

ಪ್ರಗತಿವಾಹಿನಿ ಸುದ್ದಿ, ಹಾರೂಗೇರಿ: ದೇವಸ್ಥಾನಗಳಲ್ಲಿ ಕಳ್ಳತನ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿರುವ ಹಾರೂಗೇರಿ ಪೊಲೀಸರು 11.52 ಲಕ್ಷ ರೂ. ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ದಿನಾಂಕ 09/10/2024 ರಂದು ಅನೀಲ ಶಂಕರ ದತ್ತವಾಡೆ. ಸಾ.ಅಳಗವಾಡಿ, ತಾ.ರಾಯಬಾಗ, ಇವರು ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಕೊಟ್ಟಿದ್ದ ದೂರು ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದರು.

ಕಳ್ಳರು ದಿನಾಂಕ: 05/10/2024 ರಂದು 1 ಗಂಟೆಯಿಂದ 6 ಗಂಟೆಯ ನಡುವಿನ ವೇಳೆಯಲ್ಲಿ ಅಳಗವಾಡಿ ಗ್ರಾಮದ ಹುಣಸಿಕೋಡಿ ತೋಟದಲ್ಲಿರುವ ಏಳು ಮಕ್ಕಳ ತಾಯಿ ದೇವಸ್ಥಾನದ ಬಾಗಿಲಿಗೆ ಹಾಕಿದ್ದ ಕೀಲಿ ಮುರಿದು ಗುಡಿಯ ಒಳಗಡೆ ಹೊಕ್ಕು ದೇವರ ಮೈಮೇಲೆ ಇದ್ದ 1) ಗಂಟನ್ ಗುಳದಾಳಿ ಒಂದು 35 ಗ್ರಾಂ. ಅ.ಕಿ.1.26.000/-ರೂಪಾಯಿ. 2) ಬೋರಮಾಳ ಒಂದು 10 ಗ್ರಾಂ ಅಂದಾಜು ಕಿಮ್ಮತ್ತು 36,000/- . 3) ಸಣ್ಣ ಗುಳದಾಳಿ 10 ಗ್ರಾಂ, ಅಂದಾಜು ಕಿಮ್ಮತ್ತು 36,000/- . 4) ಕಿವಿಯಲ್ಲಿರುವ ಹೂವು ಮತ್ತು ಜುಮಕಿ 5 ಗ್ರಾಂ, ಅಂದಾಜು ಕಿಮ್ಮತ್ತು 18.000/- ರೂಪಾಯಿ. 5) ಬೆಳ್ಳಿ ಗುಂಡಗಡಿಗೆ ಒಂದು 6) ಬೆಳ್ಳಿ ಕಿರೀಟ. 7) ಬೆಳ್ಳಿ ಮೂಗುತಿ ಒಂದು ಒಟ್ಟು ಬೆಳ್ಳಿ ಒಡವೆಗಳ ಅಂದಾಜು ಮೌಲ್ಯ 14.000/- ರೂಪಾಯಿ. ಹೀಗೆ ಒಟ್ಟು 60 ಗ್ರಾಂ. ಅ.ಕಿ 2,16,000/- ರೂಪಾಯಿ ಕಿಮ್ಮತ್ತಿನ ಬಂಗಾರ ಮತ್ತು 14,000/- ರೂಪಾಯಿ ಕಿಮ್ಮತ್ತಿನ ಬೆಳ್ಳಿ ಒಡವೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ದೂರು ನೀಡಲಾಗಿತ್ತು.
ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿತ್ತು. ಎಸ್ಪಿ ಭೀಮಾಶಂಕರ ಗುಳೇದ ಮಾರ್ಗದರ್ಶನದಲ್ಲಿ ಹೆಚ್ಚುವರಿ ಎಸ್ಪಿಗಳಾದ ಶೃತಿ ಎನ್. ಎಸ್. ಹಾಗೂ ಆರ್. ಬಿ. ಬಸರಗಿ ಮತ್ತು ಜಿಎಸ್ಪಿ ಪ್ರಶಾಂತ ಮುನ್ನೋಳ್ಳಿ ಮಾರ್ಗದರ್ಶನದಲ್ಲಿ ರವಿಚಂದ್ರ ಡಿ. ಬಿ. ಸಿಪಿಐ ಹಾರೂಗೇರಿ ವೃತ್ತ ಮತ್ತು ಮಾಳಪ್ಪ ಪೂಜಾರಿ. ಪಿಎಸ್‌ಐ(ಕಾ&ಸು) ಹಾರೂಗೇರಿ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿ ತಂಡ ರಚನೆ ಮಾಡಲಾಗಿತ್ತು. ಪ್ರಕರಣವನ್ನು ಬೇದಿಸಿ 4 ಜನರನ್ನು ಬಂಧಿಸಿ ಅವರಿಂದ ಅಳಗವಾಡಿ, ಬಸ್ತವಾಡ, ಮುಗಳಖೋಡ, ಹಿಡಕಲ್, ಹಾರೂಗೇರಿ, ನಿಡಗುಂದಿ, ಮತ್ತು ಸತ್ತಿ ಗ್ರಾಮಗಳಲ್ಲಿಯ ಒಟ್ಟು 8 ದೇವಸ್ಥಾನಗಳಲ್ಲಿ ಕಳ್ಳತನ ಮಾಡಿರುವ 140.7 ಗ್ರಾಂ ಅ,ಕಿ 10,29,000/- ರೂ. ಬಂಗಾರ ಆಭರಣಗಳನ್ನು ಹಾಗೂ 43 ಗ್ರಾಂ ಅ,ಕಿ 3500/- ರೂ ಬೆಳ್ಳಿ ಆಭರಣಗಳನ್ನು ಹಾಗೂ ಕಳ್ಳತನ ಮಾಡಲು ಉಪಯೋಗಿಸಿದ ಹೊಂಡಾ ಯುನಿಕಾರ್ನ ಮೋಟಾರ್ ಸೈಕಲ್ ಅ.ಕಿ 1,20,000/- ರೂ ಕಿಮ್ಮತ್ತು.. ಹೀಗೆ ಒಟ್ಟು 11,52,500/- ರೂ ಕಿಮ್ಮತ್ತಿನ ಮಾಲನ್ನು ವಶಪಡಿಸಿಕೊಳ್ಳಲಾಗಿದೆ.
ಈ ಹಿಂದೆ ನಡೆದ ಅಳಗವಾಡಿ, ಬಸ್ತವಾಡ. ಮುಗಳಖೋಡ, ಹಿಡಕಲ್, ಹಾರೂಗೇರಿ. ನಿಡಗುಂದಿ. ಮತ್ತು ಸತ್ತಿ ಗ್ರಾಮಗಳಲ್ಲಿಯ ಒಟ್ಟು 8 ದೇವಸ್ಥಾನಗಳಲ್ಲಿ ಕಳ್ಳತನ ಮಾಡಿದ್ದೂ ಈ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ.
ತನಿಖಾ ತಂಡದ ನೇತೃತ್ವವನ್ನು ರವಿಚಂದ್ರ. ಡಿ. ಬಿ. ಸಿಪಿಐ ಹಾರೂಗೇರಿ ವೃತ್ತ ಮತ್ತು ಮಾಳಪ್ಪ ಪೂಜಾರಿ. ಪಿಎಸ್‌ಐ(ಕಾ&ಸು) ಹಾರೂಗೇರಿ ಪೊಲೀಸ್ ಠಾಣೆ, ಬಿ. ಎಲ್. ಹೊಸಟ್ಟಿ, ರಮೇಶ ಮುಂದಿನಮನಿ, ಎ. ಎಸ್. ಶಾಂಡಗೆ, ಪಿ. ಎಮ್. ಸಪ್ತಸಾಗರ, ಎಚ್. ಆರ್. ಅಂಬಿ, ಹಾರೂಗೇರಿ ಪೊಲೀಸ್ ಠಾಣೆ ಮತ್ತು ವಿನೋದ ಠಕ್ಕಣ್ಣವರ, ಟೆಕ್ನಿಕಲ್ ಸೇಲ್ ಪೊಲೀಸ್ ಅಧೀಕ್ಷಕರ ಕಛೇರಿ ಬೆಳಗಾವಿ ಇವರು ಕಾರ್ಯನಿರ್ವಹಿಸಿದ್ದು, ಪತ್ತೆ ಕಾರ್ಯ ನಿರ್ವಹಿಸಿದ ಎಲ್ಲ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯವನ್ನು ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ