Kannada NewsKarnataka NewsLatest

ಭೀಕರ ಅಪಘಾತ: ಯುವಕರಿಬ್ಬರ ದುರ್ಮರಣ

ಪ್ರಗತಿವಾಹಿನಿ ಸುದ್ದಿ,  ಕಬ್ಬೂರ – ಪಟ್ಟಣದ ಹೊರವಲಯದ ನಿಪ್ಪಾಣಿ- ಮುದೋಳ ರಾಜ್ಯ ಹೆದ್ದಾರಿ ೧೮ರ ಟೋಲ್ ನಾಕಾ ಬಳಿಯಲ್ಲಿ ಕಬ್ಬು ತುಂಬಿದ ಟ್ರ್ಯಾಕ್ಟರ್ ಮತ್ತು ಕಾರು ನಡುವೆ ಬೀಕರ ಅಫಘಾತವಾಗಿ ಇಬ್ಬರು ಯುವಕರು ಮೃತಪಟ್ಟಿದ್ದಾರೆ.

ಘಟನೆಯಲ್ಲಿ ಓರ್ವನಿಗೆ ಗಂಭಿರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಬುಧವಾರ ರಾತ್ರಿ ೭:೩೦ ಸಮಯದಲ್ಲಿ ನಡೆದಿದೆ.
ಕಬ್ಬೂರ ಪಟ್ಟಣದ ಉದಯ ಪಾಪು ಶಿವಾಯಗೋಳ(೨೩) ಸ್ಥಳದಲ್ಲಿ ಅಸುನಿಗಿದ್ದಾನೆ ಮತ್ತು ಚಾಲಕ ಮಾರುತಿ ನಾಗಪ್ಪ ಹುಲ್ಲೋಳಿ(೨೩) ಗಂಭಿರ ಗಾಯವಾಗಿ ಬೆಳಗಾವಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿರುತ್ತಾನೆ.

ಇನ್ನೋರ್ವ ವಿಶಾಲ ಭೀಮಪ್ಪ.ಕಾಂಬಳೆ ಈತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಬ್ಬೂರದ ಕಡೆಯಿಂದ ಟ್ರ್ಯಾಕ್ಟರ್ ಕಬ್ಬು ತುಂಬಿಕೊಂಡು ಚಿಕ್ಕೋಡಿಯ ಕಡೆಗೆ ಸಾಗುತ್ತಿದ್ದು ಕಬ್ಬೂರ ಪಟ್ಟಣದ ಯುವಕರು ಚಿಕ್ಕೋಡಿಯ ಕಡೆಗೆ ಕಾರಿನಲ್ಲಿ ಅತೀ ವೇಗವಾಗಿ ಮುಂದೆ ಸಾಗುತ್ತಿದ್ದ ಟ್ರ್ಯಾಕ್ಟರ್‌ನ್ನು ಓವರಟೆಕ್ ಮಾಡಲು ಹೋಗಿ ಹಿಂಬದಿಯ ಕಬ್ಬು ತುಂಬಿದ ಡಬ್ಬಿಗೆ ಗುದ್ದಿದ ಪರಿಣಾಮ ಈ ಅಪಘಾತ ಸಂಭವಿಸಿದೆ.  ಘಟನಾ ಸ್ಥಳಕ್ಕೆ ಪಿಎಸ್‌ಐ ಯಮನಪ್ಪ ಮಾಂಗ ಮತ್ತು ಸಿಪಿಐ ಆರ್.ಆರ್.ಪಾಟೀಲ ಭೇಟಿ ನೀಡಿ ಸ್ಥಳ ಪರಿಸಿಲಿಸಿ ಚಿಕ್ಕೋಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Home add -Advt

SHOCKING NEWS – ಕರ್ನಾಟಕಕ್ಕೆ ಒಮಿಕ್ರಾನ್ ಎಂಟ್ರಿ; ದೇಶದಲ್ಲೇ ಮೊದಲು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button