Kannada NewsKarnataka NewsLatestPolitics

ಪ್ರಧಾನಿ ಮೋದಿಯ ವಿಶ್ವಗುರು ಪರಿಕಲ್ಪನೆ ಸಾಕಾರದತ್ತ ಕೋರೆ

 

275 ಅಂಗ ಸಂಸ್ಥೆಗಳೊಂದಿಗೆ ಮುನ್ನಡೆಯುತ್ತಿರುವ ಈ ಸಂದರ್ಭದಲ್ಲಿ ಕೋರೆಯವರ ನೇತೃತ್ವದ 35 ವರ್ಷಗಳ ಸಾಧನೆಯನ್ನು ಅವಲೋಕಿಸಿದಾಗ ಅದಕ್ಕೂ ಮೊದಲಿನ 75 ವರ್ಷಗಳ ಸಾಧನೆಯ ತಕ್ಕಡಿಗಿಂತ ಸಾವಿರಪಟ್ಟು ಹೆಚ್ಚು ತೂಗುತ್ತದೆ.

-ಎಂ.ಕೆ.ಹೆಗಡೆ

ಕೃಷಿ, ಶಿಕ್ಷಣ, ಆರೋಗ್ಯ ಮತ್ತು ವಿಜ್ಞಾನ-ತಂತ್ರಜ್ಞಾನ ವೈಯಕ್ತಿಕ ಮತ್ತು ದೇಶದ ಮುನ್ನಡೆಯನ್ನು ಸಾಕಾರಗೊಳಿಸುವ ಪ್ರಧಾನ ಅಸ್ತ್ರಗಳು. ಪ್ರಧಾನಿ ನರೇಂದ್ರ ಮೋದಿ ಭಾರತವನ್ನು ವಿಶ್ವಗುರುವನ್ನಾಗಿಸುವ ಕನಸಿನೊಂದಿಗೆ ಹೆಜ್ಜೆ ಇಡುತ್ತಿರುವಾಗ ಅವರ ಕಲ್ಪನೆಯಲ್ಲಿ ಇವೆಲ್ಲ ಅಂಶಗಳು ಇದ್ದೇ ಇರುತ್ತವೆ, ಇರಲೇ ಬೇಕು.

ನರೇಂದ್ರ ಮೋದಿ ತಮ್ಮ ಮೊದಲ 5 ವರ್ಷದ ಅವಧಿಯನ್ನು ಪೂರ್ಣಗೊಳಿಸಿ ಎರಡನೇ ಅವಧಿಯಲ್ಲಿ ಮುಂದುವರಿಯುತ್ತಿದ್ದಾರೆ.  ಅವರ ಪ್ರತಿಯೊಂದು ನಿರ್ಣಯ, ಪ್ರತಿಯೊಂದು ಮಾತುಗಳನ್ನು ಗಮನಿಸಿದಾಗ ಕೃಷಿ, ಶಿಕ್ಷಣ, ಆರೋಗ್ಯ ಮತ್ತು ವಿಜ್ಞಾನ-ತಂತ್ರಜ್ಞಾನ ವಿಷಯಗಳನ್ನು ಹೊರತಾಗಿರುವುದನ್ನು ನೋಡಲು ಸಾಧ್ಯವಿಲ್ಲ.

ಈ ನಾಲ್ಕು ಅಂಶಗಳಿಗೆ ಆಧ್ಯತೆ ನೀಡಿದಾಗಲೇ ಭಾರತ ವಿಶ್ವಗುರುವಾಗಲು ಸಾಧ್ಯ, ದೇಶ ಪ್ರತಿಯೊಂದು ವಿಷಯದಲ್ಲಿ ಸ್ವಾವಲಂಬಿಯಾಗಲು ಸಾಧ್ಯ, ಆಂತರಿಕವಾಗಿ ಮತ್ತು ಜಾಗತಿಕವಾಗಿ ಎದ್ದು ನಿಲ್ಲಲು ಸಾಧ್ಯ ಎನ್ನುವ ಸ್ಪಷ್ಟ ಸಂದೇಶವನ್ನು ಮೋದಿ ಹಲವು ಬಾರಿ ನೀಡಿದ್ದಾರೆ.

ಮೋದಿಯವರ ಈ ನಾಲ್ಕು ಅಂಶಗಳ ಪರಿಕಲ್ಪನೆಯನ್ನು ಸಾಕಾರಗೊಳಿಸುವ ಮಹತ್ತರ ಹಾದಿಯಲ್ಲಿ ರಾಜ್ಯದ ಪ್ರತಿಷ್ಠಿತ ಸಂಸ್ಥೆ ಕೆಎಲ್ಇ ಈಗಾಗಲೆ ಸಾಕಷ್ಟು ಮುನ್ನಡೆದಿದೆ. ನೂರಾ ಒಂದು ವರ್ಷಗಳ ಹಿಂದೆ ಶಿಕ್ಷಣದ ಉದ್ದೇಶದಿಂದ ಕೆಎಲ್ಇ ಸಂಸ್ಥೆ ಸ್ಥಾಪನೆಯಾಗಿತ್ತು.

ಕಳೆದ 35 ವರ್ಷದಲ್ಲಿ ಕೇವಲ ಉದ್ದಗಲದಲ್ಲಷ್ಟೆ ಅಲ್ಲ, ಆಳದಲ್ಲೂ ಕೆಎಲ್ಇ ಸಂಸ್ಥೆ ಸಾಕಷ್ಟು ಬೆಳೆದಿದೆ.  ಹಾಗೆ ನೋಡಿದರೆ ಕೆಎಲ್ಇ ಸಂಸ್ಥೆಗೆ ರಾಜ್ಯ ಮಟ್ಟದಲ್ಲಿ, ರಾಷ್ಟ್ರಮಟ್ಟದಲ್ಲಿ, ವಿಶ್ವಮಟ್ಟದಲ್ಲಿ ಸಿಗಬೇಕಾದಷ್ಟು ಮಾನ್ಯತೆ, ಮನ್ನಣೆ ಸಿಗಲಿಲ್ಲವೆಂದೇ ಹೇಳಬೇಕು.

ಡಾ.ಪ್ರಭಾಕರ ಕೋರೆ ಅದರ ನೇತೃತ್ವ ವಹಿಸಿಕೊಂಡ ನಂತರ ಸಂಸ್ಥೆಯ ಧ್ಯೇಯೋದ್ಧೇಶವನ್ನು ಇನ್ನಷ್ಟು ವಿಸ್ತರಿಸುವ ಯೋಜನೆ ಹಾಕಿಕೊಂಡರು. 275 ಅಂಗ ಸಂಸ್ಥೆಗಳೊಂದಿಗೆ ಮುನ್ನಡೆಯುತ್ತಿರುವ ಈ ಸಂದರ್ಭದಲ್ಲಿ ಕೋರೆಯವರ ನೇತೃತ್ವದ 35 ವರ್ಷಗಳ ಸಾಧನೆಯನ್ನು ಅವಲೋಕಿಸಿದಾಗ ಅದಕ್ಕೂ ಮೊದಲಿನ 75 ವರ್ಷಗಳ ಸಾಧನೆಯ ತಕ್ಕಡಿಗಿಂತ ಸಾವಿರಪಟ್ಟು ಹೆಚ್ಚು ತೂಗುತ್ತದೆ.

ಶಿಕ್ಷಣದ ಜೊತೆ ಜೊತೆಗೇ ಆರೋಗ್ಯ, ಕೃಷಿ ಮತ್ತು ವಿಜ್ಞಾನ -ತಂತ್ರಜ್ಞಾನದಲ್ಲೂ ಕೆಎಲ್ಇ ಸಂಸ್ಥೆ ಅಮೋಘ ಸಾಧನೆ ಮಾಡಿ ಮುನ್ನಡೆಯುತ್ತಿದೆ. ಬೌದ್ಧಿಕ ವಿಷಯದಲ್ಲಿ ಮೇಕ್ ಇನ್ ಇಂಡಿಯಾ ಪರಿಕಲ್ಪನೆಯನ್ನು ಕೆಎಲ್ಇ ಸಂಸ್ಥೆ ಯಶಸ್ವಿಯಾಗಿ ಪರಿಕ್ರಮಿಸುತ್ತಿದೆ. ಈ ನಾಲ್ಕೂ ವಿಷಯಗಳಲ್ಲಿ ಭಾರತವನ್ನು ವಿಶ್ವಗುರುವನ್ನಾಗಿಸುವ ಕನಸಿಗೆ ಕೆಎಲ್ಇ ಸಂಸ್ಥೆಯ ಯೋಗದಾನ ಸಣ್ಣದಲ್ಲ.

ಕಳೆದ 35 ವರ್ಷದಲ್ಲಿ ಕೇವಲ ಉದ್ದಗಲದಲ್ಲಷ್ಟೆ ಅಲ್ಲ, ಆಳದಲ್ಲೂ ಕೆಎಲ್ಇ ಸಂಸ್ಥೆ ಸಾಕಷ್ಟು ಬೆಳೆದಿದೆ. ವಿಶ್ವದ ಬೇರೆಲ್ಲೇ ಇದ್ದಿದ್ದರೆ ಕೆಎಲ್ಇ ಸಂಸ್ಥೆ ಇಷ್ಟರಲ್ಲಿ ಜಾಗತಿಕ ಸಂಸ್ಥೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗುತ್ತಿತ್ತು. ಸಾವಿರಾರು ಪಿಎಚ್ ಡಿ ಪ್ರಬಂಧಗಳಿಗೆ ಆಹಾರವಾಗುತ್ತಿತ್ತು. ಹಾಗೆ ನೋಡಿದರೆ ಕೆಎಲ್ಇ ಸಂಸ್ಥೆಗೆ ರಾಜ್ಯ ಮಟ್ಟದಲ್ಲಿ, ರಾಷ್ಟ್ರಮಟ್ಟದಲ್ಲಿ, ವಿಶ್ವಮಟ್ಟದಲ್ಲಿ ಸಿಗಬೇಕಾದಷ್ಟು ಮಾನ್ಯತೆ, ಮನ್ನಣೆ ಸಿಗಲಿಲ್ಲವೆಂದೇ ಹೇಳಬೇಕು.

([email protected], 8197712235)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button