*ಅನಾರೋಗ್ಯ ಪೀಡಿತ ಮಹಿಳೆಯನ್ನು ಅಮಗಾಂವ್ ಗ್ರಾಮದಿಂದ 10 ಕಿಮೀ ಹೊತ್ತು ತಂದ ಗ್ರಾಮಸ್ಥರು* * ವಿಡಿಯೋ ನೋಡಿ*
ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ತಾಲೂಕಿನ ಭೀಮಗಡ ಅರಣ್ಯ ವ್ಯಾಪ್ತಿಯ ದಟ್ಟ ಅರಣ್ಯ ಪ್ರದೇಶದಲ್ಲಿ ಅಮಗಾಂವ ಗ್ರಾಮದ ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗಿ ನರಳುತ್ತಿದ್ದ ೩೨ ವಯಸ್ಸಿನ ಮಹಿಳೆಯೊಬ್ಬರನ್ನು ಗ್ರಾಮದ ೧೦-೧೨ ಜನ ಸೇರಿ ಹೊತ್ತುಕೊಂಡು ಗ್ರಾಮದಿಂದ ೧೦ ಕಿಮೀ ದೂರದ ಮುಖ್ಯ ವಾಹಿನಿಯವರೆಗೆ ಕರೆತಂದು ಅಲ್ಲಿಂದ ಅಂಬ್ಯುಲನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದ ಘಟನೆ ಜರುಗಿದೆ.
ಖಾನಾಪುರ ತಾಲೂಕು ಅರಣ್ಯ ಮತ್ತು ಖನಿಜ ಸಂಪತ್ತಿನಿಂದ ಸುತ್ತುವರಿದ ಸಮೃದ್ಧ ತಾಲೂಕು ಎಂದು ಕರೆಯಲಾಗುತ್ತದೆ. ತಾಲೂಕಿನ ಅರಣ್ಯ ಪ್ರದೇಶ ಕ್ರೂರ ಮೃಗಗಳಿಂದ ಸುತ್ತುವರೆವುದರಿಂದ ಕಾನನದಂಚಿನ ಗ್ರಾಮಗಳ ಜನರ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಮಳೆಗಾಲದಲ್ಲಿ ಅವರ ಬದುಕು ಹೇಳತೀರದಂತಾಗುತ್ತದೆ. ಖಾನಾಪುರ ತಾಲೂಕಿನ ಹಲವು ಗ್ರಾಮಗಳು ಇಂದಿಗೂ ವಿವಿಧ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿವೆ. ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಮಹಿಳೆಗೆ ಚಿಕಿತ್ಸೆಗಾಗಿ ಹೊತ್ತುಕೊಂಡು ಹತ್ತಾರು ಕಿ.ಮೀ ದೂರ ಸಾಗಿಸುವ ಪರಿಸ್ಥಿತಿ ಇಂದಿಗೂ ಇರುವುದು ದುರ್ದೈವದ ಸಂಗತಿ. ಇದು ಖಾನಾಪುರ ತಾಲೂಕಿನ ಅರಣ್ಯ ಪ್ರದೇಶದಲ್ಲಿ 21ನೇ ಶತಮಾನದಲ್ಲಿ ನಡೆದ ದುರಂತದ ಕತೆ ಎಂದೇ ಕರೆಯಲಾಗುತ್ತದೆ.
ಖಾನಾಪುರ ತಾಲೂಕಿನ ಅತ್ಯಂತ ದುರ್ಗಮ ಭಾಗ ಮತ್ತು ಚಿರಾಪುಂಜಿಯ ನಂತರ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಎಂದು ಗುರುತಿಸಲ್ಪಡುವ ಅಮಗಾಂವ ಗ್ರಾಮಕ್ಕೆ ಸಾರಿಗೆ ಸೌಲಭ್ಯಗಳಿಲ್ಲ. ಆದರೆ ಇಲ್ಲಿನ ಜನರು ಪ್ರಕೃತಿಯೊಂದಿಗೆ ಹೊಂದಿಕೊಂಡು ಜೀವನ ನಡೆಸುತ್ತಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ