Kannada NewsKarnataka News

*ಮದುವೆ ಮಾಡಿಸಿಲ್ಲ ಎಂದು ತಂದೆಯನ್ನೆ ಕೊಂದ ಮಗ*

ಪ್ರಗತಿವಾಹಿನಿ ಸುದ್ದಿ: ಚಿತ್ರದುರ್ಗ ಜಿಲ್ಲೆಯ ಧರ್ಮಪುರ ಸಮೀಪದ ಕುಂದಲಗುರ ಗ್ರಾಮದಲ್ಲಿ ತನಗೆ 30 ವರ್ಷವಾದರು ಇನ್ನೂ ಮದುವೆ ಮಾಡಿಲ್ಲ ಎಂದು ಕೋಪಗೊಂಡು ಸ್ವಂತ ಮಗನೆ ತಂದೆಯನ್ನು ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ರಂಗಸ್ವಾಮಿ (50) ಮೃತ ದುರ್ದೈವಿ, ಶನಿವಾರ ರಾತ್ರಿ ಊಟಕ್ಕೆ ಮೊಟ್ಟೆ ಕೊಡಲಿಲ್ಲ ಎಂದು ಮಗ ದೇವರಾಜ (30) ತಂದೆ ಜೊತೆ ಜಗಳವಾಡಿದ್ದಾನೆ. ಈ ವೇಳೆ ಜಗಳ ವಿಕೋಪಕ್ಕೆ ತೆರಳಿದ್ದು ಕೋಪದಲ್ಲಿ ಮಗ ಎಲ್ಲಾ ವಿಚಾರದಲ್ಲಿ ನನ್ನನ್ನು ಕಡೆಗಣಿಸುತ್ತಾ ಬಂದಿದ್ದೀರಾ, ಮದುವೆ ಕೂಡ ಮಾಡಿಸಿಲ್ಲ ಎಂದು ಬೈದಿದ್ದಾನೆ.

ಈ ವೇಳೆ ತಂದೆ ರಂಗಸ್ವಾಮಿ ಕೂಡ ಎರಡು ಮಾತನಾಡಿದ್ದು, ಇದರಿಂದ ಮತ್ತೆ ಸಿಟ್ಟಾದ ಮಗ ದೇವರಾಜ ತಂದೆಯ ಎದೆ ಹಾಗೂ ಕುತ್ತಿಗೆ ಭಾಗಕ್ಕೆ ಕಾಲಿಟ್ಟು ಬಲವಾಗಿ ತುಳಿದು ಹಲ್ಲೆ ನಡೆಸಿದ್ದಾನೆ. ಈ ವೇಳೆ ರಂಗಸ್ವಾಮಿ ಸಾವನ್ನಪ್ಪಿದ್ದಾರೆ. ಸದ್ಯ ಈ ಘಟನೆಯ ಸಂಬಂಧ ಅಬ್ಬಿನಹೊಳೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ದೇವರಾಜನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button