Kannada NewsKarnataka NewsLatest

ಕರ್ನಾಟಕಕ್ಕೆ ಬರಲಿರುವ ಮಹಾರಾಷ್ಟ್ರ ಸಚಿವರಿಗೆ ರಾಜ್ಯ ಸರಕಾರದಿಂದ ಖಡಕ್ ಸಂದೇಶ ರವಾನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಡಿ.6ರಂದು ಕರ್ನಾಟಕಕ್ಕೆ ಬರಲು ಉದ್ದೇಶಿಸಿರುವ ಮಹಾರಾಷ್ಟ್ರದ ಇಬ್ಬರು ಸಚಿವರಿಗೆ ಕರ್ನಾಟಕದ ಸರಕಾರ ಖಡಕ್ ಸಂದೇಶ ರವಾನಿಸಿದೆ.

ಪ್ರಸ್ತುತ ಎರಡೂ ರಾಜ್ಯಗಳ ಮಧ್ಯೆ ಉಂಟಾಗಿರುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಈ ಸಂದರ್ಭದಲ್ಲಿ ನೀವು ಕರ್ನಾಟಕಕ್ಕೆ ಬರುವುದು ಸರಿಯಲ್ಲ ಎನ್ನುವ ಸಂದೇಶವನ್ನು ಕರ್ನಾಟಕದ ಮುಖ್ಯ ಕಾರ್ಯದರ್ಶಿಗಳು ಮಹಾರಾಷ್ಟ್ರ ಸರಕಾರಕ್ಕೆ ಕಳಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಮದುರ್ಗದಲ್ಲಿ ಪತ್ರಕರ್ತರಿಗೆ ಈ ವಿಷಯ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ನಿಮ್ಮ ಸಚಿವರು ನಮ್ಮ ರಾಜ್ಯಕ್ಕೆ ಬರುವುದು ಸರಿಯಲ್ಲ, ಬರಬೇಡಿ ಎಂದು ತಿಳಿಸಿರುವುದಾಗಿ ಬೊಮ್ಮಾಯಿ ಹೇಳಿದ್ದಾರೆ.

ಇಂತಹ ಸಂದರ್ಭಗಳಲ್ಲಿ ಈ ಹಿಂದೆಲ್ಲ ಕರ್ನಾಟಕ ಯಾವ ರೀತಿಯ ಕ್ರಮಗಳನ್ನು ಅನುಸರಿಸಿತ್ತೋ ಅಂತಹುದೇ ಕ್ರಮಗಳನ್ನು ಈ ಬಾರಿಯೂ ತೆಗೆದುಕೊಳ್ಳಲಾಗುವುದು ಎಂದೂ ಬೊಮ್ಮಾಯಿ ಹೇಳಿದರು.

ಮಹಾರಾಷ್ಟ್ರದ ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ ದಾದಾ ಪಾಟೀಲ, ಮತ್ತೊರ್ವ ಸಚಿವ ಶಂಭುರಾಜ ದೇಸಾಯಿ ಹಾಗೂ ಅಲ್ಲಿನ ಉನ್ನತ ಮಟ್ಟದ ಗಡಿ ಸಲಹಾ ಸಮಿತಿ ಅಧ್ಯಕ್ಷ ಧರ್ಮಶೀಲ್ ಮಾನೆ ಡಿ.6ರಂದು ಬೆಳಗಾವಿಗೆ ಆಗಮಿಸಲಿದ್ದಾರೆ.  ಈ ಕುರಿತು ಅವರ ಪ್ರವಾಸ ಪಟ್ಟಿಯನ್ನು ಕರ್ನಾಟಕದ ಮುಖ್ಯ ಕಾರ್ಯದರ್ಶಿಗಳಿಗೆ ಕಳಿಸಲಾಗಿದ್ದು, ವೈ ಕೆಟಗರಿ ಭದ್ರತೆ ಒದಗಿಸುವಂತೆ ಕೋರಲಾಗಿದೆ.

ರಾಜ್ಯ ಸರಕಾರದಿಂದ ಈಗ ಸಂದೇಶ ರವಾನೆಯಾಗಿರುವುದರಿಂದ ಅವರ ಮುಂದಿನ ನಡೆಯನ್ನು ಕಾದು ನೋಡಬೇಕಿದೆ.

 

ಮಹಾರಾಷ್ಟ್ರ ಸಚಿವರ ಬೆಳಗಾವಿ ಭೇಟಿ ಹಠಾತ್ ಮುಂದೂಡಿಕೆ; ಕಾರಣ ಗೊತ್ತೇ?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button