Kannada NewsKarnataka NewsLatest
*ಅಯೋಧ್ಯಾ ಶ್ರೀರಾಮಮಂದಿರ ನಿರ್ಮಾಣದ ಹೋರಾಟದ ಹಾದಿ ಸುಗಮವಾಗಿರಲಿಲ್ಲ; ಪ್ರಹ್ಲಾದ ಜೋಶಿ*

ಅಯೋಧ್ಯಾ ಶ್ರೀರಾಮಮಂದಿರ ನಿರ್ಮಾಣದ ಹೋರಾಟದ ಹಾದಿ ಸುಗಮವಾಗಿರಲಿಲ್ಲವೆಂದು ಪ್ರಹ್ಲಾದ ಜೋಶಿ ತಮ್ಮ ಟ್ವಿಟರ್ ಖಾತೆಯಲ್ಲಿ ರಾಮಮಂದಿರದ ಬಗ್ಗೆ ಅನೇಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಭಾರತೀಯರ ಅಸ್ಮಿತೆ ಪ್ರಭು ಶ್ರೀರಾಮ ಹುಟ್ಟಿದ ಸ್ಥಳದಲ್ಲಿ ಆತನಿಗೆ ಸುಂದರ ಮಂದಿರ ನಿರ್ಮಿಸಲು ಬಲಿದಾನಗೈದ ಕರಸೇವಕರ ಸಂಖ್ಯೆ ಇಂದಿಗೂ ಲೆಕ್ಕಕ್ಕಿಲ್ಲ.
ನೂರಾರು ವರ್ಷಗಳ ಕಾಯುವಿಕೆ ಇಂದು ಅಂತ್ಯಗೊಂಡಿದೆ. ಮನೆ ಮಠ ಬಿಟ್ಟು ರಾಮನಿಗಾಗಿ ಹೋರಾಡಿದ ಭಕ್ತರಿಗೆ ಇಂದು ಜಯ ಸಿಕ್ಕಿದೆ.
ನಮ್ಮ ಸಂಕಲ್ಪ ಸತ್ಯದ ಪರ – ಧರ್ಮದ ಪರ ಇದ್ದಾಗ ಹಾದಿ ಎಷ್ಟೇ ಕಠಿಣವಿದ್ದರೂ ಸಂಕಲ್ಪ ಈಡೇರುತ್ತದೆ ಎಂಬುದಕ್ಕೆ ಅಯೋಧ್ಯಾ ಶ್ರೀರಾಮಮಂದಿರವೇ ಸಾಕ್ಷಿ.
ಧರ್ಮವನ್ನು ನಾವು ರಕ್ಷಿಸಿದಾಗ ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂಬ ಮಾತು ಯಾವತ್ತೂ ಸುಳ್ಳಾಗಲು ಸಾಧ್ಯವಿಲ್ಲ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ