ಮುಷ್ಕರ ನಡೆಯುವುದು ಶತಸಿದ್ಧ; ವದಂತಿಗಳಿಗೆ ಕಿವಿಗೊಡದಿರಿ: ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: “ಬುಧವಾರದಿಂದ ಮುಷ್ಕರ ನಡೆಯುವುದು ಶತಸಿದ್ಧ. ಯಾವ ಕಾರಣಕ್ಕೂ ಮುಷ್ಕರ ಹಿಂಪಡೆಯುವ ಮಾತೇ ಇಲ್ಲ,ಈ ವಿಷಯದಲ್ಲಿ ರಾಜ್ಯ ಸರಕಾರಿ ನೌಕರರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು” ಎಂದು ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಕರೆ ನೀಡಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ಹಿರಿಯ ಅಧಿಕಾರಿಗಳೂ ಸೇರಿದಂತೆ ರಾಜ್ಯ ಸರಕಾರದ ಎಲ್ಲ ನೌಕರರು ಈ ಮುಷ್ಕರದಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಸರಕಾರಕ್ಕೆ ಬಿಸಿ ಮುಟ್ಟಿಸುವ ಕಾರ್ಯಕ್ಕೆ ಕೈ ಜೋಡಿಸಬೇಕು” ಎಂದು ಅವರು ಮನವಿ ಮಾಡಿದರು.
“ಬೇಡಿಕೆಗಳ ಈಡೇರಿಕೆ ಕುರಿತಂತೆ ಸರಕಾರದೊಂದಿಗೆ ಉನ್ನತ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಬೇಡಿಕೆ ಈಡೇರುವವರೆಗೆ ನಿರ್ಧಾರದಿಂದ ಹಿಂದಡಿ ಇಡುವ ಮಾತೇ ಉದ್ಭವಿಸುವುದಿಲ್ಲ.ಈ ವಿಷಯದಲ್ಲಿ ಹರಡಲಾಗುವ ಯಾವುದೇ ವದಂತಿಗಳನ್ನು ಸರಕಾರಿ ನೌಕರರು ನಂಬಬಾರದು” ಎಂದು ಅವರು ಹೇಳಿದರು.
“ಮುಷ್ಕರದ ಯಶಸ್ಸಿಗೆ ಎಲ್ಲ ರೀತಿಯಲ್ಲಿ ಶ್ರಮಿಸಲಾಗುತ್ತಿದ್ದು ಪ್ರಮುಖ ಎರಡೂ ಬೇಡಿಕೆಗಳನ್ನು ಸರಕಾರ ಈಡೇರಿಸುವವರೆಗೆ ಹೋರಾಟ ಮುಂದುವರಿಯಲಿದೆ” ಎಂದು ಅವರು ಹೇಳಿದ್ದಾರೆ. ಈ ಮೂಲಕ ಹೋರಾಟಕ್ಕೆ ಸಂಬಂಧಿಸಿದಂತೆ ಎಲ್ಲ ಜಿಜ್ಞಾಸೆಗಳಿಗೆ ಷಡಾಕ್ಷರಿ ಅವರು ತೆರೆ ಎಳೆದಿದ್ದಾರೆ.
*ನಾಳೆಯಿಂದಲೇ ಸರ್ಕಾರಿ ನೌಕರರ ಮುಷ್ಕರ; ಸಿಎಂ ಏನಂದ್ರು?*
https://pragati.taskdun.com/7th-pay-commissioninterim-reportcm-basavaraj-bommai/
ನಾಳೆಯಿಂದ ಸ್ಥಗಿತಗೊಳ್ಳಲಿವೆ ಸರಕಾರಿ ಸೇವೆಗಳು; ರಾಜ್ಯ ಸರಕಾರಿ ನೌಕರರ ಮುಷ್ಕರದ ಮಾರ್ಗಸೂಚಿ ಬಿಡುಗಡೆ
https://pragati.taskdun.com/government-services-to-be-suspended-from-tomorrow-release-of-guidelines-for-state-government-employees-strike/
ಮೂವರು ಮಹನೀಯರಿಗೆ ರಾಜ್ಯ ಸರಕಾರದ ಪ್ರತಿಷ್ಠಿತ ಪಂಪ ಪ್ರಶಸ್ತಿ ಘೋಷಣೆ
https://pragati.taskdun.com/announcement-of-the-prestigious-pampa-award-of-the-state-government-to-three-gentlemen/
ಡಬ್ಲ್ಯುಪಿಎಲ್‌ನಲ್ಲಿ ಗುಜರಾತ್ ಜೈಂಟ್ಸ್ ಮುನ್ನಡೆಸಲಿದ್ದಾರೆ ಆಸ್ಟ್ರೇಲಿಯಾದ ಬೆತ್ ಮೂನಿ
https://pragati.taskdun.com/australias-beth-mooney-will-lead-the-gujarat-giants-in-the-wpl/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ