Belagavi NewsBelgaum NewsKannada NewsKarnataka News
*ಡಾ.ಶಿವಬಸವ ಮಹಾಸ್ವಾಮಿಗಳವರ ಜಯಂತಿ ಮಹೋತ್ಸವ: ನ. 29ರಿಂದ ವಚನದರ್ಶನ ಪ್ರವಚನ ಪ್ರಾರಂಭ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ; ನಾಗನೂರು ರುದ್ರಾಕ್ಷಿ ಮಠದ ಲಿಂಗೈಕ್ಯ ಡಾ. ಶಿವಬಸವ ಮಹಾಸ್ವಾಮಿಗಳವರ 136 ನೇ ಜಯಂತಿ ಮಹೋತ್ಸವದ ಪ್ರಯುಕ್ತ ಶನಿವಾರ ದಿನಾಂಕ 29 ರಿಂದ ಡಿಸೆಂಬರ್ 5 ರವರೆಗೆ ಪ್ರತಿ ದಿವಸ ಸಾಯಂಕಾಲ 6:00 ಗಂಟೆಗೆ ವಚನದರ್ಶನ ಪ್ರವಚನ ನಡೆಯಲಿದ್ದು, ಉದ್ಘಾಟನೆಯನ್ನು 29ರ ಸಂಜೆ ಆರು ಗಂಟೆಗೆ ರುದ್ರಾಕ್ಷಿ ಮಠದ ಆವರಣದಲ್ಲಿರುವ ಆರ್.ಎನ್. ಶೆಟ್ಟಿ ಪೊಲಿಟೆಕ್ನಿಕ್ ಕಾಲೇಜಿನ ಸಭಾಗ್ರಹದಲ್ಲಿ ನೆರವೇರಿಸಲಾಗುವುದು.
ಸಾನಿಧ್ಯವನ್ನು ಗುಳೇದಗುಡ್ಡ ಗುರುಸಿದ್ದೇಶ್ವರ ಬೃಹನ್ ಮಠದ ಜಗದ್ಗುರು ಶ್ರೀ .ಗುರುಸಿದ್ಧ ಪಟ್ಟದಾರ್ಯ ಮಹಾಸ್ವಾಮಿಗಳು ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಚೆನ್ನಮ್ಮನ ಕಿತ್ತೂರಿನ ರಾಜಗುರು ಸಂಸ್ಥಾನ ಕಲ್ಮಠದ ಶ್ರೀ. ಮಡಿವಾಳ ರಾಜ ಯೋಗಿಂದ್ರ ಮಹಾಸ್ವಾಮಿಗಳು ವಹಿಸಲಿದ್ದಾರೆ. ಪ್ರವಚನವನ್ನು ಮಮ್ಮಿಗಟ್ಟಿ ಬಸವ ಯೋಗಾಶ್ರಮದ ಶ್ರೀ. ಬಸವಾನಂದ ಮಹಾಸ್ವಾಮಿಗಳು ನಡೆಸಿಕೊಡಲಿದ್ದಾರೆ, ಇವರೊಂದಿಗೆ ಸಂಗೀತವನ್ನು ಗದಗ್ ವೀರೇಶ್ವರ ಪುಣ್ಯಾಶ್ರಮದ ವೀರೇಶ್ ಮಳಲಿ ಮತ್ತು ಸದಾಶಿವ ಹಿಪ್ಪರಗಿ ನೀಡಲಿದ್ದಾರೆ.

