ಪ್ರಗತಿವಾಹಿನಿ ಸುದ್ದಿ, ಕಡಬ –
ಉಲ್ಲಾಸ್ ಡಿ.ಎಂ (8) ಬಾಲಕ ಮೃತಪಟ್ಟಿದ್ದಾನೆ. ಒಂದು ಸೀಬೆಹಣ್ಣಿನ ಆಸೆ ಬಾಲಕನ ಜೀವತೆಗೆದಿದೆ. ಶಾಲೆ ಮುಗಿಸಿ ಮನೆಗೆ ಬಂದ ಬಾಲಕನೊಬ್ಬ ಸೀಬೆ ಹಣ್ಣು ಕೀಳಲು ಮರ ಹತ್ತಿ ಕೆಳಗಡೆ ಬಿದ್ದು ಮೃತಪಟ್ಟ ಘಟನೆ ಕಡಬ ತಾಲೂಕಿನ ದೋಳ್ಪಾಡಿ ಬಳಿ ನಿನ್ನೆ ಸಂಜೆ ನಡೆದಿದೆ.
ಮೂರನೇ ತರಗತಿ ಓದುತ್ತಿದ್ದ ಉಲ್ಲಾಸ್, ಸೀಬೆಹಣ್ಣು ಕೊಯ್ಯಲು ಮರ ಹತ್ತಿದ್ದು, ಈ ವೇಳೆ ಅಯತಪ್ಪಿ ಕೆಳಕ್ಕೆ ಬಿದ್ದು ಮೃತಪಟ್ಟಿದ್ದಾನೆ. ಬಾಲಕನ ಮೃತದೇಹದ ಮರಣೋತ್ತರ ಪರೀಕ್ಷೆಯನ್ನ ಕಡಬ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಸಿ, ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕಸ್ಮಿಕವಾಗಿ ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಸಂಜೆ ಶಾಲೆಯಿಂದ ಬಂದ ಮಗ ಇನ್ನಿಲ್ಲ ಎಂಬ ಸಂಕಟ ಹೆತ್ತ ಕರುಳಿಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ