ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಒಂದೆಡೆ ವಿಧಾನ ಮಂಡಲ ಅಧಿವೇಶನದ ಹಿನ್ನೆಲೆಯಲ್ಲಿ ಬೆಳಗಾವಿ ನಗರಕ್ಕೆ ಹೊಸ ಕಳೆ ಮೂಡಿದ್ದರೆ ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಬೀದಿಗಳು ‘ಬಣ್ಣದ ಬೆಳಕು’ ತುಂಬಿ ಕಂಗೊಳಿಸುತ್ತಿವೆ.
ಶಾಸಕ ಅಭಯ ಪಾಟೀಲ ಅವರ ಪ್ರಯತ್ನದಿಂದ ವರ್ಣಮಯ ಬೀದಿ ದೀಪಗಳನ್ನು ಅಳವಡಿಸುವ ಮೂಲಕ ರಾತ್ರಿ ವೇಳೆ ಬೀದಿಗಳೆಲ್ಲ ವಿದೇಶದ ನಗರಗಳಂತೆ ಗೋಚರಿಸುತ್ತಿವೆ.
ಈ ಕುರಿತು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಕ್ಷೇತ್ರದ ಶಾಮಪ್ರಸಾದ್ ಮುಖರ್ಜಿ ರಸ್ತೆಯ ಫೋಟೊ ಶೇರ್ ಮಾಡಿರುವ ಶಾಸಕ ಅಭಯ ಪಾಟೀಲ, “ಕ್ಷೇತ್ರದಲ್ಲಿ ಅಲಂಕೃತ ಬೀದಿ ದೀಪಗಳನ್ನು ಅಳವಡಿಸಿದ್ದೇನೆ. ಕ್ಷೇತ್ರದ ಶೇ. 60ಕ್ಕೂ ಹೆಚ್ಚು ಭಾಗದಲ್ಲಿ ಇವು ಅಳವಡಿಕೆಯಾಗಿವೆ. ಪ್ರತಿ ಬೀದಿಯಲ್ಲೂ ವಿಭಿನ್ನ ಮಾದರಿಯ ಬೀದಿ ದೀಪಗಳನ್ನು ಬಳಕೆ ಮಾಡಲಾಗಿದೆ. ದೇಶದ ಯಾವುದೇ ನಗರಗಳಲ್ಲೂ ಈ ರೀತಿಯ ಬೀದಿ ದೀಪಗಳ ಅಳವಡಿಕೆಯಾಗಿಲ್ಲ. ಶಾಮಪ್ರಸಾದ ಮುಖರ್ಜಿ ರಸ್ತೆಯಲ್ಲಿ ಇವುಗಳ ಉದ್ಘಾಟನೆ ನಡೆದಿದೆ,” ಎಂದು ತಿಳಿಸಿದ್ದಾರೆ.
ಅಭಯ ಪಾಟೀಲ ಅವರ ಈ ಪೋಸ್ಟ್ ಗೆ ಬಹುತೇಕ ಜನ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಕೆಲವರು ಇದು ಕೆಲದಿನಗಳ ಮಟ್ಟಿಗಾಗದೆ ನಿರಂತರ ಸುಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕೆಂಬ ಸಲಹೆ ನೀಡಿದ್ದಾರೆ.
“ಇವುಗಳು ಕಡಿಮೆ ಪ್ರಜ್ವಲಿಸುವಿಕೆಯೊಂದಿಗೆ ಮೃದುವಾದ ಬೆಳಕಿನ ವ್ಯವಸ್ಥೆಗಳಾಗಿವೆ ಎಂಬ ಅಂಶವನ್ನು ನಾನು ಇಷ್ಟಪಡುತ್ತೇನೆ. ಇದು ಕೀಟಗಳು ಮತ್ತು ರಾತ್ರಿ ಸಂಚರಿಸುವ ಪ್ರಾಣಿಗಳು ಮತ್ತು ಪಕ್ಷಿಗಳಿಗೆ ಉತ್ತಮವಾಗಿದೆ. ಅವುಗಳು ಪ್ರಖರವಾದ ಬೆಳಕಿನ ವ್ಯವಸ್ಥೆಯಲ್ಲಿ ಸಂಚಾರ ಸಾಮರ್ಥ್ಯ ಮತ್ತು ಜೀವನ ಚಕ್ರಗಳನ್ನು ಸಾಮಾನ್ಯವಾಗಿ ಕಳೆದುಕೊಳ್ಳುತ್ತವೆ,”ಎಂದು ಪರಿಸರ ತಜ್ಞರೊಬ್ಬರು ಪ್ರತಿಕ್ರಿಯಿಸಿದ್ದಾರೆ.
*ನಾವು ಹುಟ್ಟಿನಿಂದಲೇ ಹಿಂದುಗಳು, ಬಿಜೆಪಿಯವರಂತೆ ನಾಟಕೀಯ ಹಿಂದುತ್ವ ನಮ್ಮದಲ್ಲ ಎಂದ ಡಿ.ಕೆ. ಶಿವಕುಮಾರ್*
https://pragati.taskdun.com/belagavi-sessionsavarkar-photod-k-shivakumarcongress-protest/
*ನಾವು ಹುಟ್ಟಿನಿಂದಲೇ ಹಿಂದುಗಳು, ಬಿಜೆಪಿಯವರಂತೆ ನಾಟಕೀಯ ಹಿಂದುತ್ವ ನಮ್ಮದಲ್ಲ ಎಂದ ಡಿ.ಕೆ. ಶಿವಕುಮಾರ್*
https://pragati.taskdun.com/belagavi-sessionsavarkar-photod-k-shivakumarcongress-protest/
*ಬೆಳಗಾವಿಗೆ ನುಗ್ಗಲು ಯತ್ನ; ಮಹಾ ವಿಕಾಸ ಅಗಾಡಿ ಕಾರ್ಯಕರ್ತರನ್ನು ತದೆದ ಪೊಲೀಸರು*
https://pragati.taskdun.com/maha-vikasa-agadhiprotestbelagavimes-maha-melav/
*ಸುವರ್ಣಸೌಧದಲ್ಲಿ ಬಸವಣ್ಣ, ವೀರ ಸಾವರ್ಕರ್ ಸೇರಿ 7 ಮಹನೀಯರ ಫೋಟೋ ಅನಾವರಣ*
https://pragati.taskdun.com/belagavisuvarnavidhanasoudhasavarkar-photocm-basavaraj-bommaai/
*MES ಮಹಾಮೇಳಾವ್ ಗೆ ಬ್ರೇಕ್; ಪುಂಡಾಟಕ್ಕೆ ಖಾಕಿ ಗುನ್ನಾ*
https://pragati.taskdun.com/belagavimesmahamelavdsp-gadadireaction/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ