Kannada NewsKarnataka News

ಕನ್ನಡ ಭಾವುಟ ಹಿಡಿದು ಡಾನ್ಸ್ ಮಾಡಿ ಥಳಿತಕ್ಕೊಳಗಾಗಿದ್ದ ವಿದ್ಯಾರ್ಥಿ ಮೇಲೆ ಪೊಲೀಸರಿಂದಲೂ ಅಮಾನುಷ ಹಲ್ಲೆ ಆರೋಪ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕನ್ನಡ ಭಾವುಟ ಹಿಡಿದು ಡಾನ್ಸ್ ಮಾಡಿದ್ದಕ್ಕೆ ಮರಾಠಿ ಭಾಷಿಕ ವಿದ್ಯರ್ಥಿಗಳಿಂದ ಹಲ್ಲೆಗೊಳಗಾಗಿರುವ ಬೆಳಗಾವಿಯ ಕಾಲೇಜು ವಿದ್ಯಾರ್ಥಿ ಮೇಲೆ ಪೊಲೀಸರು ಅಮಾನುಷವಾಗಿ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ. ಈ ಕುರಿತು ಜಿಲ್ಲಾ ಆಸ್ಪತ್ರೆಯಲ್ಲಿ ಎಂಎಲ್ ಸಿ ಮಾಡಲಾಗಿದೆ.

ಬುಧವಾರ ಸಂಜೆ ಕಾಲೇಜಿನಲ್ಲಿ ಕಾರ್ಯಕ್ರಮದ ವೇಳೆ ಕನ್ನಡ ಧ್ವಜ ಪ್ರದರ್ಶಿಸಲಾಯಿತು ಎನ್ನುವ ಕಾರಣಕ್ಕೆ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಲಾಗಿತ್ತು. ಈ ಕುರಿತು ಪೊಲೀಸರು ವಿವರಣೆ ಪಡೆಯುವ ನೆಪದಲ್ಲಿ ವಿದ್ಯಾರ್ಥಿಯನ್ನು ಟಿಳಕವಾಡಿ ಪೊಲೀಸ್ ಠಾಣೆಗೆ ಕರೆಸಿದ್ದರು. ಈ ವೇಳೆ ತನಗೆ ಪೊಲೀಸರು ಮನಬಂದಂತೆ ಥಳಿಸಿದ್ದಾರೆ. ಕನ್ನಡ ಧ್ವಜದ ಕುರಿತು ಅತ್ಯಂತ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ವಿದ್ಯಾರ್ಥಿ ಆರೋಪಿಸಿದ್ದಾನೆ.

ವಿದ್ಯಾರ್ಥಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಈ ಕುರಿತು ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಹಲ್ಲೆ ಮಾಡಲಾಗಿದೆ ಎಂದು ಎಂಎಲ್ ಸಿ ಮಾಡಲಾಗಿದೆ.

ಧ್ವಜ ಇದ್ದರೆ ಮನೆಯಲ್ಲಿ ಇಟ್ಟುಕೋ. ಕಾಲೇಜಲ್ಲಿ ಇಂತದ್ದೆಲ್ಲ ಮಾಡಬೇಡ. ನಿನ್ನ ಭವಿಷ್ಯ ಹಾಳಾಗಲಿದೆ. ಧ್ವಜವನ್ನು ನಿನ್ನ ಮಡಿಸಿ ನಿನ್ನ ಹಿಂಬದಿಗೆ ಹಾಕಿಕೋ ಎಂದು ಅಶ್ಲೀಲ ಪದ ಬಳಸಿ ಪೊಲೀಸ್ ಅಧಿಕಾರಿಯೋರ್ವರು ನಿಂದಿಸಿದ್ದಾರೆ ಎಂದು ವಿದ್ಯಾರ್ಥಿ ದೂರಿದ್ದಾನೆ.

ಸುಮಾರು 20ಕ್ಕೂ ಹೆಚ್ಚು ಬಾರಿ ಕೆನ್ನೆಯ ಮೇಲೆ ಭಾರಿಸಿದ್ದಾರೆ ಎಂದೂ ದೂರಿದ್ದಾನೆ.

ಬೆಳಗಾವಿ : ಕಾಲೇಜಿನಲ್ಲಿ ಭಾಷಾ ವಿವಾದ; ಕನ್ನಡ ಧ್ವಜ ಹಿಡಿದು ಡಾನ್ಸ್ ಮಾಡಿದ್ದಕ್ಕೆ ವಿದ್ಯಾರ್ಥಿಗೆ ಥಳಿತ

https://pragati.taskdun.com/belgaum-language-dispute-in-college-student-beaten-for-displaying-kannada-flag/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button