Belagavi NewsBelgaum NewsKannada NewsKarnataka NewsNationalPolitics

​*ಪತ್ರಕರ್ತ ಸುಭಾಷ್ ದಲಾಲ ಇನ್ನಿಲ್ಲ*

ಪ್ರಗತಿವಾಹಿನಿ ಸುದ್ದಿ,ಬೆಳಗಾವಿ: ಚಿಕ್ಕೋಡಿಯ ಹಿರಿಯ ಪತ್ರಕರ್ತ ಸುಭಾಷ ರಾಮಪ್ಪಾ ದಲಾಲ್ ಅವರು ಗುರುವಾರ ಬೆಳಗಿನಜಾವ 1 ಗಂಟೆಗೆ ನಿಧನರಾಗಿದ್ದಾರೆ. ಅವರಿಗೆ 58 ವರ್ಷ ವಯಸ್ಸಾಗಿತ್ತು.

ಕಳೆದ 35 ವರ್ಷಗಳಿಗೂ ಹೆಚ್ಚಿನ ಅವಧಿ ಅವರು ವಿವಿಧ ಪತ್ರಿಕೆಗಳ ವರದಿಗಾರರಾಗಿ ಕೆಲಸ ನಿರ್ವಹಿಸಿದ್ದಾರೆ.

Home add -Advt

ಗುರುವಾರ ಬೆಳಿಗ್ಗೆ ಚಿಕ್ಕೋಡಿ ಪಟ್ಟಣದ ಎ.ಪಿ. ಲೇಔಟ್‌ನ ಸ್ವಗೃಹದ ಬಳಿ ಅಂತಿಮ ದರ್ಶನದ ಬಳಿಕ ಅವರ ಸ್ವಗ್ರಾಮವಾದ ಬೆಳಕುಡದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

ಸಂತಾಪ – ಸುಭಾಷ ದಲಾಲ ನಿಧನಕ್ಕೆ ಮಾಜಿ ಸಚಿವೆ ಶಶಿಕಲಾ ಜೊಲ್ಲೆ, ಮಾಜಿ ಸಂಸದ ಅಣ್ಣಾ ಸಾಹೇಬ ಜೊಲ್ಲೆ ತೀವ್ರ ಸಂತಾಪ ಸೂಚಿಸಿದ್ದಾರೆ.

Related Articles

Back to top button