ ಸ್ಥಳೀಯರಿಂದ ಮಗು ರಕ್ಷಣೆ ಮಾಡಿ, ಮಗುವನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಗುವಿಗೆ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ಮಾಳಮಾರುತಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ ಬಳಿಕ ಆಸ್ಪತ್ರೆಯಿಂದಲೆ ಮಗುವಿನ ತಂದೆ ತಾಯಿಯನ್ನು ವಶಕ್ಕೆ ಪಡೆದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ